ಭಾರತದ ಎಸ್ಯುವಿ ತಯಾರಿಕ ಕಂಪನಿಯಲ್ಲಿ ಮಹೇಂದ್ರ ಟಾಪ್ ಕಂಪನಿಯ ಸಾಲಿನಲ್ಲಿ ಬರುತ್ತದೆ. ಮಹೀಂದ್ರ ಕಂಪನಿಯ ಅದ್ಭುತ ಕಾರ್ ನಲ್ಲಿ Mahindra Scorpio Classic ಸಹ ಒಂದು. ಅಷ್ಟೇ ಅಲ್ಲದೆ ಈಗ Mahindra Scorpio Classic EMI offer ಅಲ್ಲಿ ಸಿಗುತ್ತಿದ್ದೆ.
Mahindra Scorpio Classic ಅಲ್ಲಿ ನಿಮಗೆ 7 ರಿಂದ 9 ಸೀಟ್ಸ್ ಒಪ್ಶನ್ ಸಹ ಇರಲಿದೆ. ಅಷ್ಟೇ ಅಲ್ಲದೆ ಇಲ್ಲಿ 2184ಸಿಸಿ ಇಂಜಿನ್ ಸಿಗಲಿದೆ.
Mahindra Scorpio Classic Price in Bangalore:
ಇದರ ಬೆಲೆ ಬಗ್ಗೆ ನಾವು ಹೇಳುದಾದರೆ Mahindra Scorpio Classic Price in Bangalore ₹13,25,100/- ಇಂದ ಶುರುವಾಗಿ ₹1,705,600/-ವರೆಗೂ ಇದೆ. ಇಲ್ಲಿ ನೀವು ಲಂಬ್ಸಮ್ ಅಮೌಂಟ್ ನೀಡಿ ಖರೀದಿಸಬಹುದಾಗಿದೆ. ಅದು ಕಷ್ಟ ಆಗುತ್ತೆ ಅನ್ನೋದಾದ್ರೆ ನಿಮಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಅದೇನೆಂದು ಕೆಳಗೆ ಓದಿ.
Mahindra Scorpio Classic EMI Plan:
ಒಮ್ಮೆಲೆ ಪೂರ್ತಿ ಹಣ ಪಾವತಿಸಲು ಕಷ್ಟವಾದರೆ ನಮಗೆ ಇಲ್ಲಿ EMI ಆಯ್ಕೆ ಸಹ ಲಭ್ಯವಿದೆ. ಇಲ್ಲಿ ನೀವು ಮೊದಲಿಗೆ ₹1,67,000/- ಡೌನ್ ಪೇಮೆಂಟ್ ಮಾಡಿ ಉಳಿದ ಹಣವನ್ನು 9.8% ಇಂಟರೆಸ್ಟ್ ಅಲ್ಲಿ ಪ್ರತಿ ತಿಂಗಳು ₹31,760 ಪೇಮೆಂಟ್ ಮಾಡುತ್ತ 5 ವರ್ಷದ EMI ಲೋನ್ ತೆಗೆದುಕೊಳ್ಳಬಹುದು.
Mahindra Scorpio Classic Engine:
ಯಾವುದೇ ಕಾರ್ ಆದರೂ ಅದರ ಇಂಜಿನ್ ಬಗ್ಗೆ ತಿಳಿದುಕೊಳ್ಳುವುದು ಅತಿ ಮುಖ್ಯವಾಗಿರುತ್ತದೆ. ಇನ್ನು Mahindra Scorpio Classic Engine ಬಗ್ಗೆ ಹೇಳುವುದಾದರೆ ಇದು 2184ಸಿಸಿ ಹೊಂದಿರುವ ಡೀಸೆಲ್ ಇಂಜಿನ್ ಆಗಿದ್ದು 4 ಸಿಲಿಂಡರನ್ನು ಹೊಂದಿದೆ. ಇದರ ಮ್ಯಾಕ್ಸಿಮಮ್ ಪವರ್ 3750RPM ಅಲ್ಲಿ 130bhp ಆಗಿದೆ. ಇದರ ಮ್ಯಾಕ್ಸಿಮಮ್ ಟಾರ್ಕ್ಯೂ (Torque) 1600 -2800RPM ಅಲ್ಲಿ 300Nm ಆಗಿದೆ. ಇದರಲ್ಲಿ ಮಾನ್ಯುಯಲ್ ಟ್ರಾನ್ಸ್ಮಿಟರ್ ಸಹ ಇದೆ. ಇದರಲ್ಲಿ CRDi ಫ್ಯೂಲ್ ಸಪ್ಲೈ ಸಿಸ್ಟಮ್ ಹೊಂದಿದ್ದು ಜೊತೆಗೆ 60 ಲೀಟರ್ ಫ್ಯೂಲ್ ಕೆಪ್ಯಾಸಿಟಿ ಹೊಂದಿದೆ.
Mahindra Scorpio Classic Specifications:
Mahindra Scorpio Classic ಅಲ್ಲಿ ಟಾಪ್ ಸ್ಪೀಡ್ 165 Kmph ಇದ್ದು ಇದಕ್ಕಾಗಿ 6 ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಈ ಕಾರ್ ಡಬಲ್ ವಿಶ್ – ಬೋನ್ ಟೈಪ್, ಇಂಡಿಪೆಂಡೆಂಟ್ ಫ್ರಂಟ್ ಕಾಯಿಲ್ ಸ್ಪ್ರಿಂಗ್ ಫ್ರಂಟ್ ಸಸ್ಪೆಂನ್ಶನ್ ಹಾಗೂ ಮಲ್ಟಿ ಲಿಂಕ್ ಕಾಯಿಲ್ ಸ್ಪ್ರಿಂಗ್ ಸಸ್ಪೆಂನ್ಶನ್ ಅಂಡ್ ಆಂಟಿ-ರೋಲ್ ಬಾರ್ ರೇರ್ ಸಸ್ಪೆಂನ್ಶನ್ ಹೊಂದಿದೆ. ಜೊತೆಗೆ ಹೈಡ್ರಾಲಿಕ್ ಸ್ಟೀರಿಂಗ್ ಟೈಪ್ ಸಹ ಹೊಂದಿದೆ.
ಬ್ರೇಕ್ ವಿಷಯಕ್ಕೆ ಬಂದರೆ ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ ರೇರ್ ಡ್ರಮ್ ಬ್ರೇಕ್ ಹೊಂದಿದೆ. ಫ್ರಂಟ್ ಹಾಗೂ ರೇರ್ ಅಲ್ಲಿ ಅಲ್ಲೋಯ್ (Alloy) ಟೈಯರ್ ಹೊಂದಿದೆ.
Mahindra Scorpio Classic ಇದರ ಲೆಂತ್ 4456mm, ವಿಡ್ತ್ 1820 mm, ಏತ್ತರ 1995mm ಹೊಂದಿದೆ. ಬೂಟ್ ಸ್ಪೇಸ್ 460 ಲೀಟರ್ಸ್ ಹೊಂದಿದ್ದು ಲಗ್ಗೆಜ್ ಇಡಲು ಉತ್ತಮವಾಗಿದೆ. 7 ಅಥವಾ 9 ಸೀಟ್ ಕೆಪ್ಯಾಸಿಟಿ ಹೊಂದಿದೆ. ಜೊತೆಗೆ 5 ಡೋರ್ ಸಹ ಇದರಲ್ಲಿದೆ.
ಅಷ್ಟೇ ಅಲ್ಲದೆ ಏರ್ ಕಂಡೀಶನರ್, ಹೀಟರ್, ಅಡ್ಜಸ್ಟಬಲ್ ಸ್ಟೀರಿಂಗ್, ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಈ ಕಾರಲ್ಲಿದೆ.
ಸೇಫ್ಟಿ ವಿಷಯಕ್ಕೆ ಬಂದರೆ ಆಂಟಿ-ಲಾಕ್ ಬ್ರೆಕಿಂಗ್ ಸಿಸ್ಟಮ್, ಸೆಂಟ್ರಲ್ ಲೋಕಿಂಗ್, ಆಂಟಿ-ತೆಫ್ಟ್ ಅಲಾರ್ಮ್, 2 ಏರ್ ಬ್ಯಾಗ್, ಸೀಟ್ ಬೆಲ್ಟ್ ವಾರ್ನಿಂಗ್, ಸ್ಪೀಡ್ ಸೆನ್ಸಿನ್ಗ್ ಆಟೋ ಡೋರ್ ಲಾಕ್ ಹೊಂದಿದೆ. LED DRLs, LED ಹೆಡಲೈಟ್ಸ್, LED ಟೈಲ್-ಲೈಟ್ಸ್ ಇದು ಹೊಂದಿದೆ.
Mahindra Scorpio Classic ಅಲ್ಲಿ ನಮಗೆ 9 ಇಂಚ್ ಟಚ್ ಸ್ಕ್ರೀನ್ ಡಿಸ್ಪ್ಲೇ ಸಿಗಲಿದೆ. ಜೊತೆಗೆ ಫ್ರಂಟ್ ಅಂಡ್ ರೇರ್ ಸ್ಪೀಕರ್, ರೇಡಿಯೋ, ಬ್ಲೂಟೂತ್ ಕನೆಕ್ಟಿವಿಟಿ, ಫೋನ್ ಸ್ಕ್ರೀನ್ ಮೋನಿಟರಿಂಗ್ ವ್ಯವಸ್ಥೆ ಲಭ್ಯವಿದೆ.