ಉತ್ತಮ ಕ್ಯಾಮೆರಾ ಮೊಬೈಲ್ಸ್ ನೀಡುವ ಒಪ್ಪೋ ಈಗ ತನ್ನ ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡಿದೆ. ಹೌದು, Oppo Reno 11 Pro 5G ಮೊಬೈಲನ್ನು ಲಾಂಚ್ ಮಾಡಿ ಎಲ್ಲರ ಗಮನ ತನ್ನೆಡೆಗೆ ಸೆಳೆದಿದೆ.
ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಹೊಂದಿರುವ ಈ ಮೊಬೈಲ್ ಕಂದು ಹಾಗೂ ಬಿಳಿ ಬಣ್ಣಗಳಲ್ಲಿ ಮಾರುಕಟ್ಟೆಗೆ ಬಂದಿದೆ. ಹೈ ಕ್ವಾಲಿಟಿ ಡಿಸ್ಪ್ಲೇ ಹೊಂದಿರುವ Oppo Reno 11 Pro ಮೊಬೈಲ್ 120Hz ರಿಫ್ರೆಶ್ ರೇಟ್ ಸಹ ಹೊಂದಿದೆ.
Oppo Reno 11 Pro 5G Launch Date:
12 GB RAM ಹೊಂದಿರುವ ಈ ಫೋನ್ ಚೀನಾದಲ್ಲಿ ಕಳೆದ ವರ್ಷ ಅಂದರೆ 2023ರ ನವೆಂಬರ್ ತಿಂಗಳಲ್ಲೇ ಲಾಂಚ್ ಆಗಿದೆ. ಇನ್ನು ಭಾರತದಲ್ಲಿ ಈ ವರ್ಷ ಜನವರಿ 12ರಂದು ಲಾಂಚ್ ಆಗಿದೆ. ಲಾಂಚ್ ಆದ ಮೇಲೆ ಇದಕ್ಕೆ ಡಿಮಾಂಡ್ಸ್ ಸಹ ಹೆಚ್ಚಾಗಿದೆ.
ಆಂಡ್ರಾಯ್ಡ್ 14 ಬೇಸ್ಡ್ colorOS 14 ಆಪರೇಟಿಂಗ್ ಸಿಸ್ಟಮ್ ಇರುವ ಈ ಸ್ಮಾರ್ಟ್ ಫೋನ್ 6.7 ಇಂಚೆಸ್ ಅಂದರೆ 17.02 cm ಡಿಸ್ಪ್ಲೇ ಹೊಂದಿದೆ.
Oppo Reno 11 Pro 5G Camera:
ಕ್ಯಾಮರಾಗೆ ಫೇಮಸ್ ಆಗಿರುವ ಒಪ್ಪೋ ಫೋನ್, ಇಲ್ಲಿ ಸಹ ಕ್ಯಾಮೆರಾ ಕ್ವಾಲಿಟಿ ಉತ್ತಮಗೊಳಿಸಿದೆ. ತ್ರಿಬಲ್ ಕ್ಯಾಮೆರಾ ಹೊಂದಿರುವ ಈ ಫೋನ್ ಬಗ್ಗೆ ಮಾಹಿತಿ ಇಲ್ಲಿದೆ.
1.) 50 ಎಂಪಿ Sony IMX890 ಪ್ರೈಮರಿ ಕ್ಯಾಮೆರಾವನ್ನು ಹೊಂದಿದ್ದು ಇದರಲ್ಲಿ 24 mm ಫೋಕಲ್ ಲೆಂತ್ ಮತ್ತು 1.56 ಸೆನ್ಸರ್ ಸೈಜ್ ಹೊಂದಿದೆ.
2.) 8 ಎಂಪಿ Sony IMX355 ಅಲ್ಟ್ರಾ ವೈಡ್ ಆಂಗಲ್ ಸೆಕೆಂಡರಿ ಕ್ಯಾಮೆರಾ ಹೊಂದಿದ್ದು 16mm ಫೋಕಲ್ ಲೆಂಥ್ ಮತ್ತು 4 ಸೆನ್ಸರ್ ಸೈಜ್ ಹೊಂದಿದೆ.
3.) 32 ಎಂಪಿ Sony IMX709 RGBW ಟೆಲಿಫೋಟೋ ಕ್ಯಾಮೆರಾ ಹೊಂದಿದ್ದು ಇದರಲ್ಲಿ 47 mm ಫೋಕಲ್ ಲೆಂತ್ ಹಾಗೂ 2.7 ಸೆನ್ಸರ್ ಸೈಜ್ ಹೊಂದಿದೆ. ಜೊತೆಗೆ ಅಪ್-ಟು 20x ಡಿಜಿಟಲ್ ಜೂಮ್ , ಅಪ್-ಟು 2x ಒಫ್ಟಿಕಲ್ ಜೂಮ್ ಹೊಂದಿದೆ.
ಈ ಕ್ಯಾಮೆರಾಗಳಿಂದ ಹೈ ಕ್ವಾಲಿಟಿ ಫೋಟೋ ಹಾಗೂ ವಿಡಿಯೋ ರೆಕಾರ್ಡ್ ಮಾಡಲು ಸಹಾಯಕಾರಿಯಾಗಿದೆ.
ಇನ್ನು ಫ್ರಂಟ್ ಕ್ಯಾಮೆರಾ ಬಗ್ಗೆ ಹೇಳೋದಾದರೆ 32ಎಂಪಿ ಸಿಂಗಲ್ ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾ ಹೊಂದಿದ್ದು ಇದರಲ್ಲಿ 22 mm ಫೋಕಲ್ ಲೆಂತ್ ಮತ್ತು 2.74 ಸೆನ್ಸರ್ ಸೈಜ್ ಹೊಂದಿದೆ. ಇದರಿಂದಾಗಿ ಉತ್ತಮ ಕ್ವಾಲಿಟಿಯ ಸೆಲ್ಫಿ ಫೋಟೋವನ್ನು ತೆಗೆಯಲು ಸಹಾಯಕಾರಿಯಾಗಿದೆ.
Oppo Reno 11 Pro 5G Specification:
ಕ್ಯಾಮೆರಾ ಮಾತ್ರವಲ್ಲದೆ ಸ್ಪೆಸಿಫಿಕೇಶನ್ ಅಲ್ಲಿ ಸಹ ಒಪ್ಪೋ ರೇನೋ 11 ಪ್ರೊ 5G ಫೋನ್ ಮುಂದಿದೆ. ಲಿ-ಪೋಲಿಮೆರ್ (Li-Polymer) ಬ್ಯಾಟರಿ ಹೊಂದಿರುವ ಈ ಫೋನ್, 4600mAh ಬ್ಯಾಟರಿ ಕೆಪ್ಯಾಸಿಟಿ ಹೊಂದಿದೆ. 80W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದ್ದು, ಇದು 28 ನಿಮಿಷಗಳಲ್ಲಿ 100% ಚಾರ್ಜ್ ಪೂರ್ತಿಗೊಳಿಸುತ್ತದೆ.
ಸ್ಟೋರೇಜ್ ವಿಷಯದಲ್ಲಿ 256GB ಇಂಟರ್ನಲ್ ಸ್ಟೋರೇಜ್ ಕೆಪ್ಯಾಸಿಟಿ ಹೊಂದಿದೆ. ಜೊತೆಗೆ 12 ಜಿಬಿ RAM ಹೊಂದಿದ್ದು ಮೊಬೈಲಿನ ಸ್ಮೂತ್ ರನ್ನಿಂಗ್ ಗೆ ಸಹಾಯವಾಗಲಿದೆ.
ಇದರಲ್ಲಿ ಮೀಡಿಯಾಟೆಕ್ ಡೈಮೆಂನ್ಸಿಟಿ 8200 SoC ಪ್ರೋಸೆಸರ್ ಲಭ್ಯವಿದೆ. ಇದರ ಸ್ಕ್ರೀನ್ ಬಾಡಿ ರೇಶಿಯೋ 93% ಹಾಗೂ ಅಸ್ಪೆಕ್ಟ್ ರೇಶಿಯೋ 20:9 ಇದೆ.
Oppo Reno 11 Pro ಮೊಬೈಲಿನ ಎತ್ತರ 162.4mm, ಅಗಲ 74.1mm ಇದೆ. ಇನ್ನೂ ತಿಕ್ನೆಸ್ಸ್ 7.6mm, ಭಾರ 181grm ತೂಕವಿದೆ.
Oppo Reno 11 Pro 5G Price:
ಅದ್ಬುತ ಪಿಚರ್ಸ್ ಅಷ್ಟೇ ಅಲ್ಲದೆ ಸ್ಟೈಲಿಶ್ ಲುಕ್ ಹೊಂದಿರುವ ಒಪ್ಪೋ ರೇನೋ 11 ಪ್ರೊ ಪ್ರೈಸ್ ₹39,999/- ಆಗಿದೆ. ಫ್ಲಿಪ್-ಕಾರ್ಟ್ನಲ್ಲಿ ಖರೀದಿಸುವುದಾದರೆ ನಿಮಗೆ ಐಸಿಐಸಿಐ ಬ್ಯಾಂಕ್ ಹಾಗೂ ಬ್ಯಾಂಕ್ ಅಪ್ ಬರೋಡದ ಕ್ರೆಡಿಟ್ ಕಾರ್ಡ್ನಲ್ಲಿ 10% ಡಿಸ್ಕೌಂಟ್ ಸಿಗಲಿದೆ.
ಪೂರ್ತಿ ಹಣ ಕೊಟ್ಟು ಖರೀದಿಸಲು ಕಷ್ಟವಾದರೆ EMI ಒಪ್ಶನ್ ಇದೆ. ಇಲ್ಲಿ ನೊ ಕಾಸ್ಟ್ EMI ಅಲ್ಲಿ ಡೌನ್-ಪೇಮೆಂಟ್ ಮಾಡಿ ಖರೀದಿಸಬಹುದಾಗಿದೆ.