ಮೊನ್ಸ್ಟರ್ ಲುಕ್ ಹಾಗೂ ಮೈ ಜುಮ್ ಎನ್ನಿಸುವ ಲುಕ್ ಹೊಂದಿರುವ Mahindra Thar ಮಾರುಕಟ್ಟೆಯಲ್ಲಿ ತನ್ನ ಸ್ಟ್ಯಾಂಡರ್ಡ್ ಅನ್ನು ಹೆಚ್ಚಿಸಿಕೊಂಡಿದೆ.ಸ್ಪೋರ್ಟ್ ಯುಟಿಲಿಟಿ ಬಾಡಿ ಸ್ಟೈಲ್ ಹೊಂದಿರುವ ಇದು ಎಷ್ಟೋ ಜನರ ಡ್ರೀಮ್ ಆಗಿದೆ.
Mahindra Thar Engine:
ಮಹಿಂದ್ರಾ ಥಾರ್ ಎಂಜಿನ್ ಬಗ್ಗೆ ಮಾತಾಡುವುದಾದರೆ ಇದು 4 ಸಿಲಿಂಡರ್ ಇಂಜಿನ್ ಹೊಂದಿದ್ದು, ಇದು 2 ಡಿಸೇಲ್ ಇಂಜಿನ್ ಹಾಗೂ 1 ಪೆಟ್ರೋಲ್ ಇಂಜಿನ್ ಅನ್ನು ಆಫರ್ ಮಾಡುತ್ತದೆ. ಇದರ ಡೀಸೆಲ್ ಇಂಜಿನ್ 2184ಸಿಸಿ ಮತ್ತು 1497ಸಿಸಿ ಇಂಜಿನ್ ಆಗಿದ್ದು, ಇದರ ಪೆಟ್ರೋಲ್ ಇಂಜಿನ್ 1997ಸಿಸಿಯದ್ದಾಗಿದೆ. ಇದರಲ್ಲಿ ನಮಗೆ ಆಟೋಮ್ಯಾಟಿಕ್ ಹಾಗೂ ಮ್ಯಾನ್ವಲ್ ಟ್ರಾನ್ಸ್ಮಿಷನ್ ಲಭ್ಯವಿದೆ. ಇದರ ಟಾಪ್ ವೇರಿಯಂಟ್ ಗೆ ಅನುಸಾರ ಇದರ ಇದರ ಮ್ಯಾಕ್ಸಿಮಮ್ ಪವರ್ ಬಂದು 3750rpm ಅಲ್ಲಿ 130.07bhp ಇದ್ದು, ಇದರ ಮ್ಯಾಕ್ಸಿಮಮ್ ಟಾರ್ಕ್ಯೂ (torque) 1600-2800rpm ಅಲ್ಲಿ 300Nm ಇದೆ.
ಇನ್ನು ಮಹೇಂದ್ರ ಥಾರ್ ನ ಮೈಲೇಜ್ ಬಗ್ಗೆ ನೋಡಿದರೆ 15.2 kmpl ಮೈಲೇಜ್ ಕೊಡುತ್ತದೆ. ಜೊತೆಗೆ ಇದರ ಫ್ಯೂಲ್ ಟ್ಯಾಂಕ್ ಕೆಪ್ಯಾಸಿಟಿ 57 ಲೀಟರ್ ಆಗಿದೆ.
Mahindra Thar Specification:
Mahindra Thar specification ಬಗ್ಗೆ ಹೇಳುವುದಾದರೆ 4 ಸೀಟ್ ಕೆಪಾಸಿಟಿ ಹೊಂದಿರುವ ಇದು ಒಂದು SUV ಆಗಿದೆ.
13 ವೆರಿಯೆಂಟ್ ಅನ್ನು ಆಫರ್ ಮಾಡಿರುವ ಮಹಿಂದ್ರಾ ಥಾರ್ ನ ಟಾಪ್ ವೆರಿಯೆಂಟ್ ಆಗಿರುವ LX 4-Str Hard to diesel AT ಯ ಸ್ಪೆಸಿಫಿಕೇಶನ್ ನೋಡುವುದಾದರೆ, ಇದರಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಲಭ್ಯವಿದ್ದು, ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ.
ಇನ್ನು ಇದು ಇಂಡಿಪೆಂಡೆಂಟ್ ಡಬಲ್ ವಿಷ್ಬೋನ್ ಫ್ರಂಟ್ ಸಸ್ಪೆಂನ್ಷನ್ ಜೊತೆಗೆ ಕಾಯಿಲ್ ಓವರ್ ಡಂಪೆರ್ & ಸ್ಟೇಬಿಲೈಸರ್ ಬಾರ್ ಅನ್ನು ಫ್ರಂಟ್ ಸಸ್ಪೆನ್ಷನ್ ಆಗಿ ಹೊಂದಿದೆ ಮತ್ತು ರೇರ್ ಸಸ್ಪೆಂನ್ಷನ್ ಆಗಿ ಮಲ್ಟಿಲಿಂಕ್ ಸಾಲಿಡ್ ರೇರ್ ಅಕ್ಸಲ್ ಜೊತೆಗೆ ಕಾಯಿಲ್ ಓವರ್ ಡಂಪೆರ್ & ಸ್ಟೇಬಿಲೈಸರ್ ಬಾರ್ ಹೊಂದಿದೆ.
ಮಹಿಂದ್ರಾ ಥಾರ್ ಫ್ರಂಟ್ ಬ್ರೇಕ್ ಆಗಿ ಡಿಸ್ಕ್ ಬ್ರೇಕ್ ಅನ್ನು ಹಾಗೂ ರೇರ್ ಬ್ರೇಕ್ ಆಗಿ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಜೊತೆಗೆ ಇದರಲ್ಲಿ ಅಲ್ಲೋಯ್ ವೀಲ್ ಅನ್ನು ಅಳವಡಿಸಲಾಗಿದೆ.
ಮಹಿಂದ್ರಾ ಥಾರ್ ಅಲ್ಲಿ ಪವರ್ ಸ್ಟೀರಿಂಗ್, ಏರ್ ಕಂಡೀಶನರ್, ಹೀಟರ್, ಅಡ್ಜಸ್ಟಬಲ್ ಸ್ಟೀರಿಂಗ್, ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಅಡ್ಜಸ್ಟಬಲ್ ಹೆಡ್-ರೆಸ್ಟ್, ಎದುರಲ್ಲಿ ಕಪ್ ಹೋಲ್ಡರ್ಸ್ ಲಭ್ಯವಿದೆ.
ಇನ್ನು ಈ SUV 3985mm ಉದ್ದವಿದ್ದು, 1820mm ಅಗಲ ಹಾಗೂ 1844 mm ಎತ್ತರವಿದೆ.