ಬೈಕ್ ಪ್ರಿಯರ ನೆಚ್ಚಿನ ಬ್ರಾಂಡ್ ಅಷ್ಟೇ ಅಲ್ಲದೆ ಒಂದು ಎಮೋಷನ್ ಆಗಿರುವ Hero Motocorf ಭಾರತೀಯರಿಗೆ ಹೊಸ ಸ್ಟೈಲಿಶ್ ಬೈಕ್ ಅನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. Harley Davidson ಹಾಗೂ Hero ಕಂಪನಿ ಸೇರಿ ಈ ಬೈಕ್ ಅನ್ನು ತಯಾರಿಸಿದ್ದಾರೆ. ಹೀರೊ ಮೋಟೋಕಾರ್ಫ್ ಬೈಕಿನ ಅಭಿಮಾನಿ ಆಗಿರುವವರಿಗೆ ಒಂದು ಉತ್ತಮ ಚಾಯ್ಸ್ ಸಿಕ್ಕಿರುವುದು ಸುಳ್ಳಲ್ಲ.
ಅದರಲ್ಲೂ ನೀವು ಹೀರೋ ಮೋಟಾಕಾರ್ಫನಾ ಫ್ಯಾನ್ ಆಗಿ ಬೈಕ್ ಖರೀದಿಸಲು ಯೋಚಿಸುತ್ತಿದ್ದರೆ ಈ ಮಾಹಿತಿ ನಿಮಗಾಗಿ.
ಬಿಡುಗಡೆಗೂ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಹೈಪ್ ಉಂಟು ಮಾಡಿರುವ ಹೀರೋ ಮವ್ರಿಕ್ 440 ಇಲ್ಲಿಯವರೆಗೆ ಲಾಂಚ್ ಆಗಿರುವ ಹೀರೋ ಬೈಕ್ ಅವುಗಳಲ್ಲಿ ಹೆಚ್ಚು ಶಕ್ತಿಶಾಲಿ ಬೈಕ್ ಆಗಿದೆ. 440 ಸಿಸಿ ಹೊಂದಿರುವ Hero Mavrick 440 ಇನ್ನಿತರ ಬೈಕ್ ಬ್ರಾಂಡ್ ಅವುಗಳಿಗೆ ಠಕ್ಕರ್ ಕೊಡುವುದರಲ್ಲಿ ಅನುಮಾನವಿಲ್ಲ ಎನ್ನಿಸುತ್ತದೆ. ಏಕೆಂದರೆ ಎಲ್ಲಾ ಕಡೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ಬೈಕ್ ರಾಯಲ್ ಎಂಫಿಎಲ್ಡ್ ಬೈಕಿಗೆ ಎದುರಾಳಿ ಆಗಿರಲಿದೆ ಎನ್ನಲಾಗುತ್ತಿದೆ.
Hero Mavrick 440 Launch Date:
ಇಷ್ಟೆಲ್ಲ ಹೈಫ್ ಕ್ರಿಯೇಟ್ ಮಾಡಿರುವ Hero Mavrick 440 launch date (ಬಿಡುಗಡೆ ದಿನಾಂಕ) ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಿಕ್ಕಿರುವ ಮಾಹಿತಿ ಪ್ರಕಾರ Hero Mavrick 440 launch date in India ಇದೆ ತಿಂಗಳು ಜನವರಿ 23 ಎಂದು ಹೇಳಲಾಗಿದೆ.
Hero Mavrick 440 Engine :
ಈಗಾಗಲೇ ಹೇಳಿದ ಹಾಗೆ 440 ಸಿಸಿ ಸಿಂಗಲ್ ಸಿಲಿಯೆಂಡರ್ ಕೂಲ್ಡ್ ಇಂಜಿನ್ ಹೊಂದಿರುವ Hero Mavrick 440 ಬೈಕಿನ ಇಂಜಿನ್ ಅತ್ಯಂತ ಶಕ್ತಿಶಾಲಿಯಾಗಿದೆ. ಇದರಲ್ಲಿ 27 bhp ಪವರ್ ಹಾಗೂ 38 nm ಟಾರ್ಕ್ ಜನರೇಟ್ ಮಾಡಬಹುದಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಹೀರೋ ಮಾವ್ರಿಕ್ ಅನ್ನು Honda CB300, Royal Enfield Bullet 350 ಬ್ರಾಂಡ್ ಅವುಗಳಿಗೆ ಎದುರಾಳಿಯಾಗಿದೆ ಎನ್ನಲಾಗುತ್ತಿದೆ.
Hero Mavrick 440 Features :
ಸಿಕ್ಕಿರುವ ಮಾಹಿತಿ ಪ್ರಕಾರ ಭಾರತದ ರಸ್ತೆಗಳಲ್ಲಿ ಪರೀಕ್ಷಾರ್ಥವಾಗಿ ಓಡಾಟ ನಡೆಸುವಾಗ ಹಲವರ ಕಣ್ಣಿಗೆ ಬಿದ್ದಿದೆ. ಅವರ ಪ್ರಕಾರ ಈ ಬೈಕಿನ ಡಿಸೈನ್ ಹಾರ್ಲಿ ಡೆವಿಡ್ಸನ್ X440ಗಿಂತ ಬೇರೆಯದಾಗಿದೆ.
6 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ Hero Mavrick 440 ಬೈಕ್ ಗೆ ತಕ್ಕಂತೆ ಹಿಂದಿನ ಮಾಡೆಲ್ ಅವುಗಳಿಗಿಂತ ಹಲವಾರು ಬದಲಾವಣೆಯನ್ನ ಮಾಡಲಾಗಿದೆ.
ಈ ಮೋಟಾರ್ ಬೈಕಿಗೆ ನಮ್ಮ ಸ್ಮಾರ್ಟ್-ಫೋನ್ ಮೂಲಕ ಬ್ಲೂಟ್ಯೂಟ್ ಕನೆಕ್ಟ್ ಮಾಡಬಹುದಾಗಿದೆ. ಅದರ ಜೊತೆಗೆ ಇತರ ಕನೆಕ್ಟ್ ಫೀಚರ್ಸ್ ಅನ್ನು ಬಳಸಬಹುದಾಗಿದೆ.ಈ ಮೂಲಕ ಶಕ್ತಿಶಾಲಿ ಇಂಜಿನ್ ಅಷ್ಟೇ ಅಲ್ಲದೆ ಇದರಲ್ಲಿ ಹೈಟೆಕ್ ಫೀಚರ್ಸ್ ಸಹ ಇದೆ.
Hero Mavrick 440 Price :
ಕೊನೆಯದಾಗಿ Hero Mavrick 440 price ಬಗ್ಗೆ ಹೇಳುವುದಾದರೆ, ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಅನ್ಯ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಇದರ ಬೆಲೆ ಸುಮಾರು 2 ಲಕ್ಷ ರೂಪಾಯಿ ಇರಬಹುದು ಎಂದು ಹೇಳಲಾಗುತ್ತಿದೆ. ಇದರ ಇಂಜಿನ್ ಕೆಪ್ಯಾಸಿಟಿ ಹಾಗೂ ಇನ್ನಿತರ ಫೀಚರ್ಸ್ ಅನ್ನು ನೋಡುವಾಗ ಸಹ ಇದರ ಬೆಲೆ ಅದೇ ರೇಂಜಿಗೆ ಬರುವ ಸಾಧ್ಯತೆ ಇದೆ.