ICC No.1 Test Bowler ಜಸ್ ಪ್ರೀತ್ ಬುಂಬ್ರ!

ICC No.1 Test Bowler
ಜಸ್ ಪ್ರೀತ್ ಬುಂಬ್ರಾ (ICC No.1 Test Bowler)

ಜಾಗತಿಕ ಕ್ರಿಕೆಟ್ ಸಂಸ್ಥೆಯಾದ ಐಸಿಸಿಯೂ ಹೊಸದಾಗಿ ICC Test Ranking ಬಿಡುಗಡೆ ಮಾಡಿ ICC No.1 Test Bowler ಯಾರು ಎಂದು ಹೇಳಿದೆ. ಸದ್ಯ ರಿಲೀಸ್ ಆದ ICC Test Rankingನಲ್ಲಿ ಐಸಿಸಿ ನಂಬರ್ ಒನ್ ಟೆಸ್ಟ್ ಬೌಲರ್ (ICC No.1 Test Bowler) ಆಗಿ ಭಾರತದ ಪ್ರಚಂಡ ಫಾಸ್ಟ್ ಬೌಲರ್ ಜಸ್ ಪ್ರೀತ್ ಬುಂಬ್ರಾ ಅವರು ಮೂಡಿ ಬಂದಿದ್ದಾರೆ.

ಇದುವರೆಗೆ ಸಹ ಭಾರತದ ಯಾವೊಬ್ಬ ಫಾಸ್ಟ್ ಬೌಲರ್ ಸಹ ಐಸಿಸಿ ನಂಬರ್ ಒನ್ ಟೆಸ್ಟ್ ಬೌಲರ್ (ICC No.1 Test Bowler) ಆಗಿ ಹೊರಹೊಮ್ಮಿರಲಿಲ್ಲ. ಭಾರತದಿಂದ ಮೂರು ಜನ ಬೌಲರ್ ಐಸಿಸಿ ನಂಬರ್ ಒನ್ ಟೆಸ್ಟ್ ಬೌಲರ್ ಆಗಿ ಹೊರಹೊಮ್ಮಿದ್ದರೂ ಸಹ ಅವರಲ್ಲಿ ಯಾವುದೇ ಫಾಸ್ಟ್ ಬೌಲರ್ ಇರಲಿಲ್ಲ. ಆ ಮೂವರು ಆಟಗಾರರು ಸಹ ಸ್ಪಿನ್ ಬೌಲರ್ ಆಗಿದ್ದರು. ಆದರೆ ಈಗ ಜಸ್ ಪ್ರೀತ್ ಬುಂಬ್ರಾ ಅವರು ಆ ಸಾಧನೆ ಮಾಡಿದ್ದಾರೆ.

ಈ ಬಾರಿ ಜಸ್ ಪ್ರೀತ್ ಬುಂಬ್ರ ಅವರು ಸೌತ್ ಆಫ್ರಿಕಾದ ವೇಗದ ಬೌಲರ್ ಕಗಿಸೋ ರಬಾಡ ಅವರನ್ನು, ಭಾರತದ ಸ್ಪೀನ್ನರ್ ಆರ್.ರವಿಚಂದ್ರನ್ ಅವರನ್ನು ಹಾಗೂ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರನ್ನು ಹಿಂದಿಕ್ಕಿ ICC No.1 Test Bowler ಸಾಧನೆಯನ್ನು ಮಾಡಿದ್ದಾರೆ.

ಸದ್ಯವಷ್ಟೇ ನಡೆದಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಜಸ್ ಪ್ರೀತ್ ಬುಂಬ್ರ ಅವರು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಬರೋಬ್ಬರಿ 9 ವಿಕೆಟ್ ಅನ್ನು ಕಬಳಿಸಿದ್ದರು. ಅಷ್ಟೇ ಅಲ್ಲದೆ ಅದಕ್ಕೂ ಮೊದಲು ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಗಳಿಸಿದ್ದರು. ಈ ಎಲ್ಲಾ ವಿಕಿಟ್ಸ್ ಸಹ ಜಸ್ ಪ್ರೀತ್ ಬುಂಬ್ರ ಅವರಿಗೆ ICC No.1 Test Bowler ಎನಿಸಿಕೊಳ್ಳಲು ಸಹಾಯ ಮಾಡಿದೆ.

ICC No.1 Test Bowlers in India:

ಆಗಲೇ ಹೇಳಿದ ಹಾಗೆ ICC No.1 Test Bowler ಆಗಿ ಇದುವರೆಗೂ ಮೂರು ಜನ ಭಾರತೀಯ ಕ್ರಿಕೆಟ್ ಆಟಗಾರರು ಮೂಡಿ ಬಂದಿದ್ದಾರೆ. ಆದರೆ ಅವರೆಲ್ಲರೂ ಸಹ ಸ್ಪಿನ್ ಬೌಲರ್ಸ್ ಆಗಿದ್ದಾರೆ. ಅವರು ಯಾರು ಎಂದರೆ –

ಬಿಷನ್ ಸಿಂಗ್ ಬೇಡಿ 

ರವೀಂದ್ರ ಜಡೇಜಾ 

ಆರ್.ರವಿಚಂದ್ರನ್ ಅಶ್ವಿನ್.

ICC Top 10 Test Bowlers:

ಐಸಿಸಿ ನಂಬರ್ ಒನ್ ಟೆಸ್ಟ್ ಬೌಲರ್ಸ್ ಬಗ್ಗೆ ಮಾತನಾಡುವುದಾದರೆ ICC No. 1 Test Bowler ಜಸ್ ಪ್ರೀತ್ ಬುಂಬ್ರ ಬಿಟ್ಟರೆ ಇನ್ನು 2 ಜನ ಭಾರತೀಯ ಕ್ರಿಕೆಟ್ ಆಟಗಾರರು ಸಹ ICC Top 10 Test Bowlers ಯಾದಿಯಲ್ಲಿ ಬರುತ್ತಾರೆ. ಅವರೆಂದರೆ ಆರ್. ರವಿಚಂದ್ರನ್ ಅಶ್ವಿನ್. ಇವರು 841 ಅಂಕದೊಂದಿಗೆ 3ನೇ ಸ್ಥಾನದಲ್ಲಿ ಇದ್ದಾರೆ. ಇನ್ನು ಭಾರತದ ಇನ್ನೊರ್ವ ಸ್ಪಿನ್ ಬೌಲರ್ ಹಾಗೂ ಆಲ್ ರೌಂಡರ್ ಆಗಿರುವ ರವಿಚಂದ್ರ ಜಡೇಜಾ ಅವರು 746 ಅಂಕದಿಂದ 9ನೇ ಸ್ಥಾನ ಪಡೆದಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ಅನ್ನು ಕೆಳಗೆ ನೀಡಲಾಗಿದೆ.

ರಾಂಕಿಂಗ್ ಬೌಲರ್ ಅಂಕ
01 ಜಸ್ ಪ್ರೀತ್ ಬುಂಬ್ರ 881
02 ಕಗಿಸೋ ರಬಾಡ 851
03 ಆರ್. ರವಿಚಂದ್ರನ್ ಅಶ್ವಿನ್ 841
04 ಪಾಟ್ ಕಮ್ಮಿನ್ಸ್ 828
05 ಜೋಶ ಹಾಜಲ್ ವುಡ್ 818
06 ಪ್ರಭಾತ್ ಜಯಸುರಿಯ 783
07 ಜೇಮ್ಸ್ ಅಂಡೆರ್ಸನ್ 780
08 ನಾಥಾನ್ ಲಯೋನ್ 746
09 ರವೀಂದ್ರ ಜಡೇಜಾ 746
10 ಒಲ್ಲಿ ರೋಬಿನ್ಸನ್ 746

Leave a comment

Exit mobile version