ಒನ್ ಪ್ಲಸ್ ಕಂಪನಿಯೂ ಮೊಬೈಲ್ ನಲ್ಲಿ ಮಾತ್ರವಲ್ಲದೆ ಸ್ಮಾರ್ಟ್ ವಾಚ್ ನಲ್ಲಿ ಸಹ ಕಮಾಲ್ ಮಾಡಲು ಹೊರಟಿದೆ. ಇದು 2021 ರಲ್ಲಿ ತನ್ನ ಮೊದಲ ಸ್ಮಾರ್ಟ್ ವಾಚನ್ನು ಲಾಂಚ್ ಮಾಡಿತ್ತು ಹಾಗೂ ಅದು ಅದ್ಭುತವಾಗಿತ್ತು. ಈಗ ಅದರಲ್ಲಿ ತುಂಬಾ ಅಪ್ಡೇಟ್ಸ್ ಅನ್ನು ಮಾಡಿ Oneplus watch 2 ಅನ್ನು ಲಾಂಚ್ ಮಾಡಲು ಹೊರಟಿದೆ.
Oneplus Watch 2 Specification:
ಈಗಿನ ಕಾಲದಲ್ಲಿ ಸ್ಮಾರ್ಟ್ ವಾಚಿಗೆ ತುಂಬಾ ಡಿಮಾಂಡ್ ಇದೆ, ಅದರ ಕಾಂಪಿಟೇಶನ್ ಸಹ ಹಾಗೆ ಇದೆ. ಇದನ್ನೆಲ್ಲ ಗಮನವಿಟ್ಟುಕೊಂಡು ಒನ್ ಪ್ಲಸ್ 2 ಸ್ಮಾರ್ಟ್ ವಾಚ್ ಅನ್ನು ಹೈಟೆಕ್ ಆಗಿ ತಯಾರಿಸಲಾಗುತ್ತಿದೆ.
Oneplus watch 2 ಇದು ವೆರ್ ಓಎಸ್ (Wear OS) ಮೂಲಕ ಚಲಾಯಿಸಲಾಗಿದೆ. ಆದರಿಂದ ಇದು ತನ್ನ ಮೊದಲ ವಾಚಾದ Oneplus watch ಗಿಂತ ಭಿನ್ನವಾಗಿರುವುದು ತಿಳಿಯುತ್ತದೆ.
ಅಷ್ಟೇ ಅಲ್ಲದೆ ಇದು ಅಮೋಲೆಡ್ (Amoled) ಡಿಸ್ಪ್ಲೇ ಯನ್ನು ಸಹ ಹೊಂದಿದೆ. ಹೈ ಕ್ವಾಲಿಟಿ ಮೊಬೈಲಲ್ಲಿ ಕಾಣಿಸುವ ಅಮೋಲೆಡ್ (Amoled) ಡಿಸ್ಪ್ಲೇ ಈ ಸ್ಮಾರ್ಟ್-ವಾಚಲ್ಲಿ ಇರುವುದು ಎಲ್ಲರನ್ನು ಆಕರ್ಷಿತರಗುವಂತೆ ಮಾಡಿದೆ.
ಇನ್ನು ಇದರ ಡಿಸ್ಪ್ಲೇ ಸೈಜ್ 1.43 ಇಂಚೆಸ್ ಇದ್ದು ಇದರ ರೆಸೊಲ್ಯೂಷನ್ ಬಂದು 454 x 454 ಫಿಕ್ಸೆಲ್ಸ್ ಇದೆ. ಇದರಲ್ಲಿ ವಾಚ್ ಯಾವಾಗಲು ಆನ್ ಆಗಿ ಇರುವ ಆಪ್ಷನ್ ಸಹ ಇದೆ.
ಇನ್ನು ಇದರ ಸ್ಟೋರೇಜ್ ಬಗ್ಗೆ ಮಾತನಾಡುವುದಾದರೆ ಇದರಲ್ಲಿ 4GB ಇಂಟರ್ನಲ್ ಮೆಮೊರಿ ಇದೆ.
ಮುಖ್ಯವಾಗಿ Oneplus watch 2 ಅಲ್ಲಿ ನಮಗೆ ಬ್ಲೂಟೂತ್ ಹಾಗೂ ವೈಫೈ ಕನೆಕ್ಟಿವಿಟಿ ಲಭ್ಯವಿದೆ. ಇದರ ಮೂಲಕ ಬ್ಲೂಟೂತ್ ಕಾಲಿಂಗ್ ಸಹ ಮಾಡಬಹುದಾಗಿದೆ, ಹಾಗೂ ಜಿಪಿಎಸ್ ಸಹ ಇರಲಿದೆ.
ಇನ್ನು ಇದರ ಚಿಪ್-ಸೆಟ್ ಬಗ್ಗೆ ಹೇಳುವುದಾದರೆ ಇದರಲ್ಲಿ ಕ್ವಾಲ್ ಕಾಂಮ್ಮ್ಸ್ ಸ್ನಾಪಡ್ರ್ಯಾಗನ್ W5 Gen 1 (Qualcomm’s Snapdragon W5 Gen 1) ಚಿಪ್ ಸೆಟ್ ಇದ್ದು, ಇದರ ಫೀಚರ್ಸ್ ಅನ್ನು ಹೈಟೆಕ್ ಗೊಳಿಸಿದೆ.
ಇನ್ನು ಇದರ ಬ್ಯಾಟರಿಯ ಬಗ್ಗೆ ನೋಡಿದರೆ ಇಲ್ಲಿ ನಮಗೆ ಲೀತಿಯಂ ಪೋಲಿಮರ್ (Lithium Polymer) ಬ್ಯಾಟರಿ ಲಭ್ಯವಿದ್ದು ಇದು ತೆಗೆಯಲಾಗದ (ನಾನ್-ರಿಮೂವೆಬಲ್) ಬ್ಯಾಟರಿ ಆಗಿದೆ. ಜೊತೆಗೆ ಇದರಲ್ಲಿ ನಮಗೆ ಪಾಸ್ಟ್ ಚಾರ್ಜಿಂಗ್ ಹಾಗೂ ವೈರ್-ಲೆಸ್ ಚಾರ್ಜಿಂಗ್ ಸಹ ಲಭ್ಯವಿದೆ.
Oneplus watch 2 ಅಲ್ಲಿ ಪೆಡೋಮೀಟರ್, ಬ್ಲಡ್ ಆಕ್ಸಿಜನ್ (SpO2) ಮೋನಿಟರ್, ಹಾರ್ಟ್ ರೇಟ್ ಮೋನಿಟರ್, ಕ್ಯಾಲೋರಿ ಕೌಂಟ್, ಸ್ಟೆಪ್ ಕೌಂಟ್, ಸ್ಲೀಪ್ ಮೋನಿಟರ್, ಅಲಾರ್ಮ್ ಕ್ಲಾಕ್ , ರಿಮೈಂಡೆರ್, ಸ್ಟೋಪ್-ವಾಚ್, ಟೈಮರ್ ಅಂತಹ ಫೀಚರ್ಸ್ ಇದರಲ್ಲಿದೆ.
ಇನ್ನು ಇದು ಸ್ಟೇನ್-ಲೆಸ್ ಸ್ಟೀಲ್ ಇಂದ ತಯಾರಾಗಿದ್ದು ವೃತ್ತಾಕಾರವಾಗಿದೆ.
ಇದು ವಾಟರ್ ಪ್ರೂಫ್, ಡಸ್ಟ್ ಪ್ರೂಫ್ ಜೊತೆಗೆ ಸ್ಕ್ರಾಚ್ ರೆಸಿಸ್ಟೆಂಟ್ ಆಗಿದೆ.
Oneplus Watch 2 Price:
ಇಷ್ಟೆಲ್ಲಾ ಫೀಚರ್ಸ್ ಅನ್ನು ಹೊಂದಿರುವ Oneplus watch 2 price ಬಗ್ಗೆ ನೋಡುವುದಾದರೆ, ಸಿಕ್ಕ ಮಾಹಿತಿಗಳ ಪ್ರಕಾರ ಇದರ ಎಕ್ಸ್ಪೆಕ್ಟೆಡ್ ಪ್ರೈಸ್ ₹14,999/- ಎನ್ನಲಾಗಿದೆ.
ಇನ್ನು ಇದರ ಲಾಂಚ್ ಯಾವಾಗ ಎಂದು ಕಂಪನಿ ಅಧಿಕೃತವಾಗಿ ಘೋಷಿಸಿಲ್ಲ ಇದೇ ವರ್ಷದಲ್ಲಿ ಆದಷ್ಟು ಬೇಗ ಲಾಂಚ್ ಆಗುವ ಸಾಧ್ಯತೆ ಇದೆ.