ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರ ಟಾಕ್ಸಿಕ್ ಗಾಗಿ ಚಿತ್ರತಂಡ ಕಲಾವಿದರ ಹುಡುಕಾಟದಲ್ಲಿದೆ. ಅಷ್ಟಕ್ಕೆ ನಿಲ್ಲದೆ ಚಿತ್ರ ತಂಡ ಶಾರುಖ್ ಖಾನ್ ಅವರನ್ನು ಕಾಸ್ಟ್ ಮಾಡಲು ಯೋಚಿಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ.
ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಾಪ್ಟರ್ 1 ಮೂಲಕ ಇಡೀ ದೇಶಕ್ಕೆ ಪರಿಚಯವಾದರೂ ಹಾಗೂ ಕೆಜಿಎಫ್ ಚಾಪ್ಟರ್ 2 ನಂತರ ನ್ಯಾಷನಲ್ ಸ್ಟಾರ್ ಆಗಿ ಯಶ್ ಅವರು ಹೊರಹೊಮ್ಮಿದ್ದಾರೆ.
ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿ ದೇಶಾದ್ಯಂತ ಉತ್ತಮ ಕಲೆಕ್ಷನ್ ಅನ್ನು ಮಾಡಿತ್ತು, ಈ ಮೂಲಕ ಯಶ್ ಗೆ ಒಂದು ಉತ್ತಮ ಬ್ರಾಂಡ್ ವ್ಯಾಲ್ಯೂ ಅನ್ನು ನೀಡಿತು. ಇದಾದ ನಂತರ ಯಶ್ ಅವರ ಮುಂದಿನ ಚಿತ್ರ ಯಾವುದು ಎಂದು ಅಭಿಮಾನಿಗಳು ಬಕಾಪಕ್ಷಿ ಅಂತೆ ಕಾಯುತ್ತಿದ್ದರು. ಎಷ್ಟೋ ಡೈರೆಕ್ಟ್ರರ್ ಅವರು ಯಶ್ ಅವರು ತಮ್ಮ ಮುಂದಿನ ಚಿತ್ರಕ್ಕೆ ನಾಯಕ ನಟನಾಗುವಂತೆ ಕೇಳಿಕೊಂಡರು. ಆಗ ತುಂಬಾ ಗಾಳಿ ಸುದ್ದಿಗಳು ಸಹ ಹಬ್ಬಿದ್ದವು. ಹಿಂದಿಯ ರಾಮಾಯಣದಲ್ಲಿ ಯಶ್ ರಾವಣನ ಪಾತ್ರವನ್ನು ಮಾಡುವುದಾಗಿ ಸಹ ಮಾತು ಕೇಳಿಬಂದಿತ್ತು. ಅದಾದ ನಂತರ ಅದೆಲ್ಲ ಸುಳ್ಳು ಎಂದು ತಿಳಿಯಿತು. ಇಷ್ಟೆಲ್ಲಾ ಆದಮೇಲೆ ತುಂಬಾ ಸಮಯವನ್ನು ತೆಗೆದುಕೊಂಡು ಯೋಚಿಸಿ ಯಶ್ ಅವರು ಗೀತಾ ಮೋಹನ್ ದಾಸ್ ಅವರ ಟಾಕ್ಸಿಕ್ ಮೂವಿಯಲ್ಲಿ ನಟಿಸಲು ಒಪ್ಪಿಕೊಂಡರು.
ಗೀತಾಮೋಹನ್ ದಾಸ್ ಅವರು ಮಲಯಾಳಂ ಡೈರೆಕ್ಟರ್ ಆಗಿದ್ದು ಇದುವರೆಗೆ ಎರಡು ವಿಭಿನ್ನ ಚಲನಚಿತ್ರವನ್ನು ತೆಗೆದಿದ್ದಾರೆ. ಈಗ ಅವರು ಯಶ್ ಅವರ ಟಾಕ್ಸಿಕ್ ಸಿನಿಮಾವನ್ನು ನಿರ್ದೇಶಸುತ್ತಿದ್ದಾರೆ.
ಟಾಕ್ಸಿಕ್ ಮೂವಿ ಕಾಸ್ಟಿಂಗ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲವಾದರೂ ಹಲವಾರು ಊಹಾಪೊಹಗಳು ಇಂಡಸ್ಟ್ರಿ ಅಲ್ಲಿ ಕೇಳಿಬಂದವು, ಸಾಯಿ ಪಲ್ಲವಿ ಅವರು ಟಾಕ್ಸಿಕ್ ಮೂವಿಯ ನಾಯಕಿ ಎಂಬ ಮಾತು ಕೇಳಿ ಬಂದು ಹಾಗೆ ಹೋಯಿತು. ನಂತರ ಬಾಲಿವುಡ್ ನ ಖ್ಯಾತ ನಟಿ ಕರೀನಾ ಕಪೂರ್ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೆಲ್ಲದರ ನಡುವೆ ಕಿಂಗ್ ಖಾನ್ ಎಂದು ಖ್ಯಾತಿ ಪಡೆದಿರುವ ಶಾರುಖ್ ಖಾನ್ ಅವರು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಶಾರುಖ್ ಖಾನ್ ಅವರಿಗೆ 2023ನೇ ವರ್ಷ ತುಂಬಾ ಯಶಸ್ಸನ್ನು ತಂದು ಕೊಟ್ಟಿದೆ. ಅವರು ನಾಯಕ ನಟನಾಗಿ ನಟಿಸಿರುವ ಪಠಾಣ್, ಜವಾನ್ ಹಾಗೂ ಡಂಕಿ ಚಿತ್ರಗಳು ಭರ್ಜರಿ ಯಶಸ್ಸನ್ನು ಕಂಡಿವೆ. ಹೀಗಿರುವಾಗ ಅವರು ಯಶ್ ಅವರ ಟಾಕ್ಸಿಕ್ ಚಿತ್ರದಲ್ಲಿ ನಟಿಸುವ ಮಾತುಗಳು ಕೇಳಿ ಬಂದಿವೆ.
EXCLUSIVE BUZZ: #ShahRukhKhan approached for an extended cameo in #Yash & #GeetuMohandas’ #Toxic – Detailed Report!https://t.co/oySRnlonay
— Himesh (@HimeshMankad) February 5, 2024
ಸಿಕ್ಕಿರುವ ಮಾಹಿತಿಗಳ ಪ್ರಕಾರ ಯಶ್ ಟಾಕ್ಸಿಕ್ ಮೂವಿ ಅಲ್ಲಿ ಶಾರುಖ್ ಖಾನ್ ಅವರು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಈ ಚಿತ್ರದಲ್ಲಿರುವ ಅತಿಥಿ ಪಾತ್ರ ಅತಿ ಮುಖ್ಯವಾದ ಕ್ಯಾರೆಕ್ಟರ್ ಆಗಿದ್ದು ಅದಕ್ಕೆ ಚಿತ್ರ ತಂಡ ದೊಡ್ಡ ನಾಯಕ ನಟನಿಗಾಗಿ ಹುಡುಕಾಡುತಿತ್ತು. ಈಗ ಶಾರುಖ್ ಖಾನ್ ಅವರ ಯಶಸ್ಸನ್ನು ನೋಡಿದ ಮೇಲೆ ಅವರನ್ನೇ Toxic Movie ಯ ಅತಿಥಿ ಪಾತ್ರಕ್ಕೆ ಸೂಕ್ತ ಎಂದು ಭಾವಿಸಿ. ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಮಾತು ಕೇಳಿಬಂದಿದೆ. ಆದರೆ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಬೇಕಿದೆ.