Tata IPL 2024 ಹಬ್ಬ ಮುಂದಿನ ತಿಂಗಳು ಅಂದರೆ ಮಾರ್ಚ್ 22ರಿಂದ ಶುರುವಾಗಲಿದೆ. ಎಷ್ಟೋ ಅಭಿಮಾನಿಗಳು ಇದಕ್ಕಾಗಿ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ IPL ಫಸ್ಟ್ ಮ್ಯಾಚ್ ಬಿಗ್ ರೈವಲ್ಸ್ ಆಗಿರುವ ಬೆಂಗಳೂರು ಹಾಗೂ ಚೆನ್ನೈ ನಡುವೆ ನಡೆಯಲಿದೆ. ಈ RCB vs CSK ಮ್ಯಾಚ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
IPL ಫಸ್ಟ್ ಮ್ಯಾಚ್ RCB VS CSK:
ಆಗಲೇ ತಿಳಿಸಿದ ಹಾಗೆ ಈ ಬಾರಿಯ IPL ಫಸ್ಟ್ ಮ್ಯಾಚ್ ಅಂದರೆ ಉದ್ಘಾಟನಾ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಮಾರ್ಚ್ 22 ರಂದು ನಡೆಯುವ ಈ ಪಂದ್ಯ ಎಮ್ಎ ಚಿದಂಬರಮ್ ಸ್ಟೇಡಿಯಂ ಅಲ್ಲಿ ನಡೆಯಲಿದೆ. ಇದು ಉದ್ಘಾಟನಾ ಪಂದ್ಯವಷ್ಟೇ ಅಲ್ಲದೆ RCB VS CSK ನಡುವಿನ ಹೈ ವೋಲ್ಟೇಜ್ ಪಂದ್ಯವಾಗಿರುವುದರಿಂದ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳು ಬಹು ಹೆಚ್ಚಿನ ಪ್ರಮಾಣದಲ್ಲಿ ಬರುವ ಸಾಧ್ಯತೆ ಇದೆ.
Tata IPL 2024:
ಐಪಿಎಲ್ (IPL) ವಿಶ್ವದ ಅತಿ ದೊಡ್ಡ ಕ್ರಿಕೆಟ್ ಪ್ರೀಮಿಯಂ ಲೀಗ್ ಆಗಿದೆ. ಬಿಸಿಸಿಐಗೆ ಅತಿ ಹೆಚ್ಚು ಆದಾಯ ತಂದುಕೊಡುವ ಮೂಲ ಸಹ IPL ಆಗಿದೆ. ಇದರ ಓಪನಿಂಗ್ ಅನ್ನು ಬಿಸಿಸಿಐ ಭರ್ಜರಿ ಆಗಿ ನಡೆಸುತ್ತದೆ. ಇದಕ್ಕಾಗಿ ಬಿಸಿಸಿಐ ನಾನಾ ನಟ ನಟಿಯರಲ್ಲದೆ ಫೇಮಸ್ ಗಾಯಕರನ್ನು ಕರೆತಂದು ಅವರ ಡಾನ್ಸ್ ಹಾಗೂ ಸಿಂಗಿಂಗ್ ಮೂಲಕ IPL ಉದ್ಘಾಟನೆ ಮಾಡಿಸುತ್ತದೆ.
ಈ ಬಾರಿ WOMENS IPL ಸಹ ಇರಲಿದ್ದು ಅದು ಈಗಾಗಲೇ ಆರಂಭವಾಗಿದೆ.
ಐಪಿಎಲ್ 2024 ರ ಪ್ರಶಸ್ತಿಗಾಗಿ 10 ತಂಡಗಳ ನಡುವೆ ಬಿಗ್ ಫೈಟ್ ನಡೆಯಲಿದ್ದು, ಯಾರಿಗೆ ಈ ಬಾರಿಯ ಕಪ್ ಒಲಿಯಲಿದೆ ಎಂದು ಅಭಿಮಾನಿಗಳು ಕಾಯುತಿದ್ದಾರೆ. ಈ ಸಲ ಕಪ್ ನಮ್ದೇ ಎಂದು RCB ಅಭಿಮಾನಿಗಳು ಈ ವರ್ಷದಲ್ಲಿ ಟ್ರೋಫಿ ಗೆಲ್ಲುವ ಭರವಸೆಯಲ್ಲಿದ್ದಾರೆ.
ಐಪಿಎಲ್ ಅಲ್ಲಿ ಆಡುವ ತಂಡಗಳೆಂದರೆ:
1. ಚೆನ್ನೈ ಸೂಪರ್ ಕಿಂಗ್ಸ್
2. ಡೆಲ್ಲಿ ಕ್ಯಾಪಿಟಲ್ಸ್
3. ಗುಜರಾತ್ ಟೈಟನ್ಸ್
4. ಕೋಲ್ಕತ್ತಾ ನೈಟ್ ರೈಡರ್ಸ್
5. ಲಕ್ನೌ ಸೂಪರ್ ಜೆನ್ಟ್ಸ್
6. ಮುಂಬೈ ಇಂಡಿಯನ್ಸ್
7. ಪಂಜಾಬ್ ಕಿಂಗ್ಸ್
8. ರಾಜಸ್ಥಾನ್ ರಾಯಲ್ಸ್
9. ರಾಯಲ್ ಚಾಲೆಂಜರ್ಸ್ ಬೆಂಗಳೂರು
10. ಸನ್ ರೈಸರ್ಸ್ ಹೈದೆರಾಬಾದ್