ಎಲೆಕ್ಟ್ರಿಕಲ್ ವೆಹಿಕಲ್ ತಯಾರಿಕೆಯಲ್ಲಿ ಮುಂದಿರುವ Svitch ಕಂಪನಿಯೂ SVITCH CSR 762 ಎಲೆಕ್ಟ್ರಿಕಲ್ ಬೈಕ್ ಅನ್ನು ಲಾಂಚ್ ಮಾಡಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದರ ಸ್ಟೈಲಿಶ್ ಲುಕ್ ಹಾಗೂ ಡಿಸೈನ್ ಎಲ್ಲರನ್ನು ಆಕರ್ಷಿಸುವಂತಿದೆ. ಲಿ-ಅಯಾನ್ (li-ian) ಬ್ಯಾಟರಿ ಟೈಪ್ ಹೊಂದಿರುವ ಈ ಬೈಕ್ 3.6 Kwh ಬ್ಯಾಟರಿ ಕೆಪ್ಯಾಸಿಟಿಯನ್ನು ಹೊಂದಿದೆ.
CSR 762 Launch Date:
SVITCH CSR 762 ಲಾಂಚ್ ಆಗಿದೆಯೋ ಇಲ್ಲವೋ? ಅನೌನ್ಸ್ ಡೇಟ್ ಫಿಕ್ಸ್ ಆಗಿದೆಯಾ? ಎಂಬೆಲ್ಲ ಗೊಂದಲ ಬೇಡ. ಏಕೆಂದರೆ SVITCH CSR 762 ಈಗಾಗಲೇ ಲಾಂಚ್ ಆಗಿದೆ ಜೊತೆಗೆ ಎಲೆಕ್ಟ್ರಿಕಲ್ ವೆಹಿಕಲ್ ಪ್ರಿಯರಲ್ಲಿ ತುಂಬಾ ಜನ ಖರೀದಿಸಿ ಈಗಲೇ ರಸ್ತೆಗಳಲ್ಲಿ ಮಿಂಚುತ್ತಿದ್ದಾರೆ.
SVITCH CSR 762 Specification:
ಸ್ವೀಚ್ ಕಂಪನಿ ಹೇಳಿರುವ ಪ್ರಕಾರ SVITCH CSR 762 ಬೈಕ್ ಕೆಂಪು(Scarlet Red), ಕಪ್ಪು(Black Diamond) ಹಾಗೂ ಕಂದು(Molten Mercury) ಬಣ್ಣಗಳಲ್ಲಿ ಲಭ್ಯವಿದೆ. ಜೊತೆಗೆ ಕಾರ್ಬನ್ ಸ್ಟೀಲ್ ಸ್ಕೆಲೀಟನ್ ಫ್ರೇಮ್ ಹೊಂದಿದೆ ಹಾಗೂ 150KG ತೂಕ, 200KG ಭಾರವನ್ನು ಸಹಿಸಲು ಸಮರ್ಥವಾಗಿದೆ. ಪ್ರಕಾಶಮಾನವಾದ LED ಹೆಡ್-ಲೈಟ್ ಹೊಂದಿದ್ದು ಕತ್ತಲೆಯಲ್ಲಿ ಬೈಕ್ ಓಡಿಸುವಾಗ ಉತ್ತಮ ಬೆಳಕನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ 5 ಇಂಚು TFT ಡಿಸ್ಪ್ಲೇ ಹೊಂದಿದೆ. ಇನ್ನು ಬ್ಲೂಟ್ಯೂತ್ ಮತ್ತು ವೈಫೈ ಜೊತೆಗೆ ಮೊಬೈಲ್ ಕನೆಕ್ಟಿವಿಟಿ, ಇಂಟರ್ನೆಟ್ ಕನೆಕ್ಟ್ಷನ್, ಸ್ಪೀಡೋ-ಮೀಟರ್, ಓಡೋಮೀಟರ್ ಹಾಗೂ ಟ್ರಿಪ್-ಮೀಟರನ್ನು ಒಳಗೊಂಡಿದೆ. ಕಾಲ್ ಹಾಗೂ SMS ಅಲರ್ಟ್, USB ಚಾರ್ಜಯಿಂಗ್ ವ್ಯವಸ್ಥೆ, ಮ್ಯೂಸಿಕ್ ಕೇಳಲು ಹಾಗೂ ಕಂಟ್ರೋಲ್ ಮಾಡುವ ಸೌಲಭ್ಯ ಸಹ ಇದು ಒಳಗೊಂಡಿದೆ.
SVITCH CSR 762 ಬೈಕ್ PMS DC ಮೋಟಾರ್ ಜೊತೆಗೆ ಸೆಂಟ್ರಲ್ ಡ್ರೈವ್ ಸಿಸ್ಟಮ್ ಸಹ ಹೊಂದಿದೆ. ಹಾಗೆ 2 ಬ್ಯಾಟರಿಯನ್ನು ಹೊಂದಿದ್ದು ಸ್ಟಾರ್ಟ್ ಮಾಡಲು ಪುಶ್ ಬಟನ್ ಸಹ ಇದೆ. 110Km/Hr ಟಾಪ್ ಸ್ಪೀಡ್ ಹೊಂದಿರುವ ಇದನ್ನು ಒಮ್ಮೆ ಕಂಪ್ಲೀಟ್ ಚಾರ್ಜ್ ಮಾಡಿದರೆ 160Km ಅಲ್ಲಿಯವರೆಗೆ ಹೋಗಬಹುದಾಗಿದೆ. ಆಗಲೇ ಹೇಳಿದ ಹಾಗೆ 3.6kwh ಬ್ಯಾಟರಿ ಕೆಪ್ಯಾಸಿಟಿ ಹೊಂದಿದೆ ಹಾಗೂ 3Kwh ಮೋಟಾರ್ ಪವರ್ ಒಳಗೊಂಡಿದೆ. ಕಾಂಬಿ ಬ್ರೇಕ್ ಸಿಸ್ಟಮ್ (combi break system) ಹೊಂದಿರುವ ಈ ಬೈಕ್ 300mm ಫ್ರಂಟ್ ಬ್ರೇಕ್ ಡೈಯಮೀಟರ್ ಮತ್ತು 280mm ರೇರ್ ಬ್ರೇಕ್ ಡೈಯಮೀಟರ್ ಒಳಗೊಂಡಿದೆ. ಟ್ಯೂಬ್-ಲೆಸ್ ಟೈರ್ ಆಗಿರುವುದರಿಂದ ಪಂಕ್ಚರ್ ಆಗೋ ಸಮಸ್ಯೆ ಇಲ್ಲ.
SVITCH CSR 762 Price:
ಎಲೆಕ್ಟ್ರಿಕಲ್ ಬೈಕ್ ಆದ ಕಾರಣ ಅಪಾರ ಫೀಚರ್ಸ್ ಒಳಗೊಂಡಿರುವ SVITCH CSR 762 Price ಬಗ್ಗೆ ಹೇಳುವುದಾದರೆ ಈ ಬೈಕ್ 1,89,999/- ರೂಪಾಯಿ ಬೆಲೆ ಹೊಂದಿದೆ. ಜೊತೆಗೆ EMI ಒಪ್ಶನ್ ಸಹ ಇದೆ.
ಸ್ಟೈಲಿಶ್ ಎಲೆಕ್ಟ್ರಿಕಲ್ ಬೈಕ್ ಖರೀದಿಸಲು ಯೋಚಿಸುತ್ತಿರುವವರು SVITCH CSR 762 ಬೈಕಿನ ಕಡೆ ಒಮ್ಮೆ ನೋಡಬಹುದಾಗಿದೆ.