ಹೊಸ ವರ್ಷಕ್ಕೆ ಕಾರ್ ಖರೀದಿಸಲು ಪ್ಲಾನ್ ಮಾಡಿ ಯಾವುದೇ ಆಫರ್ ಸಿಗದೇ ಬೇಸರ ಮಾಡಿಕೊಂಡವರಿಗೆ Hyundai Creta Offer ಒಂದನ್ನು ನೀಡಿ ಕಾರ್ ಪ್ರಿಯರನ್ನು ಆಕರ್ಷಸಿಸುತ್ತಿದೆ. Hyundai ಲೇಟೆಸ್ಟ್ ಕಾರ್ ಆದ Hyundai Creta 2024 ವರ್ಷನ್ ಕಾರು ಲಾಂಚ್ ಆದ ಸುದ್ದಿಯ ನಡುವೆ ಈ ಆಫರ್ ವಿಷಯ ಘೋಷಿಸಿ ಎಲ್ಲರು Hyundai ಕಡೆ ತಿರುಗುವಂತೆ ಮಾಡಿದೆ.
Hyundai Car Offer:
ಈಗಷ್ಟೇ ಲಾಂಚ್ ಆಗಿರುವ ಕಾರಿಗೆ ಹೇಗೆ ಆಫರ್ ಕೊಡುತ್ತಿದ್ದಾರೆ ಎಂಬೆಲ್ಲ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಹಾಗೂ Hyundai Creta new offer ಎಷ್ಟಿರಬಹುದು ಎಂಬ ಕುತೂಹಲ ಸಹ ಹೊಂದಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.
Hyundai Creta 50,000/- discount offer ನಡೆಯುತ್ತಿರುವುದು ಈಗ ಇರುವ Hyundai Creta ಓಲ್ಡ್ ವರ್ಶನ್ ಕಾರಿಗೆ ಮಾತ್ರ. ಅದು ಸಹ 50,000/- ವರೆಗೆ ಡಿಸ್ಕೌಂಟೆಡ್ ಆಫರ್ ಅಲ್ಲಿ ಕೆಲವು ಶೋರೂಮ್ ಅಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಆಫರ್ ಈ ತಿಂಗಳ ಕೊನೆಯಲ್ಲಿ ಅಂದರೆ ಜನವರಿ 31ಕ್ಕೆ ಮುಕ್ತಾಯಗೊಳ್ಳುತ್ತದೆ.
Hyundai Creta Price :
SUV ಪ್ರಿಯರ ಅಚ್ಚುಮೆಚ್ಚಿನ SUV ಆಗಿರುವ Hyundai Creta ಎಲ್ಲರ ಗಮನ ತನ್ನೆಡೆಗೆ ಆಕರ್ಷಿಸಿರುವುದು ಮಾತ್ರ ಸುಳ್ಳಲ್ಲ. Hyundai Creta price ಬಗ್ಗೆ ಮಾತನಾಡುವುದಾದರೆ ದೇಶಾದ್ಯಂತ ಎಕ್ಸ್ ಶೋರೂಮ್ ಅವುಗಳಲ್ಲಿ 10.90 ಲಕ್ಷದಿಂದ 19 ಲಕ್ಷದವರೆಗೆ ಬೆಲೆ ಇದೆ. ಕಾರ್ಗೋ ವೊಲುಮ್ 433 L ಹಾಗೂ 5 ಸೀಟ್ ಕೆಪ್ಯಾಸಿಟ್ ಇರುವ Hyundai Creta ಮಾರುಕಟ್ಟೆಯಲ್ಲಿ ದೊಡ್ಡದಾಗಿಯೇ ಸದ್ದು ಮಾಡುತ್ತಿದೆ.
Hyundai Creta Key Features :
ಸೆಪ್ಟೆಂಬರ್ ತಿಂಗಳಲ್ಲಿ 12,717 SUV ಅನ್ನು ಸೇಲ್ ಮಾಡುವ ಮೂಲಕ ಬೆಸ್ಟ್ ಸೆಲ್ಲರ್ ಆಗಿರುವ Hyundai Creta ಹಲವಾರು ಕೀ ಫೀಚರ್ಸ್ ಹೊಂದಿದೆ. Hyundai Creta key features ಬಗ್ಗೆ ಹೇಳುವುದಾದರೆ ಅತ್ಯುತ್ತಮ ಸನ್-ರೂಫ್ ಅನ್ನು ಹೊಂದಿದೆ. ಜೊತೆಯಲ್ಲಿ ಏರ್ ಪ್ಯೂರಿಫೈರ್ ಸಹ ಒಳಗೊಂಡಿದೆ. ಅಷ್ಟೇ ಅಲ್ಲದೆ ಬ್ಲೂಲಿಂಕ್ ಕನೆಕ್ಟಿವಿಟಿ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೈರ್ ಲೆಸ್ ಚಾರ್ಜ್ ವ್ಯವಸ್ಥೆ ಸಹ ಇದೆ.
Hyundai Creta Safety Features :
Hyundai Creta ಸೇಫ್ಟಿ ಫೀಚರ್ಸಗಳಾದ 6 ಏರ್ ಬ್ಯಾಗ್ಸ್ ಹಾಗೂ ಆಲ್ ವೀಲ್ ಡಿಸ್ಕ್ ಬ್ರೇಕ್ ಹೊಂದಿದೆ. ಡ್ರೈವ್ ಅಂಡ್ ಟ್ರಾಕ್ಷನ್ ಕಂಟ್ರೋಲ್ ಮೋಡ್,ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಸಹ ಇದೆ. ಸೇಫ್ಟಿ ವಿಷಯದಲ್ಲಿ ಗ್ಲೋಬಲ್ NCAP ಕಡೆಯಿಂದ 3 ಸ್ಟಾರ್ ರೇಟಿಂಗ್ ಸಹ ಪಡೆದಿದೆ.
Hyundai Creta Engine:
Hyundai Creta Engine ಬಗ್ಗೆ ಹೇಳುವುದಾದರೆ ಪೆಟ್ರೋಲ್ ಹಾಗೂ ಡೀಸೆಲ್ ಇಂಜಿನ್ಗಳ ಒಪ್ಶನ್ ನಿಮಗೆ ಇಲ್ಲಿ ಇದೆ. ಪೆಟ್ರೋಲ್ ಇಂಜಿನ್ 1494ಸಿಸಿ ಇಂದ 1497ಸಿಸಿ ಹಾಗೂ ಡೀಸೆಲ್ ಇಂಜಿನ್ 1493ಸಿಸಿ ಹೊಂದಿದೆ. ಮೈಲೆಜ್ ಬಗ್ಗೆ ಹೇಳುವುದಾದರೆ ಫ್ಯೂಲ್ ಟೈಪ್ ಮೇಲೆ ಅವಲಂಬಿತವಾಗಿದೆ, 14.0 kmpl ಇಂದ 18.0 kmpl ಕೊಡಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ 4 ಸಿಲಿಂಡರ್ ಹೊಂದಿರುವ ಕಾರ್ ಇದಾಗಿದೆ. ಮ್ಯಾಕ್ಸಿಮಮ್ ಪವರ್ 113.45 bhp ಹಾಗೂ Max torque 250nm ಆಗಿದೆ.
Hyundai Creta Facelift 2024 Launch Date:
ಎಲ್ಲರು ಕಾಯುತ್ತಿರುವ Hyundai Creta Facelift 2024 launch ಈಗಾಗಲೇ ಆಗಿದೆ. ಹೌದು, ಇದೆ ತಿಂಗಳು ಅಂದರೆ ಜನವರಿ 16 ರಂದು Hyundai Creta Facelift 2024 ಲಾಂಚ್ ಆಗಿದೆ. ಈ ಮೂಲಕ SUV ಪ್ರಿಯರ ನಿದ್ದೆಗೆಡಿಸಿದೆ. ಇನ್ನಷ್ಟು ಅತ್ಯುತ್ತಮ ಫೀಚರ್ಸ್ ಒಳಗೊಂಡ Hyundai Creta Facelift 2024 ಹಲವರ ಅಚ್ಚುಮೆಚ್ಚಿನ SUV ಆಗುವುದರಲ್ಲಿ ಅನುಮಾನವಿಲ್ಲ.
Hyundai Creta Facelift 2024 Price:
ಜನವರಿ 16ಕ್ಕೆ ಲಾಂಚ್ ಆಗಿರುವ Hyundai Creta Facelift 2024 Price ಸುಮಾರು 11 ಲಕ್ಷ ಎಂದು ಹೇಳಲಾಗುತ್ತಿದೆ. 11 ಲಕ್ಷ ದಲ್ಲಿ SUV ಖರೀದಿಸುವ ಯೋಚನೆಯಲ್ಲಿದ್ದರೆ ನೀವು ನೋಡಬಹುದು.