ಭಾರತದಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ತಯಾರಿಕೆಯಲ್ಲಿ ಭಾರತದ ಓಲಾ (Ola) ಮುಂದಿದೆ. ಹೆಚ್ಚಾಗಿ ಎಲ್ಲರೂ ಸಹ Ola (ಓಲಾ) ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಖರೀದಿಸುತ್ತಿದ್ದಾರೆ. ಇದರ ಮಧ್ಯೆ ಓಲಾವು ಈಗ ಇರುವ ಇನ್ ಬಿಲ್ಡ್ ಬ್ಯಾಟರಿ ಯ ಜೊತೆಗೆ ರಿಮೂವ್ಏಬಲ್ (ತೆಗೆಯಬಹುದಾದ) ಬ್ಯಾಟರಿ ಹೊಂದಿರುವ ನ್ಯೂ ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಸಿದ್ಧಪಡಿಸುವ ಯೋಜನೆಯಲ್ಲಿದೆ.
ಬೆಂಗಳೂರಿನಲ್ಲಿ ಮೇನ್ ಬ್ರಾಂಚ್ ಹೊಂದಿರುವ ಓಲಾ ಈಗ ಬಿಡುಗಡೆಗೊಳಿಸಿದ ಎಲೆಕ್ಟ್ರಿಕಲ್ ಸ್ಕೂಟರ್ ಗಳು ಉತ್ತಮ ಡಿಸೈನ್ ಹಾಗೂ ಉತ್ತಮ ಫೀಚರ್ಸ್ ಗಳಿಂದ ಎಲ್ಲರ ಗಮನ ಸೆಳೆದಿದೆ. ಬೆಲೆ ಅಷ್ಟೊಂದು ಜಾಸ್ತಿ ಅಲ್ಲದಿದ್ದರೂ, ಮನೆಯಲ್ಲೇ ಚಾರ್ಜ್ ಮಾಡಬಹುದಾದ ಅತ್ಯುತ್ತಮ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಓಲಾ (Ola) ತಯಾರಿಸುತ್ತಿತ್ತು. ಆದರೆ ಇಲ್ಲಿ ಓಲಾದ ಬ್ಯಾಟರಿ ಪಿಕ್ಸ್ಡ್ ಬ್ಯಾಟರಿ ಆಗಿತ್ತು. ಇದರಿಂದ ನಾವು ಹೊರಗಡೆ ಎಲ್ಲಾದರೂ ಹೋದಾಗ ಚಾರ್ಜ್ ಮಾಡಲು ಸ್ವಲ್ಪ ಸಮಸ್ಯೆ ಆಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವನ್ನು ಈಗ Ola ಕಂಡುಕೊಂಡಿದೆ. ಹೌದು ಈಗ ಓಲಾವು ರಿಮೋವೆಬಲ್ ಬ್ಯಾಟರಿ ಹೊಂದಿರುವ ನ್ಯೂ ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ತಯಾರಿಸುವ ಯೋಜನೆಯಲ್ಲಿದೆ.
ಸಿಕ್ಕ ಮಾಹಿತಿಗಳ ಪ್ರಕಾರ Ola (ಓಲಾ)ವು ತನ್ನ ನ್ಯೂ ಓಲಾ ಸ್ಕೂಟರ್ ಗೆ, ಸ್ವಪ್ಎಬಲ್ (ರಿಮೂವಬಲ್) ಬ್ಯಾಟರಿ ಹೊಂದಿರುವ ಸ್ಕೂಟರ್ ಪೇಟೆಂಟ್ ಪಡೆದುಕೊಂಡಿದೆ. ಇದು B2B ಕಸ್ಟಮರ್ಸ್ ಗೇ ಸಹಾಯಕವಾಗಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇದು ಕಮರ್ಷಿಯಲ್ ಸೇಗ್ಮೆಂಟ್ ಗೆ ಸೂಕ್ತವಾಗುವಂತೆ ನಿರ್ಮಿಸಲಾಗುವುದು ಎಂಬ ಮಾತು ಕೇಳಿಬಂದಿದೆ.
ಎಲೆಕ್ಟ್ರಿಕಲ್ ಸ್ಕೂಟರ್ ಗೇ ಕಾಂಪಿಟೇಷನ್ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಅದರ ಫೀಚರ್ಸ್ ಅಲ್ಲಿ ಇಂಪ್ರೂವ್ಮೆಂಟ್ ಮಾಡಿದರೆ ಕಾಂಪಿಟೇಷನ್ ಅಲ್ಲಿ ಮುಂದು ಹೋಗಲು ಸಾಧ್ಯ ಎಂದು ಅರಿತಿರುವ ಓಲಾ (Ola), ತನ್ನ ನ್ಯೂ ಎಲೆಕ್ಟ್ರಿಕಲ್ ಸ್ಕೂಟರ್ ಅಲ್ಲಿ ರಿಮೂವಬಲ್ ಬ್ಯಾಟರಿಯನ್ನು ಅಳವಡಿಸಲು ಯೋಚಿಸಿದೆ. ಇದರಿಂದಾಗಿ ನಾವು ಎಲ್ಲಿ ಬೇಕಾದರೂ ಸ್ಕೂಟರ್ ನ ಬ್ಯಾಟರಿ ತೆಗೆದುಕೊಂಡು ಸುಲಭವಾಗಿ ಚಾರ್ಜ್ ಮಾಡಬಹುದು. ಅಂದುಕೊಂಡಂತೆ ಆದರೆ ನಾವು ಸ್ಕೂಟರ್ ಸಮೇತ ಚಾರ್ಜ್ ಮಾಡುವ ಬದಲು, ಮನೆ ಅಥವಾ ಆಫೀಸ್ ಒಳಗಡೆ ಬ್ಯಾಟರಿ ಅನ್ನು ತೆಗೆದುಕೊಂಡು ಹೋಗಿ ಸುಲಭವಾಗಿ ಚಾರ್ಜ್ ಮಾಡಬಹುದು.
Ola New Electrical Vehicle Charging :
ಓಲಾ (Ola) ಈಗಾಗಲೇ ಫಿಕ್ಸೆಡ್ ಬ್ಯಾಟರಿ ಸ್ಕೂಟರ್ ಗೆ ಚಾರ್ಜಿಂಗ್ ಸ್ಟೇಷನ್ ಅನ್ನು ನಿರ್ಮಿಸುತ್ತಿದೆ. ಈಗ ಅದರ ಜೊತೆಯಲ್ಲೇ ರಿಮೂವಬಲ್ ಬ್ಯಾಟರಿ ಗೆ ಸಹ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಿಗುವಂತೆ ಮಾಡಲು, ಅದೇ ಸ್ಟೇಷನ್ ಅಲ್ಲಿ ರಿಮೂವಬಲ್ ಬ್ಯಾಟರಿ ಚಾರ್ಜಿಂಗ್ ವ್ಯವಸ್ಥೆ ಸಹ ಸಿದ್ದಪಡಿಸುವ ಸಾಧ್ಯತೆ ಇದೆ.
ಇದು ಅಂದುಕೊಂಡಷ್ಟು ಸುಲಭವಲ್ಲದಿದ್ದರೂ ಸಹ ಕೆಲವು ಎಲೆಕ್ಟ್ರಿಕಲ್ ವೆಹಿಕಲ್ ಅಲ್ಲಿ ಈ ಸೌಲಭ್ಯ ಇರುವುದರಿಂದ ಅಸಾಧ್ಯ ಅಂತೂ ಅಲ್ಲವೇ ಅಲ್ಲ.
Ola New Electrical Scooter features:
ಇನ್ನು ನ್ಯೂ ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ನ ಇತರ ಫೀಚರ್ಸ್ ಹೇಳುವುದಾದರೆ ಇದರ ಡಿಸೈನ್ ಅಲ್ಲಿ ಇಂಪ್ರೂವ್ ಮಾಡಿದ್ದೂ, ಫೂಟ್-ಸ್ಪೇಸ್ ಜೊತೆಗೆ ಇತರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ ಉತ್ತಮ ಸ್ಪೇಸ್ ಅನ್ನು ನೀಡಲಾಗುವುದು ಎಂಬ ಸುದ್ದಿ ಕೇಳಿಬರುತ್ತಿದೆ. ಅಷ್ಟೇ ಅಲ್ಲದೆ ಇದರಲ್ಲಿ ಟ್ಯೂಬಲರ್ ಚಸ್ಸಿಸ್ ಜೊತೆಗೆ ಡೌನ್ ಟ್ಯೂಬ್ ಮತ್ತು ಸಿಂಪಲ್ ಆದ ಹ್ಯಾಂಡಲ್ ಬಾರ್ ಹೊಂದಿರಲಿದೆ ಎನ್ನಲಾಗಿದೆ.