ರಾಯಲ್ ಹಾಗೂ ಸ್ಟೈಲಿಶ್ ಲುಕ್ ಹೊಂದಿರುವ Kia ಕಾರ್ ಕಂಪನಿ Kia Sonet 2024 ಕಾರನ್ನು ಹೊಸದಾಗಿ ಪರಿಚಯಿಸಿದೆ. ಇದೊಂದು ಫ್ಯಾಮಿಲಿ ಕಾರ್ ಆಗಿದ್ದು ಉತ್ತಮ ಡ್ರೈವಿಂಗ್ ಎಕ್ಸ್ಪೀರಿಯೆನ್ಸ್ ಕೊಡುತ್ತದೆ. ಕಿಯಾ ಸೊನೆಟ್ ಹಲವಾರು ಅತ್ತ್ಯುತ್ತಮ ಫೀಚರ್ಸ್ ಹೊಂದಿದೆ ಹಾಗೂ ಕಂಪನಿ ಹೇಳಿದ ಪ್ರಕಾರ ಕಿಯಾ ಸೊನೆಟ್ ಪವರ್ಫುಲ್ ಹಾಗೂ ಹೈಟೆಕ್ ವರ್ಷನಲ್ಲಿ ತಯಾರಾಗಿದೆ.
Kia Sonet 2024 Engine:
ಮುಖ್ಯವಾಗಿ Kia Sonet 2024 Engine ಬಗ್ಗೆ ಹೇಳುವುದಾದರೆ 998ಸಿಸಿ ಇಂದ 1493ಸಿಸಿ ಬಲಿಷ್ಠ ಇಂಜಿನ್ ಅನ್ನು ಹೊಂದಿದೆ. ಇದು 4 ಸಿಲಿಂಡರ್ ಇಂಜಿನ್ ಹೊಂದಿದೆ. ಇಂಜಿನ್ ವಿಷಯದಲ್ಲಿ ಕಿಯಾ ಸೊನೆಟ್ 3 ಇಂಜಿನ್ ಆಪ್ಷನ್ ಅನ್ನು ನೀಡಿದೆ.
1. ಪೆಟ್ರೋಲ್ ಇಂಜಿನ್
2. ಟರ್ಬೋ ಪೆಟ್ರೋಲ್ ಇಂಜಿನ್
3. ಡೀಸೆಲ್ ಇಂಜಿನ್
1.) ಪೆಟ್ರೋಲ್ ಇಂಜಿನ್ ಬಗ್ಗೆ ಹೇಳುವುದಾದರೆ 1.2 ಲೀಟರ್ನದಾಗಿದೆ. ಇದರ ಪವರ್ 82 bhp ಹಾಗೂ ಇದರ ಟಾರ್ಕ್ (torque) 115 Nm ಆಗಿದೆ. ಹಾಗೂ ಟ್ರಾನ್ಸ್ ಮಿಷನ್ 5 MT ಇದೆ. ನೀವು ಕಾರಲ್ಲಿ ಸುತ್ತಾಡೋದು ಕಡಿಮೆ ಆಗಿದ್ದು ಹಾಗೂ ಕಡಿಮೆ ಸ್ಪೀಡ್ ಅಲ್ಲಿ ಹೋಗಲು ಇಷ್ಟಪಡುತ್ತೀರಿ ಎಂದರೆ ನಿಮಗೆ ಇದು ಸೂಕ್ತವಾಗಿರಬಹುದು. ಆದರೆ ಅದರಲ್ಲಿ ಮಾನ್ಯುಯಲ್ ಟ್ರಾಸ್ಮಿಷನ್ ಇದೆ.
2. ಟರ್ಬೊ ಪೆಟ್ರೋಲ್ ಇಂಜಿನ್ ಬಗ್ಗೆ ಹೇಳುವುದಾದರೆ 1 ಲೀಟರ್ನದಾಗಿದೆ. ಹಾಗೂ ಇದರ ಪವರ್ 118bhp ಮತ್ತು ಟಾರ್ಕ್ (torque) 172 Nm ಆಗಿದೆ. ಹಾಗೂ ಟ್ರಾನ್ಸ್ಮಿಷನ್ 6iMT / 7 DCT ಇದೆ. ಇಲ್ಲಿ ನೀವು 1 ಲೀಟರ್ ಎಂದರೆ ಸಣ್ಣ ಇಂಜಿನ್ ಅಂತ ಅಲ್ಲ ಬದಲಾಗಿ ಇದು ಪವರ್ ಫುಲ್ ಇಂಜಿನ್. ಏಕೆಂದರೆ ಇದು ಟರ್ಬೋ ಪೆಟ್ರೋಲ್ ಇಂಜಿನ್ ಅಂದರೆ 1 ltr ಟರ್ಬೋ ಪೆಟ್ರೋಲ್ ಇಂಜಿನ್ ಸುಮಾರು 1.6 ltr ನೋನ್-ಟರ್ಬೋ ಇಂಜಿನ್ಗೆ ಸರಿಸಮಾನವಾದದ್ದು. ಇದರಿಂದ ನಿಮ್ಮ ಕಾರಿನ ಓವರ್ ಆಲ್ ಪರ್ಫಾರ್ಮೆನ್ಸ್ ಉತ್ತಮವಾಗಿರುತ್ತದೆ. ಜೊತೆಗೆ ಆಟೋಮ್ಯಾಟಿಕ್ ಗೇರ್ ಒಪ್ಶನ್ ಸಹ ಇದರಲ್ಲಿದೆ.
3. ಕೊನೆಯದಾಗಿ ಡೀಸೆಲ್ ಇಂಜಿನ್ ಬಗ್ಗೆ ಹೇಳುವುದಾದರೆ ಇದು 1.5 ಲೀಟರ್ನದಾಗಿದೆ. ಇದರ ಪವರ್ 114bhp ಮತ್ತು ಟಾರ್ಕ್ (torque) 250Nm ಆಗಿದೆ. ಹಾಗೂ ಟ್ರಾನ್ಸ್ ಮಿಷನ್ 6MT / 6iMT / 6AT ಇದೆ. ಇದರಲ್ಲಿ ಸಹ ಆಟೋಮ್ಯಾಟಿಕ್ ಗೇರ್ ಆಪ್ಷನ್ ಇದೆ.
Kia Sonet 2024 Features:
Kia Sonet 2024 Features ಬಗ್ಗೆ ಹೇಳುವುದಾದರೆ ಮುಖ್ಯವಾಗಿ ಇದರಲ್ಲಿ ADAS ಇದೆ. Hyundai Venue ಬಿಟ್ಟರೆ ಕಿಯಾ ಸೊನೆಟ್ ಮಾತ್ರ ಈ ಕ್ಯಾಟೆಗೇರಿ ಅಲ್ಲಿ ADAS ನೀಡುತ್ತಿರುವುದು. ADAS ಇದೊಂದು ಸೇಫ್ಟಿ ಫೀಚರ್ಸ್ ಆಗಿದ್ದು ಕಾರು ಚಲಾಯಿಸುತ್ತಿರುವಾಗ ಯಾವುದಾದರು ವಾಹನ ಹಾಗೂ ಪ್ಯಾಸೆಂಜರ್ ಎದುರಾದರೆ ಆಟೋಮ್ಯಾಟಿಕ್ ಬ್ರೇಕ್ ಹಾಕುತ್ತದೆ. ಇನ್ನೂ ಇದರಲ್ಲಿ 360 ಡಿಗ್ರಿ ಕ್ಯಾಮೆರಾ ಸಹ ಇರಲಿದೆ. 5 ಸೀಟ್ ಹೊಂದಿರುವ Kia Sonet 6 ಏರ್-ಬ್ಯಾಗ್ಸ್ ಸಹ ಹೊಂದಿದೆ.
ಇನ್ನೂ ಕಾರಿನ ಟೈರ್ ಬಗ್ಗೆ ಹೇಳುವುದಾದರೆ R16/40.56CM ಟೈರ್ ಇದ್ದು 4 ಸ್ಟೈಲ್ ಅಲ್ಲಿ ಬಂದಿದೆ.
ಇನ್ನೂ ಇತರ ಫೀಚರ್ಸ್ ಬಗ್ಗೆ ಹೇಳುವುದಾದರೆ Kia Sonet ಎಲೆಕ್ಟ್ರಿಕ್ ಸನ್-ರೂಫ್ ಹೊಂದಿದೆ. ಜೊತೆಗೆ ಕ್ರೌನ್ ಜೇವಲ್ LED ಹೆಡ್-ಲ್ಯಾಂಪ್ ಮತ್ತು ಸ್ಟಾರ್ ಮ್ಯಾಪ್ LED DRLs ಹೊಂದಿದೆ. ಹಾಗೆಯೇ ESC, HAC, VSM, ESS, HBA ಸೇಫ್ಟಿ ಫೀಚರ್ಸ್ ಒಳಗೊಂಡಿದೆ. ಬ್ಲೈಂಡ್ ವ್ಯೂವ್ ಮೋನಿಟರ್ (BVM), ಫ್ರಂಟ್ ಅಂಡ್ ರೇರ್ ಪಾರ್ಕಿಂಗ್ ಸೆನ್ಸರ್, ಎಲ್ಲ ಚಕ್ರಗಳಿಗೆ ಡಿಸ್ಕ್ ಬ್ರೇಕ್, 360 ಡಿಗ್ರಿ ಕ್ಯಾಮೆರಾ ಸಹ ಹೊಂದಿದೆ. ಅಷ್ಟೇ ಅಲ್ಲದೆ OTA ಮ್ಯಾಪ್ ಅಂಡ್ ಅಪ್ಡೇಟ್ ಸಿಸ್ಟಮ್, ವಾಯ್ಸ್ ಕಂಟ್ರೋಲ್ ವಿಂಡೋ ಫುನ್ಕ್ಷನ್, ರಿಮೋಟ್ ಎಸಿ ಕಂಟ್ರೋಲ್, ಅಮೆಜಾನ್ ಅಲೆಕ್ಸ ಇದ್ದರೆ ಅದರ ಜೊತೆ ಕನೆಕ್ಟ್ವಿಟಿಗೆ ಸಹ ಅವಕಾಶವಿದೆ.
Kia Sonet 2024 Price:
ಹಲವು ಫೀಚರ್ಸ್ ಹೊಂದಿರುವಾಗ Kia Sonet 2024 Price ಬಗ್ಗೆ ಹೇಳುವುದಾದರೆ, ಇದರ ಬೆಲೆ ಎಕ್ಸ್ ಶೋರೂಮ್ ಅಲ್ಲಿ ₹ 7,99,000/-ದಿಂದ ಶುರುವಾಗಿ ₹ 15,69,000/-ವರೆಗೆ ಸಹ ಇದೆ.
ನಿಮಗೆ ಈ Kia sonet 2024 ಕಾರಿನ ಫೀಚರ್ಸ್ ಇಷ್ಟವಾಗಿದ್ದಲ್ಲಿ ಹಾಗೂ ನಿಮ್ಮ ಬಜೆಟ್ ಇದಕ್ಕೆ ಸರಿ ಹೊಂದುತ್ತಿದ್ದರೆ ನೀವು ನೋಡಬಹುದಾಗಿದೆ.