ಬಿಗ್ ಬಾಸ್ ಕಾರ್ತಿಕ್ ಸಂಗೀತಾ ಬಗ್ಗೆ ಇಂಟರ್ವ್ಯೂವ್ ಅಲ್ಲಿ ಕೆಲವೊಂದು ಮಾಹಿತಿಯನ್ನು ಹಂಚಿಕೊಂಡರು ಅದೇನು ಎಂದು ಇಲ್ಲಿ ನೋಡೋಣ.
ಕಲರ್ಸ್ ಕನ್ನಡದ ಬಿಗ್ ಬಾಸ್ ಸಿಸೆನ್ 10 ವಿನ್ನರ್ ಕಾರ್ತಿಕ್ ಅವರು ಮೊದಲು ಬಿಗ್ ಬಾಸ್ ಅಲ್ಲಿ ಸೇರಲು ಇಚ್ಛೆಪಡಲಿಲ್ಲ. ನಂತರ ಕೊನೆಯ ಕ್ಷಣದಲ್ಲಿ ಹೇಗೋ ಒಪ್ಪಿಕೊಂಡು ಬಿಗ್ ಬಾಸ್ ಅನ್ನು ಸೇರಿದರು. ಮೊದಲೆಲ್ಲ ಇವರ ಪರ್ಫಾರ್ಮೆನ್ಸ್ ನೋಡಿ ಇವರಿಗೆ ತಾನು ಬಿಗ್ ಬಾಸ್ ನ ವಿನ್ನರ್ ಆಗುತ್ತೇನೆ ಎಂದು ನಂಬಿಕೆ ಇರಲಿಲ್ಲ. ವಿನಯ್ ಜೊತೆಗಿನ ಹಲವಾರು ವರ್ಷಗಳ ಫ್ರೆಂಡ್ಶಿಪ್ ಸ್ಟಾರ್ಟಿಂಗ್ ಅಲ್ಲಿ ಚೆನ್ನಾಗಿತ್ತಾದರೂ ಮತ್ತೆ ಹೋಗುತ್ತಾ ಹೋಗುತ್ತಾ ಬೀಗಡಾಯಿಸತೊಡಗಿತು. ಇದೆಲ್ಲದರ ನಡುವೆ ಕಾರ್ತಿಕ್ ಹೆಚ್ಚು ಸುದ್ದಿಯಾದದ್ದು ಸಂಗೀತಾ ಅವರ ಜೊತೆಗಿನ ಫ್ರೆಂಡ್-ಶಿಪ್ ಕಾರಣಕ್ಕೆ. ನೋಡುಗರಿಗೆ ಇಂದು ಫ್ರೆಂಡ್ಸ್-ಶಿಪ್ ಗಿಂತ ಮುಂದೆ ಹೋದಂತೆ ಭಾಸವಾಗುತ್ತಿತ್ತು. ಯಾಕೆಂದರೆ ಹಾಗೆ ಇತ್ತು ಬಿಗ್ ಬಾಸ್ ಅಲ್ಲಿ ಅವರ ಗೆಳೆತನ. ಮತ್ತೆ ಬರಬರುತ್ತಾ ಇವರ ಜೊತೆಗಿನ ಸಂಬಂಧ ಸಹ ಹಾಳಾಯಿತು. ಹೀಗೆ ಒಂದೊಂದೇ ಹಂತವನ್ನು ದಾಟಿಕೊಂಡು ಕಲರ್ಸ್ ಕನ್ನಡದ ಬಿಗ್ ಬಾಸ್ ಸಿಸೇನ್ 10ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಅವರು ಹೊರ ಹೊಮ್ಮಿದರು.
ಇದಾದ ನಂತರ ಕಲರ್ಸ್ ಕನ್ನಡದಲ್ಲಿ ಕಾರ್ತಿಕ್ ಅವರನ್ನು ಬಿಗ್ ಬಿಗ್ ಬಾಸ್ ಮನೆಯಲ್ಲಿ ಆದ ಅನುಭವ ಹಾಗೂ ಇನ್ನು ಅನೇಕ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಕಾರ್ತಿಕ್ ಅವರು ಏನೆಂದು ಉತ್ತರಿಸಿದರು ಎಂದು ನೋಡೋಣ.
ಕಾರ್ತಿಕ್ ಹಾಗೂ ವಿನಯ್ ಅವರ ಹತ್ತು ವರ್ಷಗಳ ಸ್ನೇಹ ಬಿಗ್ ಬಾಸ್ ಅಲ್ಲಿ ಮುರಿದು ಬಿದ್ದಿದ್ದರ ವಿಷಯವಾಗಿ ಪ್ರಶ್ನೆಯನ್ನು ಕೇಳಿದಾಗ, ಕಾರ್ತಿಕ್ ಅವರು ನಾನು ಮತ್ತು ವಿನಯ್ ಹಲವು ವರ್ಷಗಳ ಫ್ರೆಂಡ್ಸ್ ಆಗಿದ್ದೇವೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಸಹ ಆಗಿರುತ್ತೆವೆ. ನಾವು ಆಟವನ್ನು ಆಟದ ರೀತಿ ಹೇಗೆ ಆಡಬೇಕು ಹಾಗೆ ಆಡುತ್ತೇವೆ. ವಿನಯ್ ಸಹ ಚೆನ್ನಾಗಿ ಆಡಿದ. ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ನಾವಿಬ್ಬರು ಮೊದಲಿನಂತೆ ಸ್ನೇಹಿತರು ಎಂದು ಹೇಳಿದರು.
ಇನ್ನು ನೀವು ಬಿಗ್ ಬಾಸ್ ಮನೆಯಿಂದ ಈಗ ನಿಮ್ಮ ಮನೆಗೆ ಬಂದಿದ್ದೀರಿ ನೀವು ಬಿಗ್ ಬಾಸ್ ಮನೆಯಿಂದ ಏನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಕಾರ್ತಿಕ್, ಬಿಗ್ ಬಾಸ್ ಮನೆಯಲ್ಲಿ ನಮ್ಮ ಮಾರ್ನಿಂಗ್ ಸಾಂಗ್, ಬಿಗ್ ಬಾಸ್ ವಾಯ್ಸ್, ಹಾಗೂ ಅಲ್ಲಿನ ಬೆಲ್, ನಾವೇನಾದ್ರೂ ತಪ್ಪು ಮಾಡಿದರೆ ಸುದೀಪ್ ಸರ್ ಅವರು ನಮಗೆ ಬುದ್ಧಿ ಹೇಳುತ್ತಿದ್ದರು ಹಾಗಾಗಿ ಅವರನ್ನು ಈಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಇನ್ನು ಕಾರ್ತಿಕವರನ್ನು ಸಂಗೀತ ಬಗ್ಗೆ ಕೇಳಿದಾಗ ನಾವು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಸ್ನೇಹಿತರಾಗಿದ್ದೆವು, ಮೊದಲೆಲ್ಲಾ ಚೆನ್ನಾಗಿತ್ತು, ಬರುಬರುತ್ತಾ ಕೆಲವೊಂದು ವಿಷಯದಲ್ಲಿ ಮನಸ್ತಾಪ ಆಗಲಿಕ್ಕೆ ಸ್ಟಾರ್ಟ್ ಆಯಿತು. ಏನೇ ಆದ್ರೂ ಬಿಗ್ ಬಾಸ್ ಇಂಡಿವಿಜುಲ್ ಆಟ ಅವರಿಗೆ ಹೇಗೆ ಅನ್ನಿಸುತ್ತೋ ಹಾಗೆ ಆಡಬೇಕು. ಸಂಗೀತಾ ಜೊತೆ ಫ್ರೆಂಡ್-ಶಿಪ್ ಅನ್ನು ಬೇಡ ಎನ್ನುವುದಿಲ್ಲ. ಫ್ರೆಂಡ್-ಶಿಪ್ ಬದುಕಲ್ಲಿ ಅತಿ ಮುಖ್ಯ ಎಂದು ಹೇಳಿದರು.
ಕೊನೆಗೆ ಕಾರ್ತಿಕ್ ಅವರು ತಮಗೆ ಬಿಗ್ ಬಾಸ್ ಇಂದ ಸಾಕಷ್ಟು ಸಹಾಯವಾಗಿದೆ. ಈಗ ಎಲ್ಲರೂ ನನ್ನನ್ನು ಗುರುತಿಸುತ್ತಾರೆ. ಸಾಕಷ್ಟು ಅವಕಾಶಗಳು ನನ್ನನ್ನು ಹುಡುಕಿ ಬರುತ್ತಿದೆ. ಇದೆಲ್ಲ ನೋಡಿದರೆ ಬಿಗ್ ಬಾಸ್ ನನಗೆ ಎಷ್ಟು ಸಹಾಯ ಮಾಡಿದೆ ಎಂದು ತಿಳಿಯುತ್ತದೆ ಎಂದು ಹೇಳಿದರು.