ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಫೇಮಸ್ ಚಿತ್ರ ಪುಷ್ಪ (Pushpa Movie) ರಿಲೀಸ್ ಆಗಿ ದೇಶಾದ್ಯಂತ ಭರ್ಜರಿ ಕಲೆಕ್ಷನ್ ಅನ್ನು ಮಾಡಿತ್ತು. ಅದಾದ ನಂತರ Puahpa 2 (ಪುಷ್ಪ : ದಿ ರೂಲ್) ಮೇಲೆ ದೇಶಾದ್ಯಂತ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟಿದ್ದಾರೆ. ಅಲ್ಲು ಅರ್ಜುನ್ ಅಭಿಮಾನಿಗಳಷ್ಟೇ ಅಲ್ಲದೆ ಇನ್ನಿತರ ಹೆಚ್ಚಿನ ಜನರು Pushpa Part 2ಗಾಗಿ ಕಾಯುತ್ತಿದ್ದಾರೆ. ಇದರ ನಡುವೆ Pushpa Part 3 (Puahpa: The Roar) ಮೂವಿ ಬರಲಿದೆ ಎಂಬ ಸುದ್ದಿ ಅಭಿಮಾನಿಗಳಿಗೆ ಹುಬ್ಬೇರುವಂತೆ ಮಾಡಿದೆ.
ಪುಷ್ಪ ದಿ ರೈಸ್ ಪಾರ್ಟ್ 1 (Pushpa : The Raise) ಹೆಸರಲ್ಲಿ ರಿಲೀಸ್ ಆದ ಪುಷ್ಪಾದ ಮೊದಲನೆಯ ಭಾಗವು ರಕ್ತ ಚಂದನದ ಕಳ್ಳಸಾಗಾಣಿಕೆಯ ಸ್ಟೋರಿ ಹೊಂದಿರುವ ಚಿತ್ರವಾಗಿದೆ. Pushpa Part 1 (ಪುಷ್ಪ ಪಾರ್ಟ್ 1)ರಲ್ಲಿ ಪುಷ್ಪ ಬೆಳೆದು ಬಂದ ಹಾದಿಯನ್ನು ತೋರಿಸಲಾಗಿದೆ. ಇನ್ನು ಮುಂದೆ ಬರುವ ಪಾರ್ಟ್ 2 ದಿ ರೂಲ್ (Pushpa Part 2: The Rule) ಅಲ್ಲಿ ಪುಷ್ಪನ ಮುಂದಿನ ಆಡಳಿತದ ಬಗ್ಗೆ ತೋರಿಸಲಾಗುವುದು. ಹಾಗೂ ನಂತರ ಬರುವ ಪುಷ್ಪ ಪಾರ್ಟ್ 3 ದಿ ರೋರ್ (Pushpa Part 3: The Roar) ಅಲ್ಲಿ ಆತನ ಅಗ್ರೆಸೀವ್ ನೆಸ್ ಅನ್ನು ತೋರಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Pushpa The Raise Part 1 (ಪುಷ್ಪ ದಿ ರೈಸ್ ಪಾರ್ಟ್ 1):
ಪುಷ್ಪಾದಿ ರೈಸ್ ಪಾರ್ಟ್ ಒನ್ ಮೂವಿ (Pushpa the Raise Part 1 movie) ಅಲ್ಲಿ ಸ್ಟೈಲಿಸ್ ಸ್ಟಾರ್ ಅಲ್ಲು ಅರ್ಜುನ್ ಅವರು ನಾಯಕ ನಟನಾಗಿ ನಟಿಸಿದ್ದು, ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿದ್ದಾರೆ. ಮಲ್ಟಿ ವಿಲ್ಲನ್ಸ್ ಹೊಂದಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ಅವರು ಸಹ ಮುಖ್ಯ ಪಾತ್ರದಲ್ಲಿ ನಡೆಸಿದ್ದಾರೆ. ಹಾಗೂ ಇವರು ಮುಂದಿನ ಪಾರ್ಟ್ ಆದ Pushpa The Rule Part 1ರಲ್ಲಿ ಸಹ ಇರಲಿದ್ದಾರೆ.
Pushpa Movie ಚಿತ್ರವನ್ನು ಸುಕುಮಾರ್ ಅವರು ಡೈರೆಕ್ಟ್ ಮಾಡಿದ್ದು, ನವೀನ್ ಎರ್ನನಿ ಯಲಮಂಚಿಲಿ ರವಿ ಶಂಕರ್ ಅವರು ಪ್ರೊಡ್ಯೂಸ್ ಮಾಡಿದ್ದಾರೆ. ಈ ಚಿತ್ರದ ಬಜೆಟ್ 250 ಕೋಟಿಯಾಗಿದ್ದು, ಈ ಚಿತ್ರ 360 ಕೋಟಿಯಷ್ಟು ಕಲೆಕ್ಷನ್ ಮಾಡಿದೆ.
ಪುಷ್ಪ ದಿ ರೂಲ್ ಪಾರ್ಟ್ 2 ರಿಲೀಸ್ ಡೇಟ್ (Pushpa 2 Release Date):
ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪುಷ್ಪ ದಿ ರೂಲ್ ಪಾರ್ಟ್ 2 (Pushpa 2) ನಿರ್ಮಾಣ ಹಂತದಲ್ಲಿದೆ. ಚಿತ್ರತಂಡ ಹೇಳಿರುವಂತೆ ಪುಷ್ಪ ದಿ ರೂಲ್ ಪಾರ್ಟ್ 2 ರಿಲೀಸ್ ಡೇಟ್ (Pushpa Part 2 Release Date) ಇದೇ ವರ್ಷದ ಆಗಸ್ಟ್ 15 ರ ಸ್ವಾತಂತ್ರ್ಯ ದಿವಸದಂದು ಎಂದು ಚಿತ್ರತಂಡ ಹೇಳಿದೆ. ಹಾಗಾಗಿ ಚಿತ್ರತಂಡ ಭರದಿಂದ ಶೂಟಿಂಗ್ ನಡೆಸುತ್ತಿದೆ. ವಿದೇಶದಲ್ಲಿ ಸಹ ಚಿತ್ರದ ನಂಟಿದ್ದು ಅದಕ್ಕಾಗಿ ಚಿತ್ರತಂಡ ಜಪಾನ್ ಅಲ್ಲಿ ಶೂಟಿಂಗ್ ನಡೆಸುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ.
ಪುಷ್ಪ ದಿ ರೋರ್ ಪಾರ್ಟ್ 3 ರಿಲೀಸ್ ಡೇಟ್ (Pushpa Part 3 Release Date):
ಇನ್ನು ಆಗಲೇ ಹೇಳಿದ ಹಾಗೆ ಪುಷ್ಪ ದಿ ರೋರ್ ಪಾರ್ಟ್ 3 (Pushpa 3) ಅಲ್ಲಿ ಪುಷ್ಪನ ಎಗ್ರೆಸ್ಸಿವ್ ಆಡಳಿತ ತೋರಿಸಲಾಗುವುದು. ಆದರೆ ಚಿತ್ರದ ಶೂಟಿಂಗ್ ಸದ್ಯದಲ್ಲಿ ಶುರುವಾಗುದಿಲ್ಲ, ಆದ ಕಾರಣ ರಿಲೀಸ್ ಡೇಟ್ ಬಗ್ಗೆ ಸದ್ಯಕ್ಕೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವ ಹಾಗಿಲ್ಲ. ಪುಷ್ಪ ದಿ ರೂಲ್ ಪಾರ್ಟ್ 2 (Pushpa 2) ನಂತರ ಅಲ್ಲೂ ಅರ್ಜುನ್ ಅಷ್ಟೇ ಅಲ್ಲದೆ ಸುಕುಮಾರ್ ಸಹ ಬೇರೆ ಚಿತ್ರದ ಕಡೆ ಗಮನ ಹರಿಸಲಿದ್ದಾರೆ. ಅದಾದ ನಂತರ ಪುಷ್ಪ ದಿ ರೋರ್ಸ್ ಪಾರ್ಟ್ 3 (Pushpa Part 3) ಶೂಟಿಂಗ್ ನಡೆಯಲಿದೆ.