_____Honda NX500
ಒಂದು ಸ್ಟೈಲಿಶ್ ಲುಕ್ ಜೊತೆ ಬೈಕ್ ರೈಡಿಂಗ್ ಎಂಜಾಯ್ ಮಾಡಲು ಬಯಸುವವರಿಗೆ ಹೋಂಡಾ ತನ್ನ Honda NX500 ಬೈಕ್ ಅನ್ನು ಲಾಂಚ್ ಮಾಡಲು ಹೊರಟಿದೆ. ಆಫ್ ರೋಡ್ ಅಲ್ಲಿ ಸ್ಪೋರ್ಟ್ ಬೈಕ್ ಹಾಗೆ ನಮ್ಮ ರೈಡ್ ಸ್ಟೈಲಿಶ್ ಮಾಡಲು ಸಹಾಯಕವಾಗುವಂತೆ ಇದೆ.
Honda NX500 Design:
ಎಗ್ರೆಸಿವ್ ಲುಕ್ ಹೊಂದಿರುವ Honda NX500 Design ಬಗ್ಗೆ ಹೇಳುವುದಾದರೆ ಎತ್ತರವಾದ ಸ್ಕ್ರೀನ್ ಹೊಂದಿದ್ದು ಸ್ಪೀಡಲ್ಲಿ ಹೋಗುವಾಗ ಗಾಳಿಯಿಂದ ಪ್ರೊಟೆಕ್ಷನ್ ನೀಡುತ್ತದೆ. ಹಾಗೆಯೇ LED ಹೆಡ್ ಲೈಟ್ ಹಾಗೂ ಟೆಲ್ ಲೈಟ್ ಜೊತೆಗೆ ಸ್ಟೈಲಿಶ್ ಗ್ರಾಫಿಕ್ ಡಿಸೈನ್ ಹೊಂದಿದೆ. ಹ್ಯಾಂಡಲ್ ಬಾರ್ ಬಗ್ಗೆ ಹೇಳಬೇಕೆಂದರೆ ವೈಡ್ ಹ್ಯಾಂಡಲ್ ಬಾರ್ ಹೊಂದಿದೆ. ಅಷ್ಟೇ ಅಲ್ಲದೆ ಸ್ಟೀಲ್ ಡೈಮಂಡ್ ಪ್ರೇಮ್ ಟೈಪ್ ಹೊಂದಿದೆ.
Honda NX500 Engine:
Honda NX500 Engine ಎರಡು ಸಿಲಿಂಡರ್ ಹೊಂದಿದ್ದು, ಲಿಕ್ವಿಡ್ ಕೂಲ್ಡ್ 4-ಸ್ಟ್ರೋಕ್ DOHL ಪೆರೇಲೆಲ್ ಟ್ವಿನ್ ಇಂಜಿನ್ ಟೈಪ್ ಆಗಿದೆ. 67mm ಬೋರ್ ಹಾಗೂ 66.8mm ಸ್ಟ್ರೋಕ್ ಹೊಂದಿದೆ. ಮ್ಯಾಕ್ಸಿಮಮ್ ಪವರ್ 35kW / 8,600RPM ಹಾಗೂ ಟಾರ್ಕ್ಯೂ 43Nm/6,500RPM ಆಗಿದೆ. ಬೈಕ್ ಸ್ಟಾರ್ಟ್ ಮಾಡಲು ಎಲೆಕ್ಟ್ರಿಕ್ ಸ್ಟಾರ್ಟ್ ಬಟನ್ ಹೊಂದಿದೆ. ಇದರ ಕಂಪ್ರೆಶನ್ ರೇಸಿಯೋ 10.7:1 ಆಗಿದೆ.
Honda NX500 Features:
Honda NX500 ಡುಯಲ್ ಫ್ರಂಟ್ ಬ್ರೇಕ್ 296mm x 4mm ಇದ್ದು, ಇದು ಡಿಸ್ಕ್ ಬ್ರೇಕ್ ಆಗಿದೆ ಹಾಗೂ ಸಿಂಗಲ್ ರೇರ್ ಬ್ರೇಕ್ 240mm x 5mm ಇದ್ದು ಡಿಸ್ಕ್ ಬ್ರೇಕ್ ಆಗಿದೆ. 196Kg ಕರ್ಬ್ ವೆಟ್ ಇದ್ದು, 830mm ಸೀಟ್ ಎತ್ತರವಿದೆ.
ಇದರಲ್ಲಿ 6 ಗೇರ್ ಬಾಕ್ಸ್ ಇದ್ದು, ವೆಟ್ ಮಲ್ಟಿಪ್ಲೇಟ್ , ಅಸಿಸ್ಟೆಡ್ ಸ್ಲಿಪ್ಪರ್ ಕ್ಲಚ್ ಇದೆ. 5 ಇಂಚ್ TFT ಮೀಟರ್ ಕಸ್ಟಮೈಸೇಬಲ್ ಲೇಔಟ್ ಜೊತೆಗೆ ಸ್ಪೀಡೋಮೀಟರ್, ಟ್ಯಾಚೋಮೀಟರ್, ಕ್ಲಾಕ್, ಗೇರ್ ಪೊಸಿಷನ್, ಶಿಫ್ಟ್ UP ಇಂಡಿಕೇಟರ್ ಹೊಂದಿದೆ. ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಜೊತೆಗೆ HISS ಸೆಕ್ಯೂರಿಟಿ ಫೀಚರ್ಸ್ ಸಹ ಇದೆ.
Honda NX500 Price:
ಉತ್ತಮ ಫೀಚರ್ಸ್ ಅವುಗಳಿಂದ ಕಂಗೊಳಿಸುತ್ತಿರುವ Honda NX500 Price ಬಗ್ಗೆ ಹೇಳುವುದಾದರೆ ₹7,00,000/- ದಿಂದ ₹ 8,00,000/-ವರೆಗೆ ಇರಬಹುದೆಂದು ಹೇಳಲಾಗುತ್ತಿದೆ.
Honda NX500 Launch Date in India:
Kawasaki Ninja 400, Benelli TRK 502 ಬೈಕುಗಳಿಗೆ ಕಾಂಪಿಟೇಟರ್ ಆಗಿರುವ Honda NX500 ತನ್ನ ಲಾಂಚ್ ಡೇಟ್ ಯಾವಾಗ ಎಂದು ಅಧಿಕೃತವಾಗಿ ಘೋಷಿಸಿಲ್ಲ. ಅಂದಾಜಿನ ಪ್ರಕಾರ ಇದೇ ತಿಂಗಳು ಅಂದರೆ ಜನವರಿ ಮೂರನೇ ಅಥವಾ ಕೊನೆಯ ವಾರದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ನಿಮಗೆ ಈ ಬೈಕ್ ಇಷ್ಟವಾಗಿದ್ದರೆ ಹಾಗೂ ನಿಮ್ಮ ಬಜೆಟ್ ಇದಕ್ಕೆ ತಕ್ಕಂತೆ ಇದ್ದರೆ ನೀವು ಖರೀದಿಸಬಹುದು.