ಸರ್ಚ್ ಇಂಜಿನ್ ಆಗಿರುವ ಗೂಗಲ್, ಈಗ ಮೊಬೈಲ್ ಕ್ಷೇತ್ರದಲ್ಲಿ ಸಹ ಕಮಾಲ್ ಮಾಡುತ್ತಿದೆ. ಏಕೆಂದರೆ ಗೂಗಲ್ ತನ್ನ Google pixel 8 pro ಮೊಬೈಲ್ ಮೂಲಕ ಎಲ್ಲರನ್ನು ಆಕರ್ಷಿಸುತ್ತಿದೆ.
ಡಿಪರೆಂಟ್ ಡಿಸೈನ್ ಅನ್ನು ಹೊಂದಿರುವ ಈ ಮೊಬೈಲ್ 4575 mAh ಬ್ಯಾಟರಿ ಕೆಪ್ಯಾಸಿಟಿಯನ್ನು ಸಹ ಹೊಂದಿದೆ.
Google Pixel 8 Camera:
Google pixel 8 camera ಬಗ್ಗೆ ಹೇಳುವುದಾದರೆ ಇದರಲ್ಲಿ ಬ್ಯಾಕ್ ಕ್ಯಾಮೆರಾವಾಗಿ 50 MP + 12 MP ಡ್ಯೂಯಲ್ ಕ್ಯಾಮೆರಾವನ್ನು ಹೊಂದಿದೆ. ಅಂದರೆ-
1. 50 MP ವೈಡಂಗಲ್ ಪ್ರೈಮರಿ ಕ್ಯಾಮರವನ್ನು ಹೊಂದಿದ್ದು ಇದರ ಫೋಕಲ್ ಲೆಂತ್ 25 mm ಇದೆ. ಇದರ ಸೇನ್ಸರ್ ಸೈಜ್ 1.31 ಆಗಿದೆ. ಜೊತೆಗೆ ಇದರಲ್ಲಿ ಅಪ್-ಟು 7X ಡಿಜಿಟಲ್ ಜೂಮ್ ಒಪ್ಶನ್ ಇದೆ.
2. 12 MP ಅಲ್ಟ್ರಾ ವೈಡ್ ಆನ್ಗಲ್ ಸೆಕೆಂಡರಿ ಕ್ಯಾಮೆರಾ ಹೊಂದಿದ್ದು, ಇದರ ಸೆನ್ಸರ್ ಸೈಜ್ 2.9 ಆಗಿದೆ.
ಇನ್ನು ಫ್ರೆಂಟ್ ಕ್ಯಾಮೆರಾದ ಬಗ್ಗೆ ಹೇಳುವುದಾದರೆ ಇದರಲ್ಲಿ 10.5 MP ಅಲ್ಟ್ರಾ ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದ್ದು, ಇದರ ಫೋಕಲ್ ಲೆಂಥ್ 20 mm ಹಾಗೂ ಇದರ ಸೆನ್ಸರ್ ಸೈಜ್ 3.1 ಆಗಿದೆ.
Google Pixel 8 Specification:
ಇನ್ನು Google Pixel 8 specification ಬಗ್ಗೆ ಹೇಳುವುದಾದರೆ,
ಇದು ಲಿ-ಅಯಾನ್ (li-ion) ಬ್ಯಾಟರಿಯನ್ನು ಹೊಂದಿದ್ದು, ಇದರ ಬ್ಯಾಟರಿ ಕೆಪಾಸಿಟಿ 4575 mAh ಆಗಿದೆ. ಜೊತೆಗೆ ಇದನ್ನು ಫಾಸ್ಟ್ ಚಾರ್ಜ್ ಮಾಡುವ ವ್ಯವಸ್ಥೆ ಸಹ ಇರಲಿದ್ದು, ಇದರಲ್ಲಿ 27W ಫಾಸ್ಟ್ ಚಾರ್ಜ್ ಮೂಲಕ 30 ನಿಮಿಷದಲ್ಲಿ 50% ಚಾರ್ಜ್ ಕಂಪ್ಲೀಟ್ ಮಾಡಬಹುದು.
ಇನ್ನು ಇದರ ಸ್ಟೋರೇಜ್ ವಿಷಯಕ್ಕೆ ಬಂದರೆ 128 GB ಇಂಟರ್ನಲ್ ಮೆಮೊರಿ ಹೊಂದಿದೆ.
ಜೊತೆಗೆ ಇದರಲ್ಲಿ 8 MP RAM ಸಹ ಇರಲಿದೆ.
Google Pixel 8 ಅಲ್ಲಿ ಪ್ರೋಸೆಸರ್ ಆಗಿ ಗೂಗಲ್ ಟೆನ್ಸರ್ G3 (Google Tensor G3) ಅನ್ನು ಹೊಂದಿದೆ.
ಅಷ್ಟೇ ಅಲ್ಲದೆ ಇದರಲ್ಲಿ 6.2 ಇಂಚೆಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದ್ದು ಇದರ ರೆಸಲ್ಯೂಷನ್ 1080 x 2400 ಫಿಕ್ಸೆಲ್ಸ್ ಆಗಿದೆ. ಇನ್ನು ಇದರ ರಿಫ್ರೆಶ್ ರೇಟ್ 120 Hz ಆಗಿದ್ದು, ಇದರ ಅಸ್ಪೆಕ್ಟ್ ರೇಶಿಯೋ 20:9 ಹಾಗೂ ಇದರ ಸ್ಕ್ರೀನ್ ಟು ಬಾಡಿ ರೇಶಿಯೋ 87.1% ಆಗಿದೆ.
ಈ ಮೊಬೈಲ್ ವಾಟರ್ ಪ್ರೂಫ್ ಜೊತೆಗೆ ಡಸ್ಟ್ ಪ್ರೂಫ್ ಸಹ ಆಗಿದೆ.
Google Pixel 8 ಅಲ್ಲಿ ನಮಗೆ 1 ನ್ಯಾನೋ SIM ಹಾಗೂ ಇನ್ನೊಂದು e-SIM ಆಪ್ಷನ್ ಇದೆ. ಜೊತೆಗೆ ಇದು ಭಾರತದಲ್ಲಿ 5g ಸಪೋರ್ಟ್ ನೆಟ್ವರ್ಕ್ ಹೊಂದಿದೆ.
ಇನ್ನು 187 ಗ್ರಾಮ್ಸ್ ತೂಕವಿರುವ ಈ ಮೊಬೈಲ್, 150.5 mm ಎತ್ತರ ಹಾಗೂ 70.8 mm ಅಗಲ ಹೊಂದಿದೆ. ಜೊತೆಗೆ ಇದರ ತಿಕ್ನೆಸ್ಸ್ 8.9 mm ಆಗಿದೆ.
Google Pixel 8 Price:
Google Pixel 8 price ಬಗ್ಗೆ ಹೇಳುವುದಾದರೆ ಇಲ್ಲಿ ನಮಗೆ ಎರಡು ಆಯ್ಕೆ ಸಿಗುತ್ತದೆ.
8 GB + 128 GB ಇರುವ Google Pixel 8 Price ₹75,999/- ಆಗಿದ್ದು,
8 GB + 256 GB ಇರುವ Google Pixel 8 price ₹82,999/- ಆಗಿದೆ.