Hero Splendor Plus Xtech ಈಗ EMI ಅಲ್ಲಿ!

Hero Splendor Plus Xtech
Hero Splendor Plus Xtech

ಟಾಪ್ ಮೋಟಾರ್ ಸೈಕಲ್ ಬ್ರಾಂಡ್ ಅವುಗಲ್ಲಿ ಒಂದಾಗಿರುವ ಹೀರೋ ಕಡೆಯಿಂದ Hero Splendor Plus Xtech ಬೈಕ್ EMI ಅಲ್ಲಿ ಸಿಗುತ್ತಿದೆ. 2024 ವರ್ಷದಲ್ಲಿ ಬೈಕ್ ಖರೀದಿಸಲು ಯೋಚಿಸುವವರಿಗೆ ಒಂದು ಒಳ್ಳೆ ಆಪ್ಷನ್ ಸಿಕ್ಕಿದ ಹಾಗೆ ಆಗಿದೆ. ಏಕೆಂದರೆ ಒಂದೇ ಸಾರಿ ಲಂಬ್-ಸಮ್ ಹಣ ಕೊಟ್ಟು ಬೈಕ್ ಖರೀದಿಸಲು ಕಷ್ಟವಾಗುವವರಿಗೆ ಇಎಂಐ ಒಪ್ಶನ್ ಸಹ ಇದೆ. ಇದರಿಂದಾಗಿ ಬೈಕ್ ಕೊಂಡು ಒಂದೇ ಸಾರಿ ಹಣ ಕೊಡುವುದರ ಬದಲು ಪ್ರತಿ ತಿಂಗಳು EMI ರೂಪದಲ್ಲಿ ಹಣ ಪಾವತಿಸಬಹುದಾಗಿದೆ.

Hero Splendor Plus Xtec Engine:

Hero Splendor Plus Xtech engine ಬಗ್ಗೆ ಹೇಳುವುದಾದರೆ ಇದು ಸ್ಪಾರ್ಕ್ ಪ್ಲಗ್ ಸಿಂಗಲ್ ಏರ್ ಕೂಲ್ಡ್ ಸಿಲಿಂಡರ್ ಹೊಂದಿದ್ದು 97.2ಸಿಸಿ ಇಂಜಿನ್ ಆಗಿದೆ. ಇದು ಮ್ಯಾಕ್ಸಿಮಮ್ ಪವರ್ 8000 rpm ಅಲ್ಲಿ 7.9 bhp ಹಾಗೂ ಮ್ಯಾಕ್ಸಿಮಮ್ ಟಾರ್ಕ್ಯೂ (Torque) 6000 rpm ಅಲ್ಲಿ 8.05 Nm ಕೊಡುತ್ತದೆ.

ಸಿಕ್ಕ ಮಾಹಿತಿ ಪ್ರಕಾರ Hero Splendor Plus Xtech ಮೈಲೆಜ್ 60 ಕಿಲೋಮೀಟರ್/ಲೀಟರ್ ಆಗಿದ್ದು, ರೈಡಿಂಗ್ ರೇಂಜ್ 588ಕಿ.ಮೀ.ಹಾಗೂ ಟಾಪ್ ಸ್ಪೀಡ್ 87 Kmph ಆಗಿದೆ.

ಟ್ರಾನ್ಸಾಮಿಷನ್ ಮಾನ್ಯುಯಲ್ ಆಗಿದೆ. ಇದರಲ್ಲಿ ನಾಲ್ಕು ಗೇರ್ ಇದ್ದು ಎಲ್ಲ ಅಪ್-ಗೇರ್ ಆಗಿದೆ. ಇದರ ಬೋರ್ 50 mm ಹಾಗೂ ಸ್ಟ್ರೋಕ್ 49.5 mm ಇದೆ.

ಕಂಪ್ರೆಷನ್ ರೆಸಿಯೋ 9.9:1 ಇದೆ. ವೆಟ್ ಮಲ್ಟಿಪ್ಲೇಟ್ ಕ್ಲಚ್ ಆಗಿದ್ದು, ಫ್ಯೂಲ್ ಟ್ಯಾಂಕ್ ಕೆಪ್ಯಾಸಿಟಿ 9.8 ಲೀಟರ್ಸ್ ಹಾಗೂ ರಿಸರ್ವ್ ಫ್ಯೂಲ್ ಕೆಪ್ಯಾಸಿಟಿ 1 ಲೀಟರ್ಸ್ ಹೊಂದಿದ್ದು ಪೆಟ್ರೋಲ್ ಇಂಜಿನ್ ಆಗಿದೆ.

Hero Splendor Plus Xtech Brakes, Wheels & Suspension:

ಬೈಕ್ ರೈಡರ್ಸ್ ಉತ್ತಮ ರೈಡಿಂಗ್ ಎಕ್ಸ್ಪೀರಿಯೆನ್ಸ್ ಕೊಡುವ Hero Splendor plus xtech suspension ಬಗ್ಗೆ ಹೇಳುವುದಾದರೆ ಟೆಲೆಸ್ಕೋಪಿಕ್ ಹೈಡ್ರಾಲಿಕ್ ಶಾಕ್ ಎಬ್ಸೊರ್ಬರ್ಸ್ ಫ್ರಂಟ್ ಸಸ್ಪೆಂನ್ಶನ್ ಹಾಗೂ 5- ಸ್ಟೆಪ್ ಅಡ್ಜಸ್ಟಬಲ್ ಹೈಡ್ರಾಲಿಕ್ ಶಾಕ್ ಎಬ್ಸೊರ್ಬರ್ಸ್ ರೇರ್ ಸಸ್ಪೆಂನ್ಶನ್ ಹೊಂದಿದೆ.

ಇನ್ನೂ ಬ್ರೇಕ್ ಬಗ್ಗೆ ಹೇಳುವುದಾದರೆ ಇಬ್ಸ್ ಬ್ರೇಕಿಂಗ್ ಸಿಸ್ಟಮ್ ಹೊಂದಿದ್ದು 130mm ಫ್ರಂಟ್ ಬ್ರೇಕ್ ಟೈಪ್, 130mm ರೇರ್ ಬ್ರೇಕ್ ಟೈಪ್ ಹೊಂದಿದೆ.

ವೀಲ್ ಬಗ್ಗೆ ನೋಡೋದಾದ್ರೆ, ಅಲ್ಲೋಯ್ (Alloy) ವೀಲ್  ಹೊಂದಿದ್ದು ರೇರ್ ವೀಲ್ ಸೈಜ್ 18 ಇಂಚ್ ಇದೆ. ಜೊತೆಗೆ ಟ್ಯೂಬ್-ಲೆಸ್ ಟೈಯರ್ ಅನ್ನು ಇದು ಒಳಗೊಂಡಿದೆ.

Hero Splendor Plus Xtech Features:

ಈ ಬಾರಿ ಹೊಸ ಫೀಚರ್ಸ್ Hero Splendor Plus Xtech ಒಳಗೊಂಡಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕಂನ್ಸೋಲ್, ಡಿಜಿಟಲ್ ಓಡೋಮೀಟರ್, ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಟ್ರಿಪ್-ಮೀಟರ್ ಹೊಂದಿದೆ. ಫ್ಯೂಲ್ ಗೇಜ್, ಕಾಲ್ ಹಾಗೂ SMS ಅಲರ್ಟ್, ಸ್ಟ್ಯಾಂಡ್ ಅಲಾರಾಂ, ಲೊವ್ ಫ್ಯೂಲ್ ಇಂಡಿಕೇಟರ್, MF ಬ್ಯಾಟರಿ, ಮೊಬೈಲ್ ಆಪ್ ಕನೇಕ್ಟಿವಿಟಿ ಹೊಂದಿದೆ.

ಇನ್ನೂ ಹೆಡ್-ಲೈಟ್, ಟೈಲ್ ಲೈಟ್ ಹಾಗೂ ಟರ್ನ್ ಸಿಗ್ನಲ್ಗೆ ಹಾಲೋಜನ್ ಬಲ್ಬ್ (Halogen Bulb) ಅನ್ನು ಬಳಸಲಾಗಿದೆ.

ಎಲೆಕ್ಟ್ರಿಕಲ್ ಸ್ವಿಚ್ ಸ್ಟಾರ್ಟ್ ಬಟನ್ ಹಾಗೂ USB ಚಾರ್ಜಯಿಂಗ್ ಪೋರ್ಟ್ ಸಹ ಹೊಂದಿದೆ.

ಟ್ಯೂಬಲರ್ ಡಬಲ್ ಕ್ರ್ಯಾಡಲ್ ಚಾಸ್ಸಿಸ್ ಹೊಂದಿದೆ. 112KG ಇರುವ ಬೈಕ್ 785mm ಸೀಟ್ ಎತ್ತರವಿದೆ.

Hero Splendor Plus Xtech Price:

ಈ ಬೈಕಿನ ಬಗ್ಗೆ ಇಷ್ಟೆಲ್ಲ ತಿಳಿದುಕೊಂಡ ನಂತರ ಇದರ ಪ್ರೈಸ್ ಎಷ್ಟಿರಬಹುದು ಎಂಬ ಕುತೂಹಲ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. Hero Splendor Plus Xtech Price ನೋಡುವುದಾದರೆ ಎಕ್ಸ್-ಶೋರೂಮ್ ಅಲ್ಲಿ ₹79,703/-ಗೆ ಮಾರಾಟವಾಗುತ್ತಿದೆ. ಇದರ ಜೊತೆಗೆ 5 ಇಯರ್ ವಾರೆಂಟಿ ಹಾಗೂ 70,000KM ಸ್ಟ್ಯಾಂಡರ್ಡ್ ವಾರಂಟಿ ಸಹ ಲಭ್ಯವಿದೆ. ಇಲ್ಲಿ ನಿಮಗೆ ನೀಲಿ, ಕಪ್ಪು, ಕಂದು ಹಾಗೂ ಬಿಳಿ ಬಣ್ಣಗಳ ಆಯ್ಕೆ ಸಹ ಇದೆ.

Hero Splendor Plus Xtech EMI Option:

ಆಗಲೇ ತಿಳಿಸಿದ ಹಾಗೆ ನಿಮಗೆ ಒಮ್ಮೆಲೆ ಪೂರ್ತಿ ಹಣ ಕೊಟ್ಟು ಖರೀದಿಸಲು ಕಷ್ಟವಾದರೆ EMI ಒಪ್ಶನ್ ಲಭ್ಯವಿದೆ. ಇಲ್ಲಿ ನೀವು ₹10,000/- ಡೌನ್ ಪೇಮೆಂಟ್ ಮಾಡಿ 8% ಬಡ್ಡಿ ಅಲ್ಲಿ ಪ್ರತಿ ತಿಂಗಳು ₹2587 EMI ಕಟ್ಟುವಂತೆ 3 ವರ್ಷದ EMI ಪ್ಲಾನ್ ತೆಗೆದುಕೊಳ್ಳಬಹುದು.

Leave a comment