Oneplus 12 : 50MP + 48MP + 64MP ಕ್ಯಾಮೆರಾ!

Oneplus12
______Oneplus12

ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಮೊಬೈಲ್ ಬ್ರಾಂಡ್ ಗಳಲ್ಲಿ Oneplus ಸಹ ಒಂದು. ತುಂಬ ಕಡಿಮೆಯೂ ಅಲ್ಲ ತುಂಬ ಹೆಚ್ಚು ಸಹ ಅಲ್ಲವೆಂಬಂತೆ ಮೊಬೈಲನ್ನು ಹೆಚ್ಚಾಗಿ ₹20,000 ರಿಂದ ₹30,000 ಆಸುಪಾಸಿನಲ್ಲಿ ಹೆಚ್ಚಾಗಿ ಮಾರುಕಟ್ಟೆಗೆ ತರುವುದು ಒನ್ ಪ್ಲಸ್ ರೂಢಿಯಾಗಿದೆ. ಈ ಬಾರಿ ಒನ್ ಪ್ಲಸ್ 12 ಲಾಂಚ್ ಮಾಡಿ ಈ ರೂಡಿಯನ್ನು ಮುಂದುವರಿಸಿಕೊಂಡು ಹೋಗಿದೆಯೋ? ಇಲ್ಲವೋ? ಎನ್ನುವುದನ್ನ ನಾವಿಲ್ಲಿ ನೋಡೋಣ.

Oneplus 12 Launch Date:

ಕ್ಯಾಮೆರಾ ಕ್ವಾಲಿಟಿಯಲ್ಲಿ ಅತ್ಯುತ್ತಮವಾಗಿ ಪರ್ಫಾರ್ಮ್ ಮಾಡುವ Oneplus 12 ಮೊಬೈಲ್ ಲಾಂಚಿಗೆ ಸಿದ್ಧವಾಗುತ್ತಿದೆ. ಹೌದು ಇದೇ ತಿಂಗಳ ಅಂದರೆ ಜನವರಿ 23 ರಂದು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗುತ್ತದೆ. ಇದಕ್ಕಾಗಿ ಕುತೂಹಲದಿಂದ ಕಾಯುತ್ತಿರುವವರು ಇದನ್ನು ಆದಷ್ಟು ಬೇಗ ಖರೀದಿಸಲು ಯೋಚಿಸುತ್ತಿದ್ದಾರೆ.

Oneplus 12 Camera :

ಆಗಲೇ ಹೇಳಿದ ಹಾಗೆ ಉತ್ತಮ ಕ್ವಾಲಿಟಿಯ ಕ್ಯಾಮೆರಾವನ್ನು ಒನ್ ಪ್ಲಸ್ 12 ಹೊಂದಿದೆ. 50MP + 48MP + 64MP ತ್ರಿಬಲ್ ರೇರ್ ಕ್ಯಾಮೆರಾವನ್ನು ಹೊಂದಿದ್ದು, ಇದರ ಕ್ಯಾಮರಾ ಜಬರ್ದಸ್ತ್ ಆಗಿದೆ. ಜೊತೆಗೆ 32MP ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

1. 50MP ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾ ವನ್ನು ಹೊಂದಿದ್ದು, ಇದರ ಫೋಕಲ್ ಲೆಂಥ್ 23mm ಹಾಗೂ ಸೆನ್ಸರ್ ಸೈಜ್ 1.4 ಆಗಿದೆ.

2. 48MP ಅಲ್ಟ್ರಾ ವೈಡ್ ಆನ್ಗಲ್ ಸೆಕೆಂಡರಿ ಕ್ಯಾಮೆರಾವನ್ನು ಹೊಂದಿದ್ದು ಇದರ ಫೋಕಲ್ ಲೆಂತ್ 14mm ಹಾಗೂ ಸೆನ್ಸರ್ ಸೈಜ್ 2 ಆಗಿದೆ.

3. 64MP ಟೆಲಿಫೋಟೋ ಟೆರಿಟರಿ ಕ್ಯಾಮೆರಾವನ್ನು ಹೊಂದಿದ್ದು ಇದರ ಫೋಕಲ್ ಲೆಂತ್ 70mm ಆಗಿದ್ದು ಹಾಗೂ ಇದರ ಸೆನ್ಸರ್ ಸೈಜ್ 2 ಆಗಿದೆ. ಜೊತೆಗೆ ಇದರಲ್ಲಿ ಅಪ್-ಟು 3X ಒಫ್ಟಿಕಲ್ ಜೂಮ್ ಒಪ್ಶನ್ ಇದೆ.

ಇನ್ನೂ ಫ್ರೆಂಡ್ ಕ್ಯಾಮೆರಾದ ಬಗ್ಗೆ ಹೇಳುವುದಾದರೆ ಇದರಲ್ಲಿ 32MP ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾ ಇದ್ದು ಇದರ ಫೋಕಲ್ ಲೆಂತ್ 21 mm ಆಗಿದೆ.

ಕಾಯಿ ಕ್ವಾಲಿಟಿ ವಿಡಿಯೋ ರೆಕಾರ್ಡಿಂಗ್ ಜೊತೆಗೆ ಹೈ ಕ್ವಾಲಿಟಿ ಸೆಲ್ಫಿ ಅಥವ ಫೋಟೋವನ್ನು ತೆಗೆಯಲು ಈ ಮೊಬೈಲ್ ಹೆಚ್ಚು ಸೂಕ್ತವಾಗಿದೆ.

One Plus 12 Specification:

ಇನ್ನೂ Oneplus 12 Specification ಬಗ್ಗೆ ಮಾತಾಡುವುದಾದರೆ ಇದರಲ್ಲಿ ಕೇವಲ ಕ್ಯಾಮರಾ ಕ್ವಾಲಿಟಿ ಉತ್ತಮವಾಗಿರುವುದಲ್ಲದೆ ಇನ್ನು ಅನೇಕ ಸ್ಪೆಸಿಫಿಕೇಶನ್ ಅತ್ಯುತ್ತಮ ಮಟ್ಟದಾಗಿದೆ.

FeatureSpecification
RAM12 GB
Internal Memory (ROM)256 GB
Battery5400 mAh
Fast Charging100W
Front Camera50 MP + 48 MP + 64 MP
FlashDual LED Flash
Front Camera32 MP
Refresh Rate120Hz
ProcessorQualcomm Snapdragon 8 Gen 3
Display Size6.82 inches (17.32 cm)
Display TypeAMOLED
Resolution1440 x 3168 pixels
Aspect Ratio20:9
Screen to Body Ratio93.5%
Height164.3 mm
Width75.8 mm
Thickness9.1 mm
Weight220 grams
Build MaterialBack: Gorilla Glass
ColorsSilver, Deep Black, Green
WaterproofYes
RuggednessDustproof
Fingerprint LockOn-screen

ಲಿ-ಪೋಲಿಮರ್ (Li-Polymer) ಬ್ಯಾಟರಿ ಹೊಂದಿರುವ ಒನ್ ಪ್ಲಸ್ 12 ಮೊಬೈಲ್ ಭರ್ಜರಿ 5400 mAh ಬ್ಯಾಟರಿ ಕೆಪ್ಯಾಸಿಟಿ ಹೊಂದಿದೆ. ಜೊತೆಗೆ ಇದನ್ನು ಚಾರ್ಜ್ ಮಾಡಲು 100W Super VOOC ಚಾರ್ಜರ್ ಇದರೊಂದಿಗೆ ಲಭ್ಯವಿದೆ. ಇದರ ಮೂಲಕ ಕೇವಲ 26 ನಿಮಿಷಗಳಲ್ಲಿ 100% ಚಾರ್ಜ್ ಕಂಪ್ಲೀಟ್ ಮಾಡಬಹುದಾಗಿದೆ.

ಇನ್ನು ಸ್ಟೋರೇಜ್ ವಿಷಯಕ್ಕೆ ಬಂದರೆ 256 ಜಿಬಿ ಇಂಟರ್ನಲ್ ಮೆಮೊರಿ (ROM) ಇದರಲ್ಲಿ ಲಭ್ಯವಿದೆ. ಹಾಗೂ ಇದರಲ್ಲಿ ಎಕ್ಸ್ಪಾಂಡ್ ಮಾಡುವ ಆಪ್ಷನ್ ಇಲ್ಲ. ಆದರೆ ಸಾಮಾನ್ಯವಾಗಿ 256 ಜಿಬಿ ಸ್ಟೋರೇಜ್ ಎಲ್ಲರಿಗೂ ಹೆಚ್ಚಿನವುದೇ ಆಗಿರುತ್ತದೆ.

ಜೊತೆಗೆ ಇದರಲ್ಲಿ 12 GB RAM ಇದೆ.

ಇದರ ಪ್ರೋಸೆಸರ್ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ಕ್ವಾಲ್ಲ್ಕಮ್ಮ್ ಸ್ನಾಪಡ್ರ್ಯಾಗನ್ 8 Gen 3 (Qualcomm Snapdragon 8 Gen 3) ಪ್ರೊಫೆಸರ್ ಹೊಂದಿದ್ದು ಯಾವುದೇ ರೀತಿಯ ಗೇಮ್ ಅನ್ನು ಇದರಲ್ಲಿ ಆಡಬಹುದಾಗಿದೆ.

ಇದರ ಡಿಸ್ಪ್ಲೇ ಬಗ್ಗೆ ಮಾತನಾಡುವುದಾದರೆ ಅಮೋಲೆಡ್ (AMOLED) ಡಿಸ್ಪ್ಲೇ ಹೊಂದಿದ್ದು ಉತ್ತಮ ಕ್ವಾಲಿಟಿಯ ಕಲರ್ ಫುಲ್ ಡಿಸ್ಪ್ಲೇ ಎಕ್ಸ್ಪೀರಿಯೆನ್ಸ್ ಮಾಡಬಹುದಾಗಿದೆ. ಇದರ ರೆಸಲ್ಯೂಷನ್ 1440 x 3168 ಫಿಕ್ಸೆಲ್ಸ್ ಆಗಿದ್ದು ಜೊತೆಗೆ ಇದರಲ್ಲಿ 120Hz ರಿಫ್ರೆಶ್ ರೇಟ್ ಇರಲಿದೆ. ಇದರ ಸ್ಕ್ರೀನ್ ಟು ಬಾಡಿ ರೇಶಿಯೋ 93.5% ಇದ್ದು ಇದರ ಅಸ್ಪೆಕ್ಟ್ ರೇಶಿಯೋ 20:9 ಆಗಿದೆ.

One Plus 12 ಮೊಬೈಲ್ ಇದರ ಏತ್ತರ 16.3mm ಇದ್ದು ಇದರ ಉದ್ದ 75.8mm ಆಗಿದೆ, ಇನ್ನು ಇದರ ತಿಕ್ನೆಸ್ಸ್9.1mm ಆಗಿದೆ. ಮೊಬೈಲ್ನಾ ಒಟ್ಟು ಭಾರ ಕೇವಲ 220 ಗ್ರಾಮ್ಸ್ ಎಂದು ಕಂಪನಿ ಹೇಳಿದೆ.

 

One Plus 12 Price in India :

ಇಷ್ಟೆಲ್ಲ ಫೀಚರ್ಸ್ ಹೊಂದಿರುವ Oneplus 12 price ಬಗ್ಗೆ ನೋಡುವುದಾದರೆ ಇದರ ಬಗ್ಗೆ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ. ಎಕ್ಸ್ಪರ್ಟ್ಸ್ ಅವರ ಪ್ರಕಾರ ಇದರ ಬೆಲೆ ₹58,000 ಇಂದ ₹60,000 ವರೆಗೆ ಇರಬಹುದೆಂದು ಹೇಳಲಾಗಿದೆ. ಇನ್ನು ಇದು ನಮಗೆ 2 ಕಲರ್ ಅಲ್ಲಿ ಲಭ್ಯವಿದ್ದು ಅವುಗಳೆಂದರೆ ದಟ್ಟ ಹಸಿರು ಬಣ್ಣ (Flowy Emerald) ಹಾಗೂ ಕಪ್ಪು ಬಣ್ಣ (Silky Black).

ಇದರ ಸ್ಪೆಸಿಫಿಕೇಶನ್ ಇಷ್ಟವಾಗಿ ಇದಕ್ಕೆ ತಕ್ಕಂತೆ ನಿಮ್ಮ ಬಜೆಟ್ ಇದ್ದರೆ ನೀವು One Plus 12 ಖರೀದಿಸಬಹುದು.

Leave a comment