ಭಾರತದಲ್ಲಿ ಹೆಚ್ಚು ಬೈಕ್ ತಯಾರಿಸುವ ಕಂಪನಿಗಳಲ್ಲಿ ಬರುವ ಹೋಂಡಾ ಮೋಟರ್ಸ್ ಬೈಕ್ ಭಾರತದಲ್ಲಿ ಸಾಕಷ್ಟು ಜನಮನ್ನಣೆ ಗಳಿಸಿದೆ. ನೀವು ಸಹ ಹೋಂಡಾ ಮೋಟರ್ಸ್ ನ ಬೈಕ್ ಖರೀದಿಸಲು ಯೋಚಿಸುತಿದ್ದರೆ, Honda Shine ನಿಮಗೆ ಒಂದು ಉತ್ತಮ ಆಪ್ಷನ್ ಆಗಿದೆ. 55 kmpl ಮೈಲೇಜ್ ನೀಡುವ ಈ ಬೈಕ್ ಉತ್ತಮ ಬೈಕ್ ಆಗಿ ಮುನ್ನುಗ್ಗುತ್ತಿದೆ.
Honda Shine Price in Bangalore:
ಇನ್ನು Honda Shine Price in Bangalore ಹೇಳುವುದಾದರೆ ಇಲ್ಲಿನ ಎಕ್ಸ್ಸ್ ಶೋರೂಮ್ ಗಳಲ್ಲಿ ₹81,100/- ಶುರುವಾಗಿ ₹85,100/- ವರೆಗೆ ಇದರ ಬೆಲೆ ಇದೆ.
Honda Shine Engine:
Honda Shine Engine ಬಗ್ಗೆ ಮಾತನಾಡುವುದಾದರೆ ಇದು ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಇಂಜಿನ್ ಹೊಂದಿದ್ದು, ಇದು 123.94 ಸಿಸಿಯದ್ದಾಗಿದೆ. 10.5 ಫ್ಯೂಲ್ ಕೆಪ್ಯಾಸಿಟಿ ಹೊಂದಿರುವ ಈ ಬೈಕಿನ ಮ್ಯಾಕ್ಸಿಮಮ್ ಪವರ್ 7500 RPM ಅಲ್ಲಿ 10.74 PS ಹೊಂದಿದ್ದು, ಇದರ ಮ್ಯಾಕ್ಸಿಮಮ್ ಟಾರ್ಕ್ಯೂ 6000 RPM ಅಲ್ಲಿ 11 Nm ಇರಲಿದೆ. ಇದು ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದ್ದು, 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಜೊತೆಗೆ ಇದರಲ್ಲಿ ಕಿಕ್ ಹಾಗೂ ಸೆಲ್ಫ್ ಸ್ಟಾರ್ಟ್ ಎರಡು ಆಪ್ಷನ್ ಇದೆ.
Honda Shine Specification:
Honda Shine Specification ಬಗ್ಗೆ ನೋಡುವುದಾದರೆ ಇದರಲ್ಲಿ ಟೆಲ್ಸ್ಕಾಫಿಕ್ ಫ್ರಂಟ್ ಸಸ್ಪೆಂನ್ಶನ್ ಹೊಂದಿದ್ದು, ಹೈಡ್ರಾಲಿಕ್ ಟೈಪ್ ರೇರ್ ಸಸ್ಪೆಂನ್ಶನ್ ಹೊಂದಿದೆ.
ಇನ್ನು ಫ್ರಂಟ್ ಬ್ರೆಕಿಂಗ್ ಗೆ ಡಿಸ್ಕ್ ಬ್ರೇಕ್ ಅನ್ನು ಹೊಂದಿದ್ದು, ರೇರ್ ಬ್ರೇಕಿಂಗ್ ಗೆ ಡ್ರಮ್ ಬ್ರೇಕ್ ಅನ್ನು ಹೊಂದಿದೆ.
ಇನ್ನು ಈ ಬೈಕ್ ಅಲ್ಲೋಯ್ ವೀಲ್ ಅನ್ನು ಹೊಂದಿದ್ದು ಇದರ ಫ್ರಂಟ್ ವೀಲ್ ಸೈಜ್ 457.2 mm ಇದ್ದು, ಇದರ ರೇರ್ ವೀಲ್ ಸೈಜ್ 457.2 mm ಇದೆ. ಇನ್ನು ಇದು ಟ್ಯೂಬ್-ಲೆಸ್ ಟೈಯರ್ ಹೊಂದಿದ್ದು, ಡೈಮೊಂಡ್ ಫ್ರೇಮ್ ಹೊಂದಿದೆ.
Honda Shine ಹಾಲೋಜನ್ ಹೆಡ್-ಲೈಟ್ ಹೊಂದಿದ್ದು, ಟೈಲ್ ಲೈಟ್ ಹಾಗೂ ಟರ್ನ್ ಸಿಗ್ನಲ್ ಲೈಟ್ ಆಗಿ ಬಲ್ಬ್ ಅನ್ನು ಹೊಂದಿದೆ.
114Kg ಕರ್ಬ್ ತೂಕ ಹೊಂದಿರುವ ಈ ಬೈಕಿನ ಎತ್ತರ 1116 mm, ಉದ್ದ 2046 mm ಹಾಗೂ ಅಗಲ 737 mm ಇದೆ.
Honda Shine Features:
Honda Shine features ಬಗ್ಗೆ ನೋಡುವುದಾದರೆ ಇದರಲ್ಲಿ ಅನಲಾಗ್ (Analogue) ಇನ್ಸ್ಟ್ರುಮೆಂಟ್ ಕಂನ್ಸೋಲ್ ಇರಲಿದ್ದು, ಜೊತೆಗೆ ಅನಲಾಗ್ ಸ್ಪೀಡೋಮೀಟರ್, ಅನಲಾಗ್ ಓಡೋಮೀಟರ್ ಸಹ ಇರಲಿದೆ.
ಇದು ಸಿಂಗಲ್ ಸೀಟ್ ಬೈಕ್ ಆಗಿದ್ದು ಜೊತೆಗೆ ಪ್ಯಾಸೆಂಜರ್ ಪುಟ್-ರೆಸ್ಟ್ ಸೌಲಭ್ಯ ಸಹ ಇದರಲ್ಲಿದೆ.
ಇದನ್ನು ಓದಿ Hero XPulse 400 Launch Date