ಮಾರುತಿ ಸುಜುಕಿಯ Maruti Brezza ಉತ್ತಮ ಫೀಚರ್ಸ್ ಇರುವ ಕಾರಣ ಕಾರ್ ಬಜಾರ್ ಅಲ್ಲಿ ಎಲ್ಲರ ನೆಚ್ಚಿನ ಚಾಯ್ಸ್ ಆಗಿದೆ. ಪೆಟ್ರೋಲ್ ಇಂಜಿನ್ ಹಾಗೂ CNG ಆಫರ್ ಮಾಡುವ Maruti Brezza ಆಟೋಮೆಟಿಕ್ ಹಾಗೂ ಮಾನ್ಯುಯಲ್ ಟ್ರಾನ್ಸ್ ಮಿಷನ್ ಜೊತೆಗೆ ಇನ್ನು ಅನೇಕ ಫೀಚರ್ಸ್ ಅನ್ನು ಒಳಗೊಂಡಿದೆ.
Maruti Brezza Engine:
ಆಗಲೇ ಹೇಳಿದ ಹಾಗೆ Maruti Brezza Engine ಬಗ್ಗೆ ಹೇಳುವುದಾದರೆ ಇದು 4 ಸಿಲೆಂಡರ್ ಇಂಜಿನ್ ಆಗಿದ್ದು ಪೆಟ್ರೋಲ್ ಇಂಜಿನ್ ಹಾಗೂ CNG ಇಂಜಿನ್ ಅಲ್ಲಿ ಲಭ್ಯವಿದೆ. ಜೊತೆಗೆ ಇದರ ಎರಡು ಇಂಜಿನ್ ಸಹ 1462ಸಿಸಿಯದ್ದಾಗಿದೆ. Maruti Brezza 15 ವೇರಿಯಂಟ್ ಅಲ್ಲಿ ಲಭ್ಯವಿದ್ದು, ಇದರ ವೇರಿಯಂಟ್ಸ್ಗೆ ಅನುಸಾರ 19.05 kmpl ಇಂದ 25.51 kmpl ಮೈಲೇಜ್ ಕೊಡುತ್ತದೆ. ಇನ್ನು ಇದರ ಟಾಪ್ ವೆರಿಯೆಂಟ್ ನ ಮ್ಯಾಕ್ಸಿಮಮ್ ಪವರ್ 6000 RPM ಅಲ್ಲಿ 101.64 bhp ಆಗಿದ್ದು ಇದರ ಮ್ಯಾಕ್ಸಿಮಮ್ ಟಾರ್ಕ್ 4400 RPM ಅಲ್ಲಿ 136.8mm ಆಗಿದೆ.
Maruti Brezza ಅಲ್ಲಿ ನಮಗೆ ಮಾನ್ಯುಯಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಲಭ್ಯವಿದೆ.
Maruti Brezza Specification:
ಇನ್ನು ಆಗಲೇ ಹೇಳಿದ ಹಾಗೆ ಮಾರುತಿ Maruti Brezza ಸ್ಪೆಸಿಫಿಕೇಶನ್ ಅದ್ಭುತವಾಗಿದೆ. ಇಲ್ಲಿ ನಾವು ಇದರ ಟಾಪ್ ವೇರಿಯಂಟ್ ಆಗಿರುವ Zxi Plus AT DT(Petrol) ನ ಸ್ಪೆಸಿಫಿಕೇಶನ್ ನೋಡುವುದಾದರೆ ಇದರ ಟಾಪ್ ಸ್ಪೀಡ್ 159 kmph ಆಗಿದೆ. ಅಷ್ಟೇ ಅಲ್ಲದೆ ಇದರಲ್ಲಿ ನಮಗೆ ಆರು ಸ್ಪೀಡ್ ಗೇರ್ ಬಾಕ್ಸ್ ಲಭ್ಯವಿದೆ. ಇದರ ಸಸ್ಪೆಂನ್ಷನ್ ಬಗ್ಗೆ ನೋಡಿದರೆ, ಮ್ಯಾಕ್ ಫರ್ಸನ್ ಸ್ಟ್ರುಟ್ & ಕಾಯಿಲ್ ಅನ್ನು ಫ್ರಂಟ್ ಸಸ್ಪೆಂನ್ಷನ್ ಹಾಗೂ ಟಾರ್ಷನ್ ಬೀಮ್ & ಕಾಯಿಲ್ ಸ್ಪ್ರಿಂಗ್ ಅನ್ನು ರೇರ್ ಸಸ್ಪೆಂನ್ಷನ್ ಆಗಿ ಹೊಂದಿದೆ.
ಇನ್ನು ಇದು ವೆಂಟಿಲೇಟೆಡ್ ಡಿಸ್ಕ್ ಅನ್ನು ಫ್ರಂಟ್ ಬ್ರೇಕ್ ಆಗಿ ಹೊಂದಿದ್ದು ಡ್ರಮ್ ಬ್ರೇಕ್ ಅನ್ನು ರೇರ್ ಬ್ರೇಕ್ ಆಗಿ ಹೊಂದಿದೆ.
ಅಲ್ಲೋಯ್ ವೀಲ್ ಅನ್ನು ಇದರ ವೀಲ್ ಆಗಿ ಬಳಸಲಾಗಿದೆ.
Maruti Brezza 3995 mm ಅಗಲಾವಿದ್ದು, 1685 mm ಎತ್ತರವಿದೆ. ಇದು 328 ಲೀಟರ್ಸ್ ಬೂಟ್ ಸ್ಪೇಸ್ ಹೊಂದಿದ್ದು 5 ಸೀಟ್ಸ್ ಅನ್ನು ಹೊಂದಿದೆ.
ಇನ್ನು ಇದರಲ್ಲಿ ಏರ್ ಕಂಡೀಶನರ್, ಹೀಟರ್, ಅಡ್ಜಸ್ಟಬಲ್ ಸ್ಟೀರಿಂಗ್, ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹೈಟ್ ಅಡ್ಜಸ್ಟಬಲ್ ಫ್ರಂಟ್ ಸೀಟ್ ಬೆಲ್ಟ್ಸ್, ಫ್ರಂಟ್ ಹಾಗೂ ರೇರ್ ಕಪ್ ಹೋಲ್ಡರ್ಸ್, ಲಗೇಜ್ ಹುಕ್ ಹಾಗೂ ನೆಟ್, ಗ್ಲೋವ್ ಬಾಕ್ಸ್ ಲೈಟ್, ಟೆಕೋಮೀಟರ್, ಡಿಜಿಟಲ್ ಓಡೊಮೀಟರ್ ಹೊಂದಿದೆ.
ಸೇಫ್ಟಿ ವಿಚಾರಕ್ಕೆ ಬಂದರೆ ಇದರಲ್ಲಿ ಆಂಟಿ-ಲಾಕ್ ಬ್ರೆಕಿಂಗ್ ಸಿಸ್ಟಮ್, ಸೆಂಟ್ರಲ್ ಲಾಕಿಂಗ್, ಆಂಟಿ-ತೆಫ್ಟ್ ಅಲಾರ್ಮ್, 6 ಏರ್-ಬಾಗ್ಸ್, ಡ್ರೈವರ್ ಏರ್-ಬ್ಯಾಗ್, ಪ್ಯಾಸೆಂಜರ್ ಏರ್-ಬ್ಯಾಗ್, ಫ್ರಂಟ್ ಸೈಡ್ ಏರ್-ಬ್ಯಾಗ್, ಸೀಟ್ ಬೆಲ್ಟ್ ವಾರ್ನಿಂಗ್, ಡೋರ್ ಅಜರ್ ವಾರ್ನಿಂಗ್, ಹಿಲ್ ಅಸಿಸ್ಟ್, 360 ವ್ಯೂವ್ ಕ್ಯಾಮೆರಾ ಹೊಂದಿದೆ.
7 ಇಂಚ್ ಟಚ್ ಸ್ಕ್ರೀನ್, ವೈರ್-ಲೆಸ್ ಫೋನ್ ಚಾರ್ಜಿಂಗ್, ಬ್ಲೂಟೂತ್ ಕನೆಕ್ಟಿವಿಟಿ, 4 ಸ್ಪೀಕರ್ಸ್, LED DRLs, LED ಹೇಡ್-ಲೈಟ್ಸ್, LED ಟೈಲ್-ಲೈಟ್ಸ್, LED ಫಾಗ್ ಲ್ಯಾಂಪ್ಸ್, ಸಿಂಗಲ್ ಪೇನ್ ಸನ್ ರೂಫ್ Maruti Brezza ಒಳಗೊಂಡಿದೆ.
ಇನ್ನು ಇದೆಲ್ಲ ನೀವು ಖರೀದಿಸುವ Maruti Brezza ವೆರಿಯೆಂಟ್ ಗೆ ಅನುಸಾರ ಹೆಚ್ಚು ಕಡಿಮೆ ಇರಬಹುದು.
Maruti Brezza Price:
ಇಷ್ಟೇಲ್ಲಾ ಫೀಚರ್ಸ್ ಹೊಂದಿರುವ Maruti Brezza price ಬಗ್ಗೆ ಹೇಳುವುದಾದರೆ ಒಂದೊಂದು ವೆರಿಯೆಂಟ್ ಗೆ ಒಂದೊಂದು ಬೆಲೆ ಇದೆ. ಅದರ ಪ್ರಕಾರ ಇದರ ಬೆಲೆ Rs.8.29/- ಲಕ್ಷದಿಂದ ಶುರುವಾಗಿ Rs.14.14/- ಲಕ್ಷದವರೆಗೆ ಇದೆ.
ಇದರ ಫೀಚರ್ಸ್ ಎಲ್ಲಾ ನಿಮಗೆ ಇಷ್ಟವಾಗಿ, ನಿಮ್ಮ ಬಜೆಟ್ ಇದಕ್ಕೆ ಸರಿ ಹೊಂದುತ್ತಿದ್ದರೆ ನೀವು ಖರೀದಿಸಬಹುದಾಗಿದೆ.