ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕ ನಟನಾಗಿ ನಟಿಸಿರುವ ಕಾಟೇರ ಸಿನಿಮಾ ಕರ್ನಾಟಕಾದ್ಯಂತ ಅತ್ಯುತ್ತಮ ಪ್ರದರ್ಶನ ಕಂಡಿದೆ. ಇನ್ನು ಕೆಲವು ಕಾರಣಗಳಿಂದ ಥೇಟರ್ ಗೆ ಹೋಗಿ ನೋಡಲು ಆಗದೆ, ಇನ್ನು ಕೆಲವರು ಇನ್ನೊಮ್ಮೆ ನೋಡಲು ಕಾಟೇರ ott ರಿಲೀಸ್ ಡೇಟ್ (Kaatera Ott Release Date)ಗಾಗಿ ಕಾಯುತ್ತಿದ್ದಾರೆ.
ಕರ್ನಾಟಕದ ಒಂದು ಹಳ್ಳಿಯಲ್ಲಿ ನಡೆದ ಘಟನೆಯ ಆಧಾರಿತ ಕಾಟೇರ ಸಿನಿಮಾ 45 ಕೋಟಿ ಬಜೆಟ್ ಅಲ್ಲಿ ನಿರ್ಮಾಣವಾಗಿದೆ. ತರುಣ್ ಸುಧೀರ್ ಅವರ ಕಥೆ ಹಾಗೂ ಡೈರೆಕ್ಷನ್ ನಲ್ಲಿ ಮೂಡಿ ಬಂದ ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ಅವರು ತಮ್ಮ ರಾಕ್ ಲೈನ್ ಎಂಟರ್ಟೈನ್ಮೆಂಟ್ಸ್ ಪ್ರೊಡಕ್ಷನ್ ಹೌಸ್ ಮೂಲಕ ಪ್ರೊಡ್ಯೂಸ್ ಮಾಡಿದ್ದಾರೆ. ಇದಕ್ಕೆ ಸುಧಾಕರ್ ಎಸ್. ರಾಜ್ ಅವರ ಸಿನೆಮಾಟೋಗ್ರಾಫಿ ಮಾಡಿದ್ದೂ, ಮ್ಯೂಸಿಕ್ ಡೈರೆಕ್ಷನನ್ನು ವಿ ಹರಿಕೃಷ್ಣ ಅವರು ಮಾಡಿದ್ದಾರೆ.
ಇನ್ನು ಇದರ ಕಾಸ್ಟ್ ಬಗ್ಗೆ ಹೇಳುವುದಾದರೆ ಕಾಟೇರ ಮೂವಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸಿದ್ದು ಅವರ ಜೊತೆಯಲ್ಲಿ ಆರಾಧನಾ ರಾಮ್, ಜಗಪತಿ ರಾವ್, ಕುಮಾರ್ ಗೋವಿಂದ್, ಮಾಸ್ಟರ್ ಆನಂದ್, ವಿಜನಾಥ್ ಬಿರಾದಾರ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಕಾಟೇರ ಸಿನಿಮಾ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದು, ಕರ್ನಾಟಕಾದ್ಯಂತ ಅತ್ಯುತ್ತಮ ಕಲೆಕ್ಷನ್ ಮಾಡಿದೆ. ಪ್ರಶಾಂತ್ ನೀಲ್ ಅವರ ಸಲಾರ್ ಹಾಗೂ ಶಾರುಖ್ ಖಾನ್ ಅಭಿನಯದ ಡಂಕಿ ಸಿನಿಮಾ ರಿಲೀಸ್ ಆದ ಒಂದೇ ವಾರದಲ್ಲಿ ರಿಲೀಸ್ ಆದರು ಸಹ ತನ್ನ ಕಲೆಕ್ಷನ್ ವಿಷಯದಲ್ಲಿ ಯಾವುದೇ ವ್ಯತ್ಯಾಸವನ್ನು ಕಾಟೇರ ಸಿನಿಮಾ ಮಾಡಿಕೊಂಡಿಲ್ಲ. ಸಿಕ್ಕ ಮಾಹಿತಿಗಳ ಪ್ರಕಾರ ಕಾಟೇರಾವು 190 ಕೋಟಿ ಕಲೆಕ್ಷನ್ ಮಾಡಿ 2023ರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾವಾಗಿ ಹೊರಹೊಮ್ಮಿದೆ.
ಇದೆಲ್ಲದರ ನಡುವೆ ಕೆಲವು ದರ್ಶನ್ ಅಭಿಮಾನಿಗಳಿಗೆ ನಾನಾ ಕಾರಣಗಳಿಂದ ಕಾಟೇರ ಸಿನಿಮಾವನ್ನು ವೀಕ್ಷಿಸಲು ಸಾಧ್ಯವಾಗಿಲ್ಲ, ಹಾಗೂ ಇನ್ನೂ ಕೆಲವರು ಇನ್ನೊಮ್ಮೆ ಕಾಟೇರ ಸಿನಿಮಾವನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕಾಗಿ ಅವರು ಕಾಟೇರ ಸಿನಿಮಾ ಯಾವಾಗ ಓಟಿಟಿ ಅಲ್ಲಿ ರಿಲೀಸ್ ಆಗುತ್ತೆ ಎಂದು ಕಾಯುತ್ತಿದ್ದಾರೆ. ಹಾಗೆ ಕಾಯುತ್ತಿರುವವರಿಗೆಲ್ಲ ಸಿಹಿ ಸುದ್ದಿ ಸಿಕ್ಕಿದೆ. ಏಕೆಂದರೆ ಕಾಟೇರ ಸಿನಿಮಾ OTT ಪ್ಲಾಟ್ಫಾರ್ಮ್ ಆದ Zee 5 ಅಲ್ಲಿ ಇದೆ ತಿಂಗಳು ಅಂದರೆ ಫೆಬ್ರವರಿ 09ರಂದು ರಿಲೀಸ್ ಆಗಲಿದೆ. ನೀವು Zee 5 ಸಬ್ಸ್ಕ್ರಿಪ್ಷನ್ ಹೊಂದಿದ್ದಾರೆ ಫೆಬ್ರವರಿ 09ರಂದು ಕಾಟೇರ ಕನ್ನಡ ಮೂವಿ ಅನ್ನು ನೋಡಬಹುದಾಗಿದೆ.