ಮೊಬೈಲ್ ಬ್ರಾಂಡ್ ಗಳಲ್ಲಿ ಟಾಪ್ ಕಂಪನಿಗಳಲ್ಲೊಂದಾದ Samsung ಕೆಲವು ದಿನಗಳ ಹಿಂದೆಯಷ್ಟೇ 2 ಮೊಬೈಲ್ ಅನ್ನು ಲಾಂಚ್ ಮಾಡಿತ್ತು. ಅವುಗಳೆಂದರೆ-
1. Samsung Galaxy S24 5G
2. Samsung Galaxy S24 Plus 5G
ಇಲ್ಲಿ ನಾವು Samsung Galaxy S24 Plus 5G ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
Samsung Galaxy S24 Plus 5G Camera:
ಕ್ಯಾಮೆರಾ ವಿಷಯದಲ್ಲಿ Samsung Galaxy S24 Plus 5G ಮುಂದಿದೆ. ಇಲ್ಲಿ ನಮಗೆ 50 MP + 12 MP + 10 MP ರೇರ್ ಕ್ಯಾಮೆರಾ ಸಿಗಲಿದೆ. ಈ ಕ್ಯಾಮೆರಾ ಬಗ್ಗೆ ಹೇಳುವುದಾದರೆ
1. 50 MP ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾ ಹೊಂದಿದ್ದು, ಇದರ ಫೋಕಲ್ ಲೆಂತ್ 24 mm ಹಾಗೂ ಇದರ ಸೆನ್ಸರ್ ಸೈಜ್ 1.56 ಆಗಿದೆ.
2. 12 MP ಅಲ್ಟ್ರಾ ವೈಡ್ ಆಂಗಲ್ ಸೆಕೆಂಡೆರಿ ಕ್ಯಾಮೆರಾ ಹೊಂದಿದ್ದು ಇದರ ಫೋಕಲ್ ಲೆಂತ್ 13 mm ಇದ್ದು, ಇದರ ಸೆನ್ಸರ್ ಸೈಜ್ 2.55 ಇದೆ.
3. 10 MP ಟೆಲಿಫೋಟೊ ಟೆರ್ಟಿರಿ ಕ್ಯಾಮೆರಾ ಹೊಂದಿದ್ದು ಇದರ ಫೋಕಲ್ ಲೆಂತ್ 67 mm ಹಾಗೂ ಇದರ ಸೆನ್ಸರ್ ಸೈಜ್ 3.9 ಇದೆ. ಜೊತೆಗೆ ಅಪ್-ಟು 30X ಡಿಜಿಟಲ್ ಜೂಮ್ ಹಾಗೂ 3X ಒಫ್ಟಿಕಲ್ ಜೂಮ್ ಸಪೋರ್ಟ್ ಇದೆ.
ಇನ್ನು ಇದರ ಫ್ರಂಟ್ ಕ್ಯಾಮೆರಾ ಬಗ್ಗೆ ಹೇಳುವುದಾದರೆ ಇದರಲ್ಲಿ 12 MP ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾ ಹೊಂದಿದ್ದು, 26 mm ಫೋಕಲ್ ಲೆಂತ್ ಹೊಂದಿದೆ.
Samsung Galaxy S24 Plus 5g Specification:
Samsung Galaxy S24 Plus 5G specification ಅತ್ಯುತ್ತಮವಾಗಿದೆ.
ಈ ಮೊಬೈಲ್ ನಮಗೆ ಹಸಿರು, ನೀಲಿ, ನೇರಳೆ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.
ಇನ್ನು ಇದರಲ್ಲಿ ಲಿ-ಅಯಾನ್ ಬ್ಯಾಟರಿ ಲಭ್ಯವಿದ್ದು, 4900 mAh ಬ್ಯಾಟರಿ ಕೆಪ್ಯಾಸಿಟಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದ್ದು. 30 ನಿಮಿಷಗಳಲ್ಲಿ 65 ಪರ್ಸೆಂಟ್ ಚಾರ್ಜ್ ಕಂಪ್ಲೀಟ್ ಆಗುತ್ತದೆ.
ಇನ್ನು ಇದರಲ್ಲಿ 256 GB ಇಂಟರ್ನಲ್ ಮೆಮೊರಿ ಲಭ್ಯವಿದ್ದು, 12 GB RAM ಸಹ ಲಭ್ಯವಿದೆ.
ಇದರಲ್ಲಿ ಸ್ಯಾಮ್ಸಂಗ್ ಎಕ್ಸಿನೋಸ್ 2400 (Samsung Exynos 2400) ಪ್ರೊಫೆಸರ್ ಸಿಗಲಿದ್ದು, ಉತ್ತಮ ಗೇಮ್ ಎಕ್ಸ್ಪೀರಿಯನ್ಸ್ ಪಡೆಯಬಹುದಾಗಿದೆ.
Samsung Galaxy S24 Plus 5g ಅಲ್ಲಿ 6.7 ಇಂಚೆಸ್ ಡೈನಾಮಿಕ್ ಅಮೋಲೆಡ್ ಡಿಸ್ಪ್ಲೇ ಲಭ್ಯವಿದ್ದು, 1440 x 3120 ಫಿಕ್ಸೆಲ್ಸ್ ರೆಸುಲ್ಯೂಷನ್ ಹೊಂದಿದೆ. ಇನ್ನು ಇದರ ಎಸ್ಪೆಕ್ಟ್ ರೇಶಿಯೋ 19.3:9 ಆಗಿದೆ ಹಾಗೂ ಇದರ ಸ್ಕ್ರೀನ್ ಟು ಬಾಡಿ ರೇಶಿಯೋ 91.4% ಇದೆ. ಜೊತೆಗೆ ಇದರ ರಿಫ್ರೆಶ್ ರೇಟ್ 120 Hz ಹೊಂದಿದೆ. ಈ ಮೊಬೈಲ್ ವಾಟರ್ ಪ್ರೂಫ್ ಜೊತೆಗೆ ಡಸ್ಟ್ ಪ್ರೂಫ್ ಸಹ ಆಗಿದೆ.
ಇನ್ನು ಇದರಲ್ಲಿ 1 ನ್ಯಾನೋ SIM ಹಾಗೂ ಇನ್ನೊಂದು e-SIM ಆಪ್ಷನ್ ಲಭ್ಯವಿದೆ. ಜೊತೆಗೆ ಭಾರತದಲ್ಲಿ 5G ನೆಟ್ವರ್ಕ್ ಸಪೋರ್ಟ್ ಸಹ ಇದೆ.
ಇನ್ನು Samsung Galaxy S24 Plus 5g ಮೊಬೈಲ್ 75.9 mm ಅಗಲವಿದ್ದು, 158.5 mm ಎತ್ತರವಿದೆ.ಇನ್ನು ಇದರ ತಿಕ್ನೆಸ್ 7.7 mm ಇದ್ದು ಇದರ ಒಟ್ಟು ತೂಕ 196 ಗ್ರಾಮ್ಸ್ ಆಗಿದೆ.
Samsung Galaxy S24 Plus 5g Price:
ಇಷ್ಟೆಲ್ಲ ಫೀಚರ್ಸ್ ಹೊಂದಿರುವ Samsung Galaxy S24 Plus 5g Price ಬಗ್ಗೆ ಹೇಳುವುದಾದರೆ, ಇಲ್ಲಿ ನಮಗೆ ಎರಡು ಆಪ್ಷನ್ ಲಭ್ಯವಿದೆ,
12 GB + 256 GB ಇರುವ Samsung Galaxy S24 Plus 5g Price ₹99,999/- ಆಗಿದ್ದು,
12 GB + 512 GB ಹೊಂದಿರುವ Samsung Galaxy S24 Plus 5g Price ₹109,999/- ಆಗಿದೆ.