ಕಿಯಾ ಭಾರತದಲ್ಲಿ ಉತ್ತಮ ಗುಣಮಟ್ಟದ ಕಾರನ್ನು ಪರಿಚಯಿಸುವ ಬ್ರಾಂಡ್ ಆಗಿದೆ. ಫ್ಯಾಮಿಲಿ ಕಾರನ್ನು ಸಹ ಮಾರುಕಟ್ಟೆಗೆ ತರುವ ಕಿಯಾ ಈಗ ತನ್ನ ಹೊಸದೊಂದು ಕಾರ್ ಆದ Kia Carnival 2024 ಅನ್ನು ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದೆ.
ಈ ಕಾರಿನ ಲಾಂಚ್ ಡೇಟ್, ಇದರ ಪ್ರೈಸ್ ಹಾಗೂ ಸ್ಪೆಸಿಫಿಕೇಷನ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಓದಿ.
Kia Carnival 2024 Launch Date in India:
Kia Carnival 2024 launch Date ಬಗ್ಗೆ ಎಲ್ಲಾ ಕಡೆ ಚರ್ಚೆ ಶುರುವಾದ ಬೆನ್ನಲ್ಲೇ ಇದು ಇದೇ ವರ್ಷ 2024ರ ಏಪ್ರಿಲ್ ತಿಂಗಳಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ ಎಂದು ಮಾಹಿತಿ ಲಭಿಸಿದೆ.
Kia Carnival 2024 Price:
Kia Carnival 2024 Price ಬಗ್ಗೆ ನೋಡುವುದಾದರೆ ಇದರ ಬೆಲೆ ಎಕ್ಸ್ ಶೋರೂಮ್ ಅಲ್ಲಿ ₹40 ಲಕ್ಷ ಇರಬಹುದು ಎಂದು ಎಕ್ಸ್ಪರ್ಟ್ಸ್ ಅವರಿಂದ ಮಾಹಿತಿ ಲಭಿಸಿದೆ.
Kia Carnival 2024 Engine:
Kia Carnival 2024 Engine ಬಗ್ಗೆ ಹೇಳುವುದಾದರೆ ಇದು ಏರ್ ಕೂಲ್ಡ್ 4 ಸಿಲಿಂಡರ್ ಇಂಜಿನ್ ಹೊಂದಿದೆ. ಇದು 2199ಸಿಸಿ ಡೀಸೆಲ್ ಇಂಜಿನ್ ಆಗಿದ್ದು (ಗ್ಲೋಬಲ್ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್, ಹೈಬ್ರಿಡ್ ಇಂಜಿನ್ ಜೊತೆಗೆ ಟೂರ್ಬೋ ಇಂಜಿನ್ ಲಭ್ಯವಿರುವ ಮಾಹಿತಿ ಇದೆ.), ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಹೊಂದಿದೆ ಎಂದು ಕೆಲವು ಮೂಲಗಳಿಂದ ಮಾಹಿತಿ ಲಭಿಸಿದೆ. ಇದರ ಪ್ರೈಸ್ ನೋಡುವಾಗ ಆಟೋಮ್ಯಾಟಿಕ್ ಟ್ರಾನ್ಸಾಮಿಷನ್ ಸಹ ಲಭ್ಯವಾಗುವ ಸಾಧ್ಯತೆ ಇದೆ. ಇನ್ನು ಕಂಪನಿ ಕಡೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.
Kia Carnival 2024 Specification:
Kia Carnival 2024 Specification ಬಗ್ಗೆ ಹೇಳುವುದಾದರೆ ಕಂಪನಿ ಕಡೆಯಿಂದ ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಿಲ್ಲ. ಆದರೂ ಸಹ ಅನ್ಯ ಮೂಲಗಳಿಂದ ಸಿಕ್ಕ ಮಾಹಿತಿಗಳ ಪ್ರಕಾರ MUV ಬಾಡಿ ಟೈಪ್ ಹೊಂದಿರುವ ಕಿಯಾ ಕಾರ್ನಿವಲ್, 7 ಸೀಟ್ ಕೆಪಾಸಿಟಿ ಹೊಂದಿದೆ. ಜೊತೆಗೆ 5 ಡೊರ್ಸ್ ಸಹ ಹೊಂದಿದೆ. ಮೂನ್ ರೂಫ್ ಹಾಗೂ ಸನ್ ರೂಫ್ ಸಹ ಲಭ್ಯವಿರುವ ಸಾಧ್ಯತೆ ಇದೆ.
12.3 ಇಂಚ್ ಸ್ಕ್ರೀನ್, ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್, ಡುಯಲ್ ಸನ್-ರೂಫ್, ಅಂಬಿಯೆಂಟ ಲೈಟಿಂಗ್, ಏರ್ ಕಂಡೀಶನರ್, ಏರ್ ಪೂರಿಫೈರ್ ಇರಲಿದೆ.
ಸೇಫ್ಟಿ ಫೀಚರ್ಸ್ ಆಗಿ ADAS, 360 ಡಿಗ್ರಿ ಕ್ಯಾಮೆರಾ, 8 ಏರ್-ಬಾಗ್ಸ್, ಬ್ಲೈಂಡ್ ಸ್ಪಾಟ್ ಮೋನಿಟರಿಂಗ್, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಇದು ಹೊಂದಿರಲಿದೆ.
ಅಷ್ಟೇ ಅಲ್ಲದೆ ಇನ್ನು ಅನೇಕ ಅತ್ಯುತ್ತಮ ಫೀಚರ್ಸ್ ಅನ್ನು ಕಿಯಾ ಕಾರ್ನಿವಲ್ ಹೊಂದಿರುವ ಸಾಧ್ಯತೆ ಇದೆ.