______ Redmi Note Pro Plus 5G
ಮೊಬೈಲ್ ಬಳಕೆದಾರರಿಗೆ ಹಾಗೂ ಹೊಸ ಮೊಬೈಲ್ ಕೊಳ್ಳಲು ತಯಾರಿ ನಡೆಸುತ್ತಿರುವವರಿಗೆ ರೆಡ್ಮಿ ಕಡೆಯಿಂದ ಸಂತೋಷಕರ ಸುದ್ದಿ ಬಂದಿದೆ. ಅದೇನೆಂದರೆ Xiaomi redmi note 13 Pro plus in India ದಲ್ಲಿ ಲಾಂಚ್ ಆಗುವ ಮೂಲಕ ಎಲ್ಲರ ಗಮನ ಸೆಳೆದಿದೆ. ಉತ್ತಮ ಲುಕ್ ಹಾಗೂ ಸ್ಟೈಲಿಶ್ ಆಗಿರೋ ಈ ಮೊಬೈಲ್ ಹೆಚ್ಚಿನ ಫೀಚರ್ಸ್ ಅನ್ನು ಸಹ ಹೊಂದಿದೆ. ಮೊಬೈಲನ್ನು ಕೊಳ್ಳುವ ಯೋಚನೆಯಲ್ಲಿದ್ದರೆ ಒಮ್ಮೆ ಇದನ್ನು ಓದಿ.
Xiaomi Redmi Note 13 Pro Plus Launch Date in India :
Xiaomi redmi note 13 Pro plus (ಶವಮಿ ರೆಡ್ಮಿ ನೋಟ್ 13 ಪ್ರೊ ಪ್ಲಸ್)ಗಾಗಿ ಇನ್ನು ಎಷ್ಟು ದಿವಸ ಕಾಯಬೇಕು ಎಂಬ ಚಿಂತೆ ನಿಮಗೆ ಬೇಡ. Xiaomi redmi note 13 Pro Plus launch date in India ದಲ್ಲಿ ಅನೌನ್ಸ್ ಆಗಿ, ಬಿಡುಗಡೆ ಸಹ ಆಗಿದೆ. ಹೌದು, ನೀವು ಸರಿಯಾಗಿ ಓದಿದ್ದೀರಿ. ಇದು 10/01/2024ರಂದು ಭಾರತದಲ್ಲಿ ಬಿಡುಗಡೆಯಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿದೆ.
Xiaomi Redmi Note 13 Pro Plus Camera :
ಮೊಬೈಲ್ ಎಂದರೆ ಕ್ಯಾಮೆರಾ ಚೆನ್ನಾಗಿಲ್ಲದಿದ್ದರೆ ಆಗುತ್ತದಾ? ಆದರೆ ಇಲ್ಲಿ ನೀವು ಚಿಂತೆ ಮಾಡೋ ಅವಶ್ಯಕತೆ ಇಲ್ಲ ಅನ್ಸುತ್ತೆ. ಏಕೆಂದರೆ ತ್ರಿಬಲ್ ಕ್ಯಾಮೆರಾ ಹೊಂದಿರುವ Xiomi redmi note 13 Pro Plus, 200ಎಂಪಿ ಅಲ್ಟ್ರಾ ಹೈ ರೇಸ್ ಕ್ಯಾಮೆರಾ + 8ಎಂಪಿ ಅಲ್ಟ್ರಾ ವೈಡ್ ಆಂಗಲ್ + 2ಎಂಪಿ ಮ್ಯಾಕ್ರೋ ಕ್ಯಾಮೆರಾ ಹೊಂದಿದ್ದು ಉತ್ತಮ ಕ್ವಾಲಿಟಿ ಫೋಟೋವನ್ನು ತೆಗೆಯಬಹುದಾಗಿದೆ. ಇನ್ನೂ ಫ್ರಂಟ್ ಕ್ಯಾಮೆರಾ ಬಗ್ಗೆ ಹೇಳೋದಾದರೆ 16 ಎಂಪಿ ಸೆಲ್ಫಿ ಕ್ಯಾಮೆರಾದಿಂದ ಉತ್ತಮ ಸೆಲ್ಫಿ ಫೋಟೋ ತೆಗೆದುಕೊಳ್ಳಬಹುದು. ಇದು MediaTek Dimensity 7200-Ultra ಪ್ರೋಸೆಸ್ಸೇರ್ ಅನ್ನು ಹೊಂದಿದೆ. ಜೊತೆಗೆ Dual Stereo ಸ್ಪೀಕರ್ಸ್ ಹೊಂದಿದೆ.
ಇನ್ನೂ Xiaomi Redmi Note 13 Pro Plus ಬಗ್ಗೆ ಹೇಳಬೇಕೆಂದರೆ, ಈ ಮೊಬೈಲ್ ವಾಟರ್ ಫ್ರೂಫ್ ಹಾಗೂ ಡಸ್ಟ್ (ಧೂಳು) ಪ್ರೂಫ್ ಆಗಿದೆ. 204.5ಗ್ರಾಂ ಅಷ್ಟೇ ತೂಕವಿರುವ ಈ ಮೊಬೈಲ್ ಲೈಟ್ ವೆಯಿಟ್ ಮೊಬೈಲ್ ಎನ್ನಿಸಿಕೊಂಡಿದೆ. ಭಾರತದಲ್ಲಿ 5Gಗೆ ಸಪೋರ್ಟ್ ಸಹ ಇರುವುದರಿಂದ ಹೈ ನೆಟ್ವರ್ಕ್ ಸ್ಪೀಡ್ ಅನ್ನು ನೀವು ಎಂಜಾಯ್ ಮಾಡಬಹುದು.
Xiomi Redmi Note 13 Pro Plus Specification: ಹೇಗಿರಲಿದೆ? ಏನೆಲ್ಲಾ ಫೀಚರ್ಸ್ ಇದರಲ್ಲಿದೆ?
ಎಲ್ಲರೂ ಅಂದುಕೊಂಡಂತೆ Xiaomi Redmi Note 13 Pro Plus specification ಅದ್ಭುತವಾಗಿದೆ. Amoled ಡಿಸ್ಪ್ಲೇ ಹೊಂದಿರುವ ಈ ಮೊಬೈಲ್ ಸ್ಕ್ರೀನ್ ಸೈಜ್ 6.67 ಇಂಚೆಸ್ ಇದೆ.
Amoled display ಇರುವುದರಿಂದ ನೀವು ಮೊಬೈಲ್ ನಲ್ಲಿ ಹೈ ಕ್ವಾಲಿಟಿ ವಿಡಿಯೋವನ್ನು ಹೆಚ್ಚು ಅದ್ಭುತವಾಗಿ, ಕಲರ್ಫುಲ್ ಆಗಿ ನೋಡಬಹುದು.
5,000 mAh ಬ್ಯಾಟರಿ ಹೊಂದಿರುವುದರಿಂದ ಮೊಬೈಲನ್ನು ನಾವು ತುಂಬಾ ಹೊತ್ತು ಬಳಸಬಹುದಾಗಿದೆ. ಅಷ್ಟೇ ಅಲ್ಲದೆ 120 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಟೈಪ್ ಸಿ ಚಾರ್ಜರ್ ಲಭ್ಯವಿದೆ. ಇದರಿಂದಾಗಿ ನಾವು 19 ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಬಹುದು. ಜೊತೆಗೆ 8 GB RAM ಹಾಗೂ 120Hz ರಿಪ್ರೆಶ್ ರೇಟ್ ಇರುವುದರಿಂದ ಮೊಬೈಲ್ ಹ್ಯಾಂಗ್ (ಸ್ಟ್ರಕ್ ) ಆಗೋ ಸಮಸ್ಯೆ ಕಡಿಮೆ. ಇದರಿಂದಾಗಿ ಗೇಮ್ಸ್ ಆಡಲು ಹಾಗೂ ತುಂಬಾ ಆಪ್ಸ್ ಬಳಸಲು ಸಹಾಯಕವಾಗುತ್ತದೆ. ಇಷ್ಟೇ ಅಲ್ಲದೆ ಇನ್ನಷ್ಟು ಫೀಚರ್ಸ್ ಕೆಳಗಡೆ ಟೇಬಲ್ ನಲ್ಲಿ ಕೊಟ್ಟಿದ್ದೇವೆ. ಒಮ್ಮೆ ನೋಡಿ ಹೇಗಿದೆ ಅಂತ.
Feature | Specification |
---|---|
RAM | 8 GB |
Processor | MediaTek Dimensity 7200 Ultra |
Rear Camera | 200 MP + 8 MP + 2 MP |
Front Camera | 16 MP |
Battery | 5000 mAh |
Fast Charging | 120 W |
Network | 5G, 4G, 3G, 2G |
Display Size | 6.67 inches (16.94 cm) |
Display Type | Amoled |
Resolution | 1220 x 2712 pixels |
Screen Protection | Gorilla Glass or Glass Victus (not specified) |
Refresh Rate | 120 Hertz |
Screen-to-Body Ratio | 93.35% |
Aspect Ratio | 20.9% |
Fingerprint | On-screen |
Height | 161.4 mm |
Width | 74.22 mm |
Thickness | 8.9 mm |
Weight | 204.5 grams |
Waterproof/Dustproof | Yes |
Flash | Dual-color LED Flash |
SIM | Nano Dual SIM |
Colors | Fusion White, Fusion Purple, Fusion Black |
Xiaomi Redmi Note 13 Pro Plus Price :
ಮೊಬೈಲ್ ಬಿಡುಗಡೆಯಾಗುತ್ತಲೇ ಇದರ ಬೆಲೆ ಎಷ್ಟು ತುಂಬಾ ಜಾಸ್ತಿಯಾ? ಅಥವಾ ಕಡಿಮೆಯಾ? ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಜೊತೆಗೆ ಇದನ್ನು ನಾವು ಎಲ್ಲಿ ಪರ್ಚೇಸ್ ಮಾಡಬಹುದು ಎಂಬ ಗೊಂದಲ ಸಹ ನಿಮಗಿರಬಹುದು. ಇದಕ್ಕೆಲ್ಲ ಉತ್ತರ ಇಲ್ಲಿದೆ.
Redmi ಕಂಪನಿಯೂ ತಮ್ಮ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಮೊಬೈಲ್ ಕೊಡುವಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಆದರೆ ಇಲ್ಲಿ Xiomi redmi note 13 Pro Plus Price ಅದರ ಫೀಚರ್ಸ್ ನ ಮೇಲೆ ಡಿಫೆಂಡ್ ಆಗಿದೆ. ಏಕೆಂದರೆ ಇದರ ಫೀಚರ್ಸ್ ಸಹ ತುಂಬಾ ಚೆನ್ನಾಗಿರುವುದರಿಂದ ಮೊಬೈಲ್ ನಿಮಗೆ ದುಬಾರಿ ಅಂತ ಎನ್ನಿಸಲುಬಹುದು. ಅದೇನೇ ಇರಲಿ ನಿಮ್ಮ ಬಜೆಟ್ ಅದಕ್ಕೆ ತಕ್ಕಂತೆ ಇದ್ದರೆ ನೀವು ಖರೀದಿಸಬಹುದು.
Xiomi redmi note 13 Pro Plus Price in India ₹31,999/- ನಿಗದಿಯದಿದೆ ಇದು mi stores ನಲ್ಲಿ flipkart ನಲ್ಲಿ ಇದರ ಬೆಲೆ ನಿಗದಿಯಾಗಿದೆ.
ಏನೇ ಆಗಲಿ ಮೊದಲೆಲ್ಲ ಕಡಿಮೆ ಬೆಲೆಗೆ ಒಳ್ಳೆಯ ಸ್ಮಾರ್ಟ್ ಫೋನ್ ತೆಗೆದುಕೊಳ್ಳಲು ಯೋಚಿಸಿದಾಗ ರೆಡ್ಮಿ ಮೊಬೈಲ್ ಮೊದಲು ನೆನಪಿಗೆ ಬರುತಿತ್ತು. ಹಾಗೆ ಯೋಚಿಸುತ್ತ ನೋಡಿದರೆ ನಿಮಗೆ ತುಂಬಾ ದುಬಾರಿ ಅನ್ನಿಸುವುದರಲ್ಲಿ ಅನುಮಾನವಿಲ್ಲ. ಆದರೆ ಮೊದಲೆಲ್ಲ ಕೇವಲ ಪ್ರೋಸೆಸ್ಸೇರ್ ಮೇಲೆ ಹೆಚ್ಚು ಗಮನ ಕೊಡುತ್ತಿ ರೆಡ್ಮಿ, ಈಗ ಲುಕ್ ಹಾಗೂ ಸ್ಟೈಲಿಶ್ ಲುಕ್ ಕಡೆ ಸಹ ಗಮನಕೊಟ್ಟು ಮೊಬೈಲ್ ಬಿಡುಗಡೆಗೊಳಿಸಿದೆ.