ಫೈಟರ್ ಮೂವಿ ಕಲೆಕ್ಷನ್ : ಚಿತ್ರ ಗಳಿಸಿದ್ದೇಷ್ಟು?

ಫೈಟರ್ ಮೂವಿ ಕಲೆಕ್ಷನ್
ಫೈಟರ್ ಮೂವಿ ಕಲೆಕ್ಷನ್

ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆಯ ಫೈಟರ್ ಸಿನಿಮಾ ಭರ್ಜರಿ ಕಲೆಕ್ಷನ್ ನೊಂದಿಗೆ ಮುನ್ನುತ್ತಿದೆ. ಇಲ್ಲಿ ನಾವು ಫೈಟರ್ ಮೂವಿ ಕಲೆಕ್ಷನ್ ಬಗ್ಗೆ ನೋಡೋಣ.

ಯಶ್  ರಾಜ್ ಫಿಲಂಸ್ (YRJ)ನ ಸ್ಪಯ್ ಯೂನಿವರ್ಸನ ಪಾರ್ಟ್ ಎಂದು ಹೇಳಲಾಗುತ್ತಿರುವ ಫೈಟರ್ ಸಿನಿಮಾ ದೇಶಭಕ್ತಿಯ ಕಥಾ ಹಂದರವನ್ನು ಹೊಂದಿದೆ.

ಬಾಲಿವುಡ್ ಸಿನೆಮಾ ಆಗಿರುವ ಫೈಟರ್ ಅನ್ನು ಪಠಾಣ್ ಸಿನೆಮಾ ಮಾಡಿದ ಸಿದ್ಧಾರ್ಥ್ ಆನಂದ್ ಡೈರೆಕ್ಟ್ ಮಾಡಿದ್ದೂ ವಿಯಾಕಾಂ 18 ಸ್ಟುಡಿಯೋಸ್ ಹಾಗೂ ಮರ್ಫ್ಲಿಕ್ಸ್ ಪಿಕ್ಚರಸ್ ಪ್ರೊಡ್ಯೂಸ್ ಮಾಡಿದ್ದಾರೆ. ಹೃತಿಕ್ ರೋಷನ್ ಸಿನೆಮಾದಲ್ಲಿ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪ್ಯಾಟಿ ಪಠಾನಿಯಾ ಪಾತ್ರ ನಿರ್ವಹಿಸಿದ್ದು, ದೀಪಿಕಾ ಪಡುಕೋಣೆ ಸ್ಕ್ವಾಡ್ರನ್ ಲೀಡರ್ ಮಿನಲ್ ಮಿನ್ನಿ ರಾಥೋಡ್ ಆಗಿ ಕಾಣಿಸಿಕೊಂಡಿದ್ದಾರೆ.

3D ಅಲ್ಲಿ ರಿಲೀಸ್ ಆಗಿರುವ ಈ ಫಿಲಂ ಪಾಕಿಸ್ತಾನದ ದಾಳಿಗೆ ಪ್ರತ್ಯುತ್ತರವನ್ನು ನೀಡುವ ಕಥೆಯನ್ನು ಹೊಂದಿರುವ ಮೂವಿಯಾಗಿದೆ. ಈ ಮೂವಿಯ ಫೈಟ್ ಸೀನ್ಗಳು ಅದ್ಭುತವಾಗಿದ್ದು, ಪ್ರೇಕ್ಷಕರಿಗೆ ರಜೆಯ ಮಜಾವನ್ನು ಅನುಭವಿಸಲು ಹೇಳಿ ಮಾಡಿಸಿದ ಮೂವಿಯಾಗಿದೆ. ಟ್ರೈಲರ್ ಸಾಕಷ್ಟು ಸದ್ದು ಮಾಡಿರುವಂತೆ ಮೂವಿ ಸಹ ಅದೇ ರೇಂಜಿಗೆ ಇರುವುದಾಗಿ ಚಿತ್ರ ವಿಕ್ಷಿಸಿದ ಸಿನಿಮಾ ಪ್ರಿಯರು ಹೇಳಿದ್ದಾರೆ.

Fighter Day 1 Collection:

ಚಿತ್ರವು ರಜಾ ದಿನವಾದ ಕಾರಣ ಭರ್ಜರಿ ಓಪನಿಂಗ್ ಅನ್ನು ಪಡೆದಿದ್ದು, ವಾರಾಂತ್ಯದಲ್ಲಿ ಫೈಟರ್ ಮೂವಿ ಕಲೆಕ್ಷನ್ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

ಚಿತ್ರ ಬಿಡುಗಡೆಯಾದ ಮೊದಲ ದಿವಸ ಅಂದರೆ ಜನವರಿ 25ರಂದು ಓವರ್ಸಿಸ್ ಸೇರಿ ₹36 ಕೋಟಿ ಗ್ರೋಸ್ ಕಲೆಕ್ಷನ್ ಮಾಡಿದ್ದೂ, ಇದರಲ್ಲಿ ಭಾರತದ ಒಟ್ಟು ಕಲೆಕ್ಷನ್ ₹23.47 ಕೋಟಿಯಾಗಿದ್ದು, ಇನ್ನು ಇದರಲ್ಲಿ ಓವರ್ಸಿಸ್ ನ ಒಟ್ಟು ಗ್ರೋಸ್ ಕಲೆಕ್ಷನ್ ₹8.61 ಕೋಟಿಯಾಗಿದೆ.


ಇನ್ನು ನೆಟ್ ಕಲೆಕ್ಷನ್ ವಿಷಯಕ್ಕೆ ಬಂದರೆ ಫೈಟರ್ ಮೂವಿ ಕಲೆಕ್ಷನ್ ಭಾರತದಲ್ಲಿ ₹23.25 ಕೋಟಿ ಆಗಿದೆ ಎಂಬ ಮಾಹಿತಿ ಸಿಕ್ಕಿದೆ.

Fighter Day 2 Collection:

ಸಿಕ್ಕ ಮಾಹಿತಿಗಳ ಪ್ರಕಾರ ಫೈಟರ್ ಮೂವಿ ಕಲೆಕ್ಷನ್ ಎರಡನೆಯ ದಿನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. Sanchika.com ಹೇಳಿರುವ ಪ್ರಕಾರ ಇದರ ಡೇ 2 ಕಲೆಕ್ಷನ್ ₹36.48 ಕೋಟಿ ಆಗುವ ನಿರೀಕ್ಷೆ ಇದೆ.

ನೀವು ಮೂವಿಯನ್ನು ನೋಡಲು ಯೋಚಿಸುತ್ತಿದ್ದರೆ, ಖಂಡಿತ ಫೈಟರ್ ಮೂವಿ ನೋಡಬಹುದಾಗಿದೆ.

Leave a comment