Infinix Smart 8 : ಕಡಿಮೆ ದರದಲ್ಲಿ 5000mAh ಬ್ಯಾಟರಿ ಮೊಬೈಲ್!

Infinix Smart 8
_______Infinix Smart 8

ಕಡಿಮೆ ದರದಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್-ಫೋನನ್ನು ಹುಡುಕುತಿರುವವರಿಗೆ Infinix ಸಿಹಿಸುದ್ದಿಯನ್ನು ನೀಡಿದೆ. ಹೌದು, ಇನ್ಫಿನಿಕ್ಸ್ ಕಂಪನಿಯು ತನ್ನ ಹೊಸ ಸ್ಮಾರ್ಟ್-ಫೋನ್ ಆದ Infinix Smart 8 ಲಾಂಚ್ ಮಾಡಿದೆ.

5000mAh ಭರ್ಜರಿ ಬ್ಯಾಟರಿ ಹೊಂದಿರುವ ಈ ಮೊಬೈಲ್ ತನ್ನ ಇನ್ನೂ ಅನೇಕ ಫೀಚರ್ಸ್ ಅನ್ನು ಒಳಗೊಂಡಿದೆ.

Infinix Smart 8 Launch Date:

ನಾವು Infinix Smart 8 Launch Date ಯಾವಾಗ ಎಂದು ಕಾಯುವ ಅವಶ್ಯಕತೆ ಇಲ್ಲ. ಏಕೆಂದರೆ ಇನ್ಫಿನಿಕ್ಸ್ ತನ್ನ Infinix Smart 8 ಮೊಬೈಲ್ ಅನ್ನು ಇದೇ ತಿಂಗಳ ಅಂದರೆ ಜನವರಿ 15ರಂದು ಲಾಂಚ್ ಮಾಡಿದೆ. ಈ ಮೂಲಕ ಇನ್ಫಿನಿಕ್ಸ್ ಸ್ಮಾರ್ಟ್-ಫೋನ್ ಪ್ರಿಯರಿಗೆ ಒಂದು ಸಿಹಿ ಸಮಾಚಾರ ದೊರೆತಂತಾಗಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ನಮಗೆ ಕಪ್ಪು, ಗೋಲ್ಡನ್ ಕಲರ್, ಬಿಳಿ ಹಾಗೂ ನೀಲಿ ಬಣ್ಣಗಳಲ್ಲಿ ಲಭ್ಯವಿದ್ದು ನೋಡಲು ಆಕರ್ಷಕವಾಗಿದೆ.

Infinix Smart 8 Camera:

ಕ್ಯಾಮೆರಾ ಕ್ವಾಲಿಟಿ ಸುಧಾರಿಸುವಲ್ಲಿ ಸಹ ಇನ್ಫಿನಿಕ್ಸ್ ಗಮನ ಕೊಟ್ಟಿದೆ.  Infinix Smart 8 Camera  ಬಗ್ಗೆ ಹೇಳೋದಾದರೆ ಇಲ್ಲಿ ನಮಗೆ ಸಿಂಗಲ್ ರೇರ್ ಕ್ಯಾಮೆರಾ ಸಿಗಲಿದೆ. ಹೌದು, 50ಎಂಪಿ ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾ ಲಭ್ಯವಿದ್ದು 27mm ಫೋಕಲ್ ಲೆಂತ್ ಹೊಂದಿದೆ. ಇದರ ಜೊತೆ ಆಟೋಫೋಕಸ್ ಒಪ್ಶನ್ ಸಹ ಇದ್ದು ಕ್ವಾಡ್ LED ಫ್ಲಾಶ್ ಲೈಟ್ ಹೊಂದಿದೆ.

ಫ್ರಂಟ್ ಕ್ಯಾಮೆರಾ ಬಗ್ಗೆ ಹೇಳೋದಾದರೆ 8ಎಂಪಿ ವೈಡ್ ಆಂಗಲ್ ಸಿಂಗಲ್ ಪ್ರೈಮರಿ ಕ್ಯಾಮರಾ ಹೊಂದಿದೆ. ಜೊತೆಗೆ ಇಲ್ಲಿ ಫ್ರಂಟ್ ಕ್ಯಾಮೆರಾ ಜೊತೆ LED ಫ್ಲಾಶ್ ಲೈಟ್ ಸಹ ಲಭ್ಯವಿದೆ.

Infinix Smart 8 Specification:

ಕೆಲವೊಂದು ಫೀಚರ್ಸ್ ಅನ್ನು ಹೆಚ್ಚು ಮಾಡಿರುವ ಇನ್ಫಿನಿಕ್ಸ್ ಗ್ರಾಹಕರನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿದೆ. Infinix Smart 8 specification ಬಗ್ಗೆ ಮಾತನಾಡುವುದಾದರೆ ಇಲ್ಲಿ ನಮಗೆ 6.6 ಇಂಚೆಸ್ (16.76 cm) ಡಿಸ್ಪ್ಲೇ ಲಭ್ಯವಿದ್ದು ಇದು IPS LCD ಡಿಸ್ಪ್ಲೇ ಆಗಿದೆ. ಜೊತೆಗೆ 720 x 1612 ಫಿಕ್ಸೆಲ್ಸ್ ರೆಸೊಲ್ಯೂಷನ್ ಸಹ ಹೊಂದಿದೆ. ಇದರ ಅಸ್ಪೆಕ್ಟ್ ರೇಶಿಯೋ 20:9 ಆಗಿದ್ದು, 90% ಸ್ಕ್ರೀನ್ ಟು ಬಾಡಿ ರೇಶಿಯೋ ಹೊಂದಿದೆ. ಅಷ್ಟೇ ಅಲ್ಲದೆ 90Hz ರಿಫ್ರೆಶ್ ರೇಟ್ ಹೊಂದಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ಇದು ಮೀಡಿಯಾಟೆಕ್ ಹೆಲಿಯೊ G36 ಪ್ರೋಸೆಸರ್ ಹೊಂದಿದೆ. ಜೊತೆಗೆ ಇದರಲ್ಲಿ 4GB RAM ಹಾಗೂ 64GB ROM ( ಇಂಟರ್ನಲ್ ಮೆಮೊರಿ) ಹೊಂದಿದ್ದು 2TB ತನಕ ಎಕ್ಸಪಾಂಡ್ ಮಾಡುವ ಅವಕಾಶ ನೀಡಿದೆ.

ಬ್ಯಾಟರಿ ಬಗ್ಗೆ ಹೇಳೋದಾದರೆ ಲಿ-ಪೋಲಿಮರ್ (Li-Polymer) ಬ್ಯಾಟರಿ ಹೊಂದಿದ್ದು ಇದರ ಬ್ಯಾಟರಿ ಕೆಪ್ಯಾಸಿಟಿ ಭರ್ಜರಿ 5000mAh ಆಗಿದೆ. ಜೊತೆಗೆ ಚಾರ್ಜ್ ಮಾಡಲು ಟೈಪ್-ಸಿ ಕೇಬಲ್ ಸಹ ಲಭ್ಯವಿದೆ.

ಮೊಬೈಲ್ ಹೈಟ್ 163.6mm ಹಾಗೂ ಅಗಲ 75.6mm ಇದೆ. ಇನ್ನು ಇದರ ತಿಕ್ನೆಸ್ಸ್ 8.5mm ಇದ್ದು ಮೊಬೈಲ್ ಒಟ್ಟು ತೂಕ 189 ಗ್ರಾಮ್ಸ್ ಆಗಿದೆ. ಜೊತೆಗೆ ಇದರಲ್ಲಿ ಸೈಡ್ ಫಿಂಗರ್ ಫ್ರಿನ್ಟ್ ಲಾಕ್ ಸಹ ಲಭ್ಯವಿದೆ.

SpecificationDetails
RAM4 GB
Internal Memory64 GB
Expandable MemoryYes, Up to 2 TB
Battery5000 mAh
ProcessorMediaTek Helio G36
Refresh Rate90 Hz
Rear Camera50 MP
Front Camera8 MP
ColoursTimber Black, Shinny Gold, Galaxy White, Rainbow Blue
Display Size6.6 inches (16.76 cm)
Operating SystemAndroid v13
Display TypeIPS LCD
Resolution720 x 1612 pixels
Aspect Ratio20:9
Screen to Body Ratio90%
Height163.6 mm
Width75.6 mm
Thickness8.5 mm
Weight189 grams

Infinix Smart 8 Price:

ಆಗಲೇ ತಿಳಿಸಿದ ಹಾಗೆ ಉತ್ತಮ ಫೀಚರ್ಸ್ ಹೊಂದಿರುವ ಮೊಬೈಲ್ ಅನ್ನು ಇನ್ಫಿನಿಕ್ಸ್ ಕಡಿಮೆ ಬೆಲೆಯಲ್ಲಿ ಪರಿಚಯಿಸಿದೆ. ಇಲ್ಲಿ ನಮಗೆ 64GB ROM ಹಾಗೂ 3GB ಹೊಂದಿರುವ Infinix Smart 8 Price ₹6299/- ಇರಲಿದೆ.

64GB ROM ಹಾಗೂ 4GB RAM ಇರುವ Infinix Smart 8 Price ₹7499/- ಇದೆ.

ನೀವು ಫ್ಲಿಫ್-ಕಾರ್ಟ್ ಅಲ್ಲಿ ಖರೀದಿಸಿದರೆ EMI option ಸಹ ಲಭ್ಯವಿದೆ.

Leave a comment