ಆಪಲ್ ಮೊಬೈಲಿಗೆ ಕಾಂಪಿಟೇಶನ್ ಕೊಡುವಂತೆ ಬೆಳೆದಿರುವ Samsung, ಹೈ-ಕ್ವಾಲಿಟಿ ಕ್ಯಾಮೆರಾ ಹಾಗೂ ಹೈಟೆಕ್ ಫೀಚರ್ಸ್ಗಳಿಂದ ಎಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ. ಇನ್ನು ಕೆಲವು ದಿನಗಳ ಹಿಂದೆಯಷ್ಟೇ ಸ್ಯಾಮ್ಸಂಗ್ ತನ್ನ ಹೊಸ ಮಾಡೆಲ್ Samsung Galaxy S24 5G ಮೊಬೈಲ್ ಲಾಂಚ್ ಮಾಡಿದೆ.
4000 mAh ಬ್ಯಾಟರಿ, 256GB ಇಂಟರ್ನಲ್ ಸ್ಟೋರೇಜ್ ಹೊಂದಿರುವ Samsung Galaxy S24 5G ಫೀಚರ್ಸ್ ಅದ್ಭುತವಾಗಿದೆ.
Samsung Galaxy S24 5G Camera :
50 MP + 12 MP + 10 MP ಕ್ಯಾಮೆರಾ ಹೊಂದಿರುವ Samsung Galaxy S24 5G ಕ್ಯಾಮೆರಾ ಭರ್ಜರಿಯಾಗಿದೆ. ಇಲ್ಲಿ ನಮಗೆ ಮೆಗಾಫಿಕ್ಸಲ್ (MP) ಕಡಿಮೆ ಇದೆ ಅನ್ನಿಸಿರಬಹುದು ಆದರೆ ಇದರ ಕ್ವಾಲಿಟಿ ಅದ್ಭುತವಾಗಿರುತ್ತದೆ.
1. 50 ಮೆಗಾಫಿಕ್ಸೆಲ್ (MP) ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾ ಅನ್ನು ಹೊಂದಿದ್ದು, ಇದರ 24mm ಫೋಕಲ್ ಲೆಂಥ್ ಹಾಗೂ ಸೆನ್ಸರ್ ಸೈಜ್ 1.56 ಇದೆ.
2. 12 ಮೆಗಾಫಿಕ್ಸೆಲ್ (MP) ಅಲ್ಟ್ರಾ ವೈಡ್ ಆಂಗಲ್ ಸೆಕೆಂಡೆರಿ ಕ್ಯಾಮೆರಾ ಅನ್ನು ಹೊಂದಿದ್ದು, ಇದರ ಫೋಕಲ್ ಲೆಂಥ್ 13 mm ಹಾಗೂ ಸೆನ್ಸರ್ ಸೈಜ್ 2.55 ಇದೆ.
3. 10 ಮೆಗಾಫಿಕ್ಸೆಲ್ (MP) ಟೆಲಿಫೋಟೋ ಟೆರ್ಟಿರಿ ಕ್ಯಾಮೆರಾ ಅನ್ನು ಹೊಂದಿದ್ದು, ಇದರ ಫೋಕಲ್ ಲೆಂಥ್ 67 mm ಹಾಗೂ ಸೆನ್ಸರ್ ಸೈಜ್ 3.9 ಇದೆ. ಜೊತೆಗೆ ಇದರಲ್ಲಿ ಅಪ್-ಟು 30X ಡಿಜಿಟಲ್ ಜೂಮ್ ಹಾಗೂ 3X ಒಫ್ಟಿಕಲ್ ಜೂಮ್ ಒಪ್ಶನ್ ಇದೆ.
ಇನ್ನು ಇದರ ಫ್ರೆಂಡ್ ಕ್ಯಾಮೆರಾದ ಬಗ್ಗೆ ಹೇಳುವುದಾದರೆ ಇದರಲ್ಲಿ 12 ಮೆಗಾಫಿಕ್ಸಲ್ (MP) ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾ ವನ್ನು ಹೊಂದಿದ್ದು, 26 mm ಫೋಕಲ್ ಲೆಂತ್ ಇದರಲ್ಲಿದೆ.
Samsung Galaxy S24 5G Specification :
ಇನ್ನು Samsung Galaxy S24 5G Specification ಬಗ್ಗೆ ಹೇಳುವುದಾದರೆ ಇದರ ಬ್ಯಾಟರಿ ಕೆಪಾಸಿಟಿ, RAM, ROM ಎಲ್ಲಾ ಉತ್ತಮ ಮಟ್ಟದ್ದಿದೆ.
ಮೊದಲನೆಯದಾಗಿ Samsung Galaxy S24 5G ಬ್ಯಾಟರಿ ಲಿ-ಅಯಾನ್ ಬ್ಯಾಟರಿ ಆಗಿದ್ದು ಇದರ ಕ್ಯಾಪಾಸಿಟಿ 400 ಎಂಎಎಚ್ ಆಗಿದೆ. ಜೊತೆಗೆ ಇದನ್ನು ಫಾಸ್ಟ್ ಚಾರ್ಜ್ ಮಾಡಲು 25W ಫಾಸ್ಟ್ ಚಾರ್ಜರ್ ಲಭ್ಯವಿದೆ. ಇದರ ಮೂಲಕ 30 ನಿಮಿಷಗಳಲ್ಲಿ 50 ಪರ್ಸೆಂಟೇಜ್ ಚಾರ್ಜ್ ಕಂಪ್ಲೀಟ್ ಮಾಡಬಹುದು. ಈ ಮೊಬೈಲ್ ಅನ್ನು ವೈರ್ಲೆಸ್ ಚಾರ್ಜ್ ಮಾಡಬಹುದು.
ಇನ್ನೂ ಇದರ ಸ್ಟೋರೇಜ್ ಬಗ್ಗೆ ನೋಡುವುದಾದರೆ ಇದರ ಇಂಟರ್ನಲ್ ಮೆಮೊರಿ (ROM) 256 GB ಇದೆ.
ಇದು 8GB RAM ಹೊಂದಿದ್ದು ಮೊಬೈಲ್ನ ಸ್ಮೂತ್ ರನ್ನಿಂಗ್ ಗೆ ಸಹಾಯಕವಾಗಲಿದೆ.
ಜೊತೆಗೆ ಇದರಲ್ಲಿ Samsung Exynos 2400 ಪ್ರೋಸೆಸರ್ ಇರಲಿದೆ.
ಇದರ ಡಿಸ್ಪ್ಲೇ ಟೈಪ್ ಡೈನಾಮಿಕ್ ಅಮೋಲೆಡ್ ಆಗಿದ್ದು, ಇದರ ರೆಸುಲ್ಯೂಷನ್ 1080 X 2340 ಫಿಕ್ಸೆಲ್ಸ್ ಇದ್ದೇನೆ. ಇದರ ಸ್ಕ್ರೀನ್ ಸೈಜ್ 6.02 ಇಂಚೆಸ್ ಇದೆ. ಇದರ ರಿಪ್ರೆಸ್ ರೇಟ್ 120Hz ಆಗಿದೆ. ಇದರ ಅಸ್ಪೆಕ್ಟ್ ರೇಶಿಯೋ 19.5:9 ಇದೆ.
Samsung Galaxy S24 5G Price in India:
ಉತ್ತಮ ಫೀಚರ್ಸ್ ಹಾಗೂ ಕ್ಯಾಮರಾ ಕ್ವಾಲಿಟಿಯನ್ನು ಹೊಂದಿರುವ ಕಾರಣ Samsung Galaxy S24 5G Price ದುಬಾರಿ ಎಂದುಕೊಂಡರೆ ತಪ್ಪಿಲ್ಲ. ಏಕೆಂದರೆ ಇದರ ಪ್ರೈಸ್ ₹79,999/– ಆಗಿದೆ.
ಇಲ್ಲಿ ನಾವು ಖರೀದಿಸುವಾಗ ಎರಡು ಆಪ್ಷನ್ ಇರುತ್ತದೆ.
8 GB + 256 GB Samsung Galaxy S24 5G ಖರೀದಿಸಿದರೆ ಇದರ ಪ್ರೈಸ್ ₹79,999/- ಆಗುತ್ತದೆ.
ಇನ್ನು 8 GB + 512 GB Samsung Galaxy S24 5G ಖರೀದಿಸಿದರೆ ಇದರ ಪ್ರೈಸ್ ₹89,999/- ಆಗುತ್ತದೆ.