Hero XPulse 400 Launch Date :ಯಾವಾಗ ಮಾರುಕಟ್ಟೆಗೆ ಈ ಸ್ಟೈಲಿಶ್ ಬೈಕ್?

Hero XPulse 400
_____Hero XPulse 400

ಭಾರತದ ಬೆಸ್ಟ್ ಸೆಲ್ಲರ್ ಟೂ-ವಿಲ್ಲರ್ಸ್ ಕಂಪನಿಯಾದ ಹಿರೋ ಮೋಟಾರ್ ಕಾರ್ಫ್ ಈಗ ತನ್ನ ಹೊಸದೊಂದು ಬೈಕ್ ಆದ Hero XPulse 400 ಮೂಲಕ ಸುದ್ದಿಯಲ್ಲಿದೆ. ಎಲ್ಲೆಡೆ Hero XPulse 400 Launch Date ಯಾವಾಗ ಎಂಬ ಕುತೂಹಲ ಮೂಡಿಸಿದೆ. ಸಿಕ್ಕ ಮಾಹಿತಿ ಪ್ರಕಾರ ಇದೆ ವರ್ಷ ಅಂದರೆ 2024ರ ಅಕ್ಟೋಬರ್ ತಿಂಗಳಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ಆದರೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

 Hero XPulse 400 ಈಗಾಗಲೇ ಭಾರತದ ಕೆಲವು ಕಡೆ ಪರೀಕ್ಷಾರ್ಥವಾಗಿ ಓಡಿಸಲಾಗಿದೆ. ರಾಜಸ್ಥಾನದ ಜೈಪುರ್ ರೋಡ್ನಲ್ಲಿ Hero Express KTM 390 ಬೈಕ್ ಜೊತೆಯಲ್ಲಿ ಹೋಗುತ್ತಿರುವ Hero XPulse 400 testing video ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅಷ್ಟೇ ಅಲ್ಲದೆ ಬೆಂಗಳೂರಲ್ಲಿ ನಡೆದ ನ್ಯಾಷನಲ್ ರೇಸ್ ಕಾಂಪಿಟೇಷನಲ್ಲಿ ಸಹ ಕಾಣಿಸಿಕೊಂಡಿತ್ತು.

 

Hero XPulse 400 Engine:

 ಸಿಕ್ಕಿರುವ ಮಾಹಿತಿ ಪ್ರಕಾರ Hero XPulse 400 Engine ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಇಂಜಿನ್ ಎಂದು ಹೇಳಲಾಗುತ್ತಿದೆ. ಜೊತೆಗೆ 400ಸಿಸಿ ಇಂಜಿನ್ ಇರಲಿದೆ ಹಾಗೂ ಪವರ್ ಫಿಗರ್ 35bhp ಇಂದ 40php ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ದೊಡ್ಡದಾದ 15 ಲೀಟರ್ ಫ್ಯೂಲ್ ಟ್ಯಾಂಕನ್ನು ಸಹ ಇದು ಒಳಗೊಂಡಿದೆ.

Hero XPulse 400 Features:

 ಈಗಿನ ಟ್ರೆಂಡ್ ಗೆ ತಕ್ಕಂತೆ Hero XPulse 400 features  ಹಾಗೂ ಡಿಸೈನ್ ಹೊಂದಿದೆ. ದೊರೆತ ಮಾಹಿತಿ ಪ್ರಕಾರ Hero XPulse 400 ಡಿಜಿಟಲ್ ಡಿಸ್ಪ್ಲೇಯನ್ನು ಹೊಂದಿದೆ. ಅಷ್ಟೇ ಅಲ್ಲದೆ ಬೈಕನ್ನು ಇನ್ನಷ್ಟು ಹೈಟೆಕ್ ಮಾಡಲು ಬ್ಲೂಟೂತ್ ಕನೆಕ್ಟಿವಿಟಿ, USB ಚಾರ್ಜ್ ವ್ಯವಸ್ಥೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಸ್ವಿಚ್-ಎಬಲ್ ABS ಹಾಗೂ ಪುಲ್ಲಿ ಅಡ್ಜೆಸ್ಟ್ಎಬಲ್ ಸಸ್ಪೆಂನ್ಸನ್, ಟ್ರಾಕ್ಷನ್ ಕಂಟ್ರೋಲ್ ಸಹ ಇದರಲ್ಲಿದೆ.

ಜೊತೆಗೆ ಟೈರ್ ಬಗ್ಗೆ ಹೇಳುವುದಾದರೆ ಫ್ರಂಟ್ 21 ಇಂಚ್ ಟೈರ್ ಆಗಿದ್ದು ಅದರಲ್ಲೂ ಟ್ಯೂಬ್ ಟೈಪ್ ಟೈರ್ ಹೊಂದಿರುವುದಾಗಿ ಸುದ್ದಿ ಇದೆ. ಒಟ್ಟಾರೆ ಹೈಟೆಕ್ ಫೀಚರ್ಸ್ ಒಳಗೊಂಡ Hero XPulse 400 ಭಾರತದ ರಸ್ತೆಗಳಲ್ಲಿ ದೂಮ್ ಮಚಾಯಿಸಲು ಸಿದ್ಧತೆ ನಡೆಸುತ್ತಿದೆ.

ಇದರ ಬ್ರೇಕ್ ಸಿಸ್ಟಮ್ ಬಗ್ಗೆ ಹೇಳುದಾದರೆ ಸಿಂಗಲ್ ಡಿಸ್ಕ್ ಬ್ರೇಕ್ ಇರುವುದಾಗಿ ಹೇಳಲಾಗುತ್ತಿದೆ. ರೇರ್ ಡ್ರಮ್ ಬ್ರೇಕ್ ಸಹ ಇರಬಹುದು ಎಂಬ ಸುದ್ದಿ ಹರಿದಾಡುತ್ತಿದೆ.

Hero XPulse 400 Price:

 ಅತ್ಯುತ್ತಮ ಫೀಚರ್ಸ್ ಹೊಂದಿರುವ ಈ ಬೈಕಿನ ಬೆಲೆ ಎಷ್ಟಿರಬಹುದು ಎಂಬ ಚರ್ಚೆ ಎಲ್ಲೆಡೆ ಶುರುವಾಗಿದೆ. ಎಕ್ಸ್ಪರ್ಟ್ಸ್ ಅನುಸಾರ Hero XPulse 400 price ₹2 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಆದರೆ ಅಧಿಕೃತ ಮಾಹಿತಿಗಾಗಿ ಇನ್ನೂ ಕಾಯಬೇಕಷ್ಟೆ.

Leave a comment

Exit mobile version