ಲಾವಾ ಮೊಬೈಲ್ಸ್ ಈಗ ಭಾರತದಲ್ಲಿ ಹೊಸ ಕಮಾಲ್ ಮಾಡಲು ಹೊರಟಿದೆ, ಏಕೆಂದರೆ ಈಗ ಲಾವಾ ಕಂಪನಿಯು Lava Yuva 3 ಅನ್ನು ಲಾಂಚ್ ಮಾಡಲು ಹೊರಟಿದೆ. ಈ ಮೂಲಕ ಮೊಬೈಲ್ ಪ್ರಿಯರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದೆ.
Lava Yuva 3 Launch Date:
Lava Yuva 3 Launch Date ಬಗ್ಗೆ ಹೇಳುವುದಾದರೆ, ಸಿಕ್ಕ ಮಾಹಿತಿಗಳ ಪ್ರಕಾರ Lava Yuva 3 ಇದೇ ತಿಂಗಳು ಅಂದರೆ 07 ಫೆಬ್ರವರಿ 2024 ರಂದು ಆನ್ಲೈನ್ ಶಾಪ್ ಅಲ್ಲಿ ಲಭ್ಯವಿದೆ ಎಂದು ಹೇಳಲಾಗಿದೆ.
5000 mAh ಭರ್ಜರಿ ಬ್ಯಾಟರಿ ಹೊಂದಿರುವ ಲಾವಾ ಯುವ 3 ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.
Lava Yuva 3 Price in India:
ಆಗಲೇ ತಿಳಿಸಿದ ಹಾಗೆ ಲಾವಾ ಯುವ 3 ಕಡಿಮೆ ಬೆಲೆಯಲ್ಲಿ ನಮಗೆ ಆನ್ಲೈನ್ ಶಾಪ್ ಅಲ್ಲಿ ಸಿಗಲಿದೆ. Lava Yuva 3 Price in India ಕೇವಲ ₹ 6,799 ಇರಲಿದೆ ಎಂಬ ಮಾಹಿತಿ ಸಿಕ್ಕಿದೆ.
ಇಷ್ಟು ಕಡಿಮೆ ಬೆಲೆಗೆ 5000 mAh ಸೇರಿದಂತೆ ಇನ್ನು ಅನೇಕ ಫೀಚರ್ಸ್ ಅನ್ನು ಲಾವಾ ನೀಡುತ್ತಿರುವುದು ಮೊಬೈಲ್ ಖರೀದಿದಾರರಿಗೆ ಖುಷಿಯನ್ನು ನೀಡಿದಂತಾಗಿದೆ.
Lava Yuva 3 Specification:
ಇನ್ನು Lava Yuva 3 Specification ಬಗ್ಗೆ ಗಮನ ಹರಿಸುವುದಾದರೆ ಇದು ನಮಗೆ ಎಕ್ಲಿಪ್ಸ್ ಬ್ಲಾಕ್, ಕಾಸ್ಮಿಕ್ ಲವೆಂಡರ್ ಹಾಗೂ ಗ್ಯಾಲಕ್ಸಿ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.
ಲಾವಾ ಯುವ 3 ಅಲ್ಲಿ 13 MP ಸಿಂಗಲ್ ಪ್ರೈಮರಿ ಕ್ಯಾಮೆರಾ ಬ್ಯಾಕ್ ಕ್ಯಾಮೆರಾವಾಗಿ ಇರಲಿದ್ದು, ಜೊತೆಗೆ LED ಫ್ಲ್ಯಾಶ್ ಸಹ ಇರಲಿದೆ.
ಇನ್ನು ಇದರ ಫ್ರಂಟ್ ಕ್ಯಾಮೆರಾ 5MP ಸಿಂಗಲ್ ಪ್ರೈಮರಿ ಕ್ಯಾಮರಾವಾಗಿದೆ.
ಇನ್ನು ಇದರಲ್ಲಿ ಬರೋಬ್ಬರಿ 5000 mAh ಬ್ಯಾಟರಿ ಕೆಪ್ಯಾಸಿಟಿ ಇರುವ ಲಿ-ಪೋಲಿಮರ್ ಬ್ಯಾಟರಿ ಸಿಗಲಿದ್ದು, ಜೊತೆಗೆ ಇದನ್ನು ಫಾಸ್ಟ್ ಚಾರ್ಜ್ ಮಾಡಲು 18W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಸಹ ಇರಲಿದೆ.
ಇನ್ನು ಇದರ ಸ್ಟೋರೇಜ್ ವಿಷಯಕ್ಕೆ ಬಂದರೆ 64GB ಇಂಟರ್ನಲ್ ಮೆಮೊರಿ ಹೊಂದಿದ್ದು, ಬೇಕಾದರೆ 512 GB ವರೆಗೆ ಎಕ್ಸ್ಪಾಂಡ್ ಮಾಡಬಹುದಾಗಿದೆ.
ಅಷ್ಟೇ ಅಲ್ಲದೆ Lava Yuva 3 ಅಲ್ಲಿ 4GB RAM ಸಹ ಇರಲಿದ್ದು, ಜೊತೆಗೆ ಯೂನಿಸೋಕ್ T606 ಪ್ರೋಸ್ಸೆಸರ್ ಇರಲಿದೆ.
ಲಾವಾ ಯುವ 3 ಡಿಸ್ಪ್ಲೇ ಬಗ್ಗೆ ಹೇಳುವುದಾದರೆ 6.5 ಇಂಚೆಸ್ ಐಪಿಎಸ್ LCD ಡಿಸ್ಪ್ಲೇ ಇರಲಿದ್ದು ಇದರ ರೆಸೊಲ್ಯೂಷನ್ 720 x 1600 ಫಿಕ್ಸೆಲ್ಸ್ ಇರಲಿದೆ. ಅಷ್ಟೇ ಅಲ್ಲದೆ ಇದರಲ್ಲಿ 90Hz ರಿಫ್ರೆಶ್ ರೇಟ್ ಸಹ ಇರಲಿದೆ.
ಇನ್ನು Lava Yuva 3 ಮೊಬೈಲ್ 164.2 mm ಎತ್ತರವಿದ್ದು, 76 mm ಅಗಲವಿದೆ. ಇನ್ನು ಇದರ ತಿಕ್ನೆಸ್ 8.45 mm ಇರಲಿದೆ.
ನೀವು ಕಡಿಮೆ ಬೆಲೆಯಲ್ಲಿ ಅದರಲ್ಲೂ ₹7000/- ಒಳಗಡೆ ಪ್ರೈಸ್ ಅಲ್ಲಿ 5000 mAh ಭರ್ಜರಿ ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇರುವ ಮೊಬೈಲ್ ಖರೀದಿಸಲು ಯೋಚಿಸುತ್ತಿದ್ದರೆ, ನೀವು ಒಮ್ಮೆ ಲಾವಾ ಯುವ 3 ಮೊಬೈಲ್ ಅನ್ನು ಒಮ್ಮೆ ನೋಡಬಹುದಾಗಿದೆ.