NIACL ಸಹಾಯಕ ಹುದ್ದೆ 2024: NIACL Assistant Recruitment 2024

NIACL ಸಹಾಯಕ ಹುದ್ದೆ 2024
NIACL ASSISTANT RECRUITMENT 2024

NIACL (ನ್ಯೂ ಇಂಡಿಯಾ ಅನ್ಶೂರೆನ್ಸ್ ಕಂಪನಿ ಲಿಮಿಟೆಡ್) ಭಾರತ ಸರ್ಕಾರದ ಅತಿ ದೊಡ್ಡ ಜನರಲ್ ಇನ್ಸೂರೆನ್ಸ್ ಕಂಪನಿ ಆಗಿದೆ. ಈಗ NIACL ಸಹಾಯಕ ಹುದ್ದೆ 2024 ಗೆ ಅರ್ಜಿಯನ್ನು ಆಹ್ವಾನಿಸಿದೆ. 300 ಪೋಸ್ಟ್ ಗಾಗಿ ಅರ್ಜಿಯನ್ನು ಕರೆದಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

29 ಜನವರಿ 2024 ರಂದು NIACL ಸಹಾಯಕ ಹುದ್ದೆಗಾಗಿ www.newindia.co.in ಅಲ್ಲಿ ನೋಟಿಫಿಕೇಶನ್ ಬಿಟ್ಟಿದೆ ಹಾಗೂ ಇದರಲ್ಲಿ NIACL ಸಹಾಯಕ ಹುದ್ದೆ 2024 ಅರ್ಜಿ ಸಲ್ಲಿಸುವ ದಿನಾಂಕ 01 ಫೆಬ್ರವರಿ 2024 ರಿಂದ ಪ್ರಾರಂಭವಾಗುವುದಾಗಿ ಹೇಳಿದೆ. ಜೊತೆಗೆ NIACL ಸಹಾಯಕ ಹುದ್ದೆ 2024 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 15 ಫೆಬ್ರವರಿ 2024 ಎಂದು ಸಹ ಹೇಳಿದೆ. ಅದರಿಂದ ಆಶಕ್ತರು ಆದಷ್ಟು ಬೇಗ ಅರ್ಜಿಯನ್ನು ಹಾಕಬೇಕಾಗಿ ಕೋರಿದೆ.

NIACL ಸಹಾಯಕ ಹುದ್ದೆ ಎಕ್ಸಾಮಿನೇಷನ್:

NIACL ಸಹಾಯಕ ಹುದ್ದೆ ಎಕ್ಸಾಮಿನೇಷನ್ ಬಗ್ಗೆ ಹೇಳುವುದಾದರೆ ಇದರಲ್ಲಿ ಪ್ರಿಲಿಮ್ಸ್ ಹಾಗೂ ಮೈನ್ಸ್ ಎಕ್ಸಾಮಿನೇಷನ್ ಇರಲಿದೆ. ಅದರ ಜೊತೆಗೆ ಇಲ್ಲಿ ಇಂಟರ್ವ್ಯೂವ್ ಸಹ ಇರಲಿದೆ.

NIACL ಪ್ರಿಲಿಮ್ಸ್ ಎಕ್ಸಾಮಿನೇಷನ್ 02 ಮಾರ್ಚ್ 2024ರಂದು ನಡೆಯಲಿದೆ.

NIACL ಮೈನ್ಸ್ ಎಕ್ಸಾಮಿನೇಷನ್ 13 ಏಪ್ರಿಲ್ 2024ರಂದು ನಡೆಯಲಿದೆ.

NIACL ಇಂಟರ್ವ್ಯೂವ್ ಬಗ್ಗೆ ಯಾವುದೇ ಮಾಹಿತಿ ಇನ್ನು ಲಭ್ಯವಿಲ್ಲ.

 

NIACL ಸಹಾಯಕ ಹುದ್ದೆ ಪೋಸ್ಟ್:

ಖಾಲಿ ಇರುವ NIACL ಸಹಾಯಕ ಹುದ್ದೆ ಪೋಸ್ಟ್ ಎಷ್ಟೇಂದರೆ 300. ಇದರಲ್ಲಿ ರೆಸೆರ್ವೇಷನ್ ಸಹ ಇದ್ದು ಅದರ ಬಗ್ಗೆ ಮಾಹಿತಿ ಇಲ್ಲಿದೆ.

ಇರುವ 300 ಪೋಸ್ಟ್ ಅಲ್ಲಿ

ಎಸ್ಸಿ ಗೆ – 68 ಪೋಸ್ಟ್

ಎಸ್ಟಿ ಗೆ – 43 ಪೋಸ್ಟ್

ಒಬಿಸಿ ಗೆ – 10 ಪೋಸ್ಟ್

EWS ಗೆ – 30 ಪೋಸ್ಟ್

ಜನರಲ್ ಗೆ – 149 ಪೋಸ್ಟ್ ಅನ್ನು ಮೀಸಲಿರಿಸಲಾಗಿದೆ.

 

NIACL ಸಹಾಯಕ ಹುದ್ದೆ ಅರ್ಜಿ ಶುಲ್ಕ:

NIACL ಸಹಾಯಕ ಹುದ್ದೆ ಅರ್ಜಿ ಶುಲ್ಕದ ಬಗ್ಗೆ ಹೇಳುವುದಾದರೆ ಜನರಲ್ ಹಾಗೂ ಒಬಿಸಿ NIACL ಅರ್ಜಿ ಶುಲ್ಕ ₹850 ಆಗಿದ್ದು,

ಎಸ್ಸಿ, ಎಸ್ಟಿ, PWD NIACL ಅರ್ಜಿ ಶುಲ್ಕ ₹100 ಆಗಿದೆ.

ಇನ್ನು ಅರ್ಜಿ ಶುಲ್ಕವನ್ನು ಆನ್ಲೈನ್ ಅಲ್ಲಿ ಪಾವತಿಸುವುದಾಗಿದ್ದು, ನೀವು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದಾಗಿದೆ.

NIACL ಸಹಾಯಕ ಹುದ್ದೆ ವಯೋಮಿತಿ:

NIACL ಸಹಾಯಕ ಹುದ್ದೆಗೆ ವಯೋಮಿತಿ ಅನ್ನು ನೀಡಲಾಗಿದ್ದು 01 ಜನವರಿ 2024ಕ್ಕೆ ಅನ್ವಯವಾಗುವಂತೆ ಕನಿಷ್ಠ 21 ವರ್ಷ ವಯಸ್ಸಿನಿಂದ ಗರಿಷ್ಠ 30 ವರ್ಷ ವಯಸ್ಸು ಆಗಿರಬೇಕು. ಅಂದರೆ 02/01/1994ರ ಮೊದಲು ಜನಿಸಿದವರು ಹಾಗೂ 01/01/2003ರ ನಂತರ ಜನಿಸಿದವರಿಗೆ NIACL ಅರ್ಜಿ ಸಲ್ಲಿಸಲು ಅವಕಾಶ NIACL ಇರುವುದಿಲ್ಲ.

ಇನ್ನು ಇದರಲ್ಲಿ ಕೆಲವರಿಗೆ ವಯೋಮಿತಿ ಅಲ್ಲಿ ವಿನಾಯಿತಿ ನೀಡಿದ್ದು ಅದರ ಬಗ್ಗೆ ಮಾಹಿತಿ ಇಲ್ಲಿದೆ.

ಎಸ್ಸಿ, ಎಸ್ಟಿ ಅವರಿಗೆ 5 ವರ್ಷ ವಿನಾಯಿತಿ,

ಒಬಿಸಿ ಅವರಿಗೆ 3 ವರ್ಷ ವಿನಾಯಿತಿ,

ಅಂಗವಿಕಲರಿಗೆ 10 ವರ್ಷ ವಿನಾಯಿತಿ,

ಎಕ್ಸ್ ಸರ್ವಿಸ್ ಮೆನ್ ಗೆ, ವಿಧವೆಗೆ, NIACL ಉದ್ಯೋಗಿಗಳಿಗೆ 5 ವರ್ಷ ವಿನಾಯಿತಿ ನೀಡಲಾಗಿದೆ.

NIACL ಸಹಾಯಕ ಹುದ್ದೆ ವೇತನ:

ಮುಖ್ಯವಾಗಿ NIACL ಸಹಾಯಕ ಹುದ್ದೆ ವೇತನ ಬಗ್ಗೆ ನೋಡುವುದಾದರೆ ₹31,000/- ಇರುವುದಾಗಿ ಹೇಳಲಾಗಿದೆ.

NIACL ಸಹಾಯಕ ಹುದ್ದೆ ಅರ್ಜಿ ಸಲ್ಲಿಸುವ ವಿಧಾನ:

NIACL ಸಹಾಯಕ ಹುದ್ದೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸುವುದಾಗಿದೆ. NIACL ಫೆಬ್ರವರಿ 01 ರಿಂದ ಅರ್ಜಿ ಸ್ವೀಕರಿಸಲು ಶುರು ಮಾಡಿದ್ದೂ ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

https://www.newindia.co.in/

 

Leave a comment