ಸಿಟ್ರೋನ್ ಕಡೆಯಿಂದ Citroen C3 Aircross, 15 ಸೆಪ್ಟೆಂಬರ್ 2023ರಂದು ಲಾಂಚ್ ಆಗಿತ್ತು. ಇದರ ಫೀಚರ್ಸ್ ತುಂಬಾ ಅದ್ಭುತವಾಗಿತ್ತು ಆದರೆ ಇದರಲ್ಲಿ ಆಟೋಮೆಟಿಕ್ ಗೇರ್ ಬಾಕ್ಸ್ ಇರಲಿಲ್ಲ. ಈ ಸಮಸ್ಯೆಯನ್ನು ದೂರ ಮಾಡಲು ಸಿಟ್ರೋನ್ ಈಗ ಆಟೋಮೆಟಿಕ್ ಗೇರ್ ಬಾಕ್ಸ್ ಹೊಂದಿರುವ Citroen C3 Aircross automatic launch ಮಾಡಲು ಸಿದ್ಧತೆ ನಡೆಸುತ್ತಿದೆ.
Citroen C3 Aircross Automatic Launch Date:
ಸಿಕ್ಕ ಮಾಹಿತಿಗಳ ಪ್ರಕಾರ Citroen C3 Aircross automatic Launch Date ಇದೇ ವರ್ಷದ ಜನವರಿ ತಿಂಗಳ ಕೊನೆಯಲ್ಲಿ ಎಂದು ಹೇಳಲಾಗುತ್ತಿದೆ.
Citroen C3 Aircross Automatic Price in India:
ಅಧಿಕೃತವಾಗಿ Citroen C3 Aircross automatic price ಬಗ್ಗೆ ಕಂಪನಿ ಮಾಹಿತಿ ನೀಡಿಲ್ಲ. ಕೆಲವು ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ ಇದರ ಕೆಲವು ಡೀಲರ್ಸ್ ಅವರು ₹25,000 ಪರ್ ಟೋಕನ್ ಮೂಲಕ ಪ್ರಿ-ಬುಕಿಂಗ್ ಶುರು ಮಾಡಿದ್ದಾರೆ ಎಂಬ ಮಾಹಿತಿ ಇದೆ.
Citroen C3 Aircross Automatic Features and Specification:
ಸಿಟ್ರೋನ್ C3 ಏರ್-ಕ್ರಾಸ್ ಆಟೋಮ್ಯಾಟಿಕ್ ಅಲ್ಲಿ ಆಟೋಮ್ಯಾಟಿಕ್ ಗೇರ್ ಹೊಂದಿದೆ ಅನ್ನೋದನ್ನ ಬಿಟ್ಟರೆ ಬೇರೆ ಯಾವುದೇ ಮಾಹಿತಿ ಕಂಪನಿ ಕಡೆಯಿಂದ ಅಧಿಕೃತಗೊಂಡಿಲ್ಲ. ಆದರೆ ಕೆಲವು ಎಕ್ಸ್ಪರ್ಟ್ಸ್ ಹೇಳೋ ಪ್ರಕಾರ Citroen C3 Aircross automatic 6 ಸ್ಪೀಡ್ ಗೇರ್-ಬಾಕ್ಸ್ ಜೊತೆಗೆ ಬರಲಿದೆ. ಅಷ್ಟೇ ಅಲ್ಲದೆ 1.6 ಲೀಟರ್ ಮೂರು ಸಿಲಿಂಡರ್ ಟೂರ್ಬೋ ಪೆಟ್ರೋಲ್ ಇಂಜಿನ್ ಆಗಿರೋ ಸಾಧ್ಯತೆ ಇದೆ.
Citroen C3 Aircross Key Specification:
ಇನ್ನೂ, ಈಗಾಗಲೇ ಲಾಂಚ್ ಆಗಿರುವ Citroen C3 Aircross Key Specification ಬಗ್ಗೆ ಹೇಳೋದಾದ್ರೆ 5 ರಿಂದ 7 ಸಿಟ್ಸ್ ಆಪ್ಷನ್ ಇರೋ ಈ ಕಾರಲ್ಲಿ 1199ಸಿಸಿ ಇಂಜಿನ್ ಇದೆ. ಇದು ಮಾನ್ಯುಯಲ್ ಟ್ರಾಸ್ಮಿಷನ್ ಹೊಂದಿದ್ದು ಪೆಟ್ರೋಲ್ ಇಂಜಿನ್ ಹೊಂದಿದೆ. ಜೊತೆಗೆ 18.5kmpl ಮೈಲೇಜ್ ಕೊಡುತ್ತದೆ. ಇದರ ಮ್ಯಾಕ್ಸಿಮಮ್ ಪವರ್ 109bhp ಹಾಗೂ ಮ್ಯಾಕ್ಸಿಮಮ್ 190nm ಟಾರ್ಕ್ (torque) ಇದೆ. ಜೊತೆಗೆ ಇದರ ಪ್ರೈಸ್ Rs.9.99 ಲಕ್ಷದಿಂದ ಶುರುವಾಗಿ Rs.12.97 ಲಕ್ಷದವರೆಗೆ ಇದೆ.