ಸ್ಮಾರ್ಟ್-ಫೋನ್ ಜಗತ್ತಿನಲ್ಲಿ ತನ್ನ ಹೆಸರನ್ನು ಹೆಚ್ಚಿಸಿಕೊಳ್ಳುತ್ತಿರುವ iQoo ಈಗ ಇನ್ನೊಂದು ಹೊಸ ಫೋನನ್ನು ಲಾಂಚ್ ಮಾಡಲು ಹೊರಟಿದೆ. ಹೌದು, iQoo ಈಗ ಅತ್ಯುತ್ತಮ ಲುಕ್ ಹಾಗು ಫೀಚರ್ಸ್ ಅನ್ನು ಹೊಂದಿರುವ iQoo Neo 9 Pro ಲಾಂಚ್ ಮಾಡಲು ಹೊರಟಿದೆ. ಇದು ಯಾವಾಗ ಲಾಂಚ್ ಆಗುತ್ತದೆ, ಅದರ ಕ್ಯಾಮೆರಾ, ಫೀಚರ್ಸ್ ಹೇಗಿರಲಿದೆ ಎನ್ನುವುದರ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.
iQoo Neo 9 Pro Launch Date:
ಸಿಕ್ಕ ಮಾಹಿತಿಗಳ ಪ್ರಕಾರ iQoo Neo 9 Pro launch date ಇದೇ ಫೆಬ್ರವರಿ ತಿಂಗಳ 22ನೇ ತಾರೀಕಿನಂದು ಎಂದು ಹೇಳಲಾಗಿದೆ.
ಅಷ್ಟೇ ಅಲ್ಲದೆ ಅನ್ಯ ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ iQoo Neo 9 Pro Pree Booking ಫೆಬ್ರವರಿ 08ರಿಂದ ಶುರುವಾಗಲಿದೆ ಎಂದು ತಿಳಿದುಬಂದಿದೆ.
iQoo Neo 9 Pro Camera:
ಇನ್ನು iQoo Neo 9 Pro Camera ಬಗ್ಗೆ ನೋಡುವುದಾದರೆ ಇದರಲ್ಲಿ ನಮಗೆ 50MP + 50 MP ಡುಯಲ್ ಕ್ಯಾಮೆರಾವು ಬ್ಯಾಕ್ ಕ್ಯಾಮೆರಾವಾಗಿ ಸಿಗಲಿದೆ.
50 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾವನ್ನು ಪ್ರೈಮರಿ ಕ್ಯಾಮೆರಾವಾಗಿ ಹೊಂದಿದ್ದು, ಇದರಲ್ಲಿ 1.49 ಸೆನ್ಸರ್ ಸೈಜ್ ಇದೆ. ಜೊತೆಗೆ ಇದರಲ್ಲಿ ಅಪ್-ಟು 20X ಡಿಜಿಟಲ್ ಜೂಮ್ ಒಪ್ಶನ್ ಸಹ ಇದೆ.
50 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನು ಸೆಕೆಂಡರಿ ಕ್ಯಾಮೆರಾವಾಗಿ ಹೊಂದಿದ್ದು, ಇದರಲ್ಲಿ 2.7 ಸೆನ್ಸರ್ ಸೈಜ್ ಇದೆ.
ಇನ್ನು ಇದರ ಫ್ರೆಂಟ್ ಕ್ಯಾಮರಾ ವಿಷಯಕ್ಕೆ ಬಂದರೆ iQoo Neo 9 Pro 16 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾವನ್ನು ಪ್ರೈಮರಿ ಕ್ಯಾಮೆರಾವಾಗಿ ಹೊಂದಿದೆ.
iQoo Neo 9 Pro Specification:
iQoo Neo 9 Pro specification ಬಗ್ಗೆ ನೋಡುವುದಾದರೆ ಇದರಲ್ಲಿ 5160 mAh ಬ್ಯಾಟರಿ ಕೆಪಾಸಿಟಿ ಹೊಂದಿರುವ ಲಿ-ಪಾಲಿಮಾರ್ ಬ್ಯಾಟರಿಯನ್ನು ಇದು ಹೊಂದಿದೆ. ಅಷ್ಟೇ ಅಲ್ಲದೆ ಇದನ್ನು ಫಾಸ್ಟ್ ಚಾರ್ಜ್ ಮಾಡಲು 120W ಫಾಸ್ಟ್ ಚಾರ್ಜರ್ ಸಹ ನೀಡಲಾಗಿದೆ. ಈ ಫಾಸ್ಟ್ ಚಾರ್ಜರ್ ಮೂಲಕ ಕೇವಲ 9 ನಿಮಿಷಗಳಲ್ಲಿ 40% ಚಾರ್ಜನ್ನು ಪೂರ್ತಿಗೊಳಿಸಬಹುದು.
ಇನ್ನು iQoo Neo 9 Pro ಸ್ಟೋರೇಜ್ ಬಗ್ಗೆ ಹೇಳುವುದಾದರೆ ಇದರಲ್ಲಿ 256 GB ಇಂಟರ್ನಲ್ ಮೆಮೊರಿ ಇದೆ. ಜೊತೆಗೆ ಇದರಲ್ಲಿ 12 GB RAM ಹಾಗೂ MediaTek Dimensity 9300 ಭರ್ಜರಿ ಪ್ರೋಸ್ಸೆಸರ್ ಇದೆ. ಈ ಮೂಲಕ ಇದೊಂದು ಅದ್ಭುತ ಗೇಮಿಂಗ್ ಪೋನ್ ಆಗಿ ಹೊರಹೊಮ್ಮಿದೆ.
iQoo Neo 9 Pro ಅಲ್ಲಿ 6.78 ಇಂಚೆಸ್ ಇರುವ ಅಮೋಲೆಡ್ ಡಿಸ್ಪ್ಲೇ ಇರಲಿದ್ದು, ಇದರ ರೆಸೊಲ್ಯೂಷನ್ 1260 x 2800 ಫಿಕ್ಸೆಲ್ಸ್ ಇದೆ. ಅಷ್ಟೇ ಅಲ್ಲದೆ ಇದು ಬರೋಬ್ಬರಿ 144Hz ರಿಫ್ರೆಶ್ ರೇಟ್ ಹೊಂದಿದೆ.
ಕೇವಲ 190 ಗ್ರಾಮ್ಸ್ ತೂಕವಿರುವ iQoo Neo 9 Pro ಮೊಬೈಲಿನ ಎತ್ತರ 163.53 mm ಇದ್ದು, ಇದರ ಅಗಲ 75.68 mm ಇದೆ. ಇನ್ನು ಇದರ ತಿಕ್ನೆಸ್ ಬಂದು 7.9 mm ಇದೆ.
iQoo Neo 9 Pro Price in India:
ಕೊನೆಯದಾಗಿ iQoo Neo 9 Pro Price ಬಗ್ಗೆ ನೋಡುವುದಾದರೆ, ಇದರ ಬೆಲೆ ಭಾರತದಲ್ಲಿ ₹35,190/- ಇರಲಿದೆ. iQoo Neo 9 Pro Price in India ನೋಡಿ ನಿಮಗೆ ಇದರ ಬೆಲೆ ತುಂಬಾ ಜಾಸ್ತಿ ಅನ್ನಿಸಿರಬಹುದು, ಆದರೆ ಇದೊಂದು ಉತ್ತಮ ಗೇಮಿಂಗ್ ಫೋನ್ ಆಗಿದ್ದು, ಇದರ ಕ್ಯಾಮೆರಾ ಹಾಗೂ ಫೀಚರ್ಸ್ ಬೆಲೆಗೆ ತಕ್ಕಂತೆ ಇದೆ.
ಒಂದು ವೇಳೆ ನೀವು ಇದೇ ಪ್ರೈಸ್ ರೇಂಜ್ ಗೆ ಒಂದು ಉತ್ತಮ ಗೇಮಿಂಗ್ ಫೋನ್ ಖರೀದಿಸಲು ಯೋಚಿಸುತಿದ್ದರೆ ಒಮ್ಮೆ ಇದನ್ನು ನೋಡಿರಿ.