TVS Raider 125 : ಸ್ಟೈಲಿಶ್ ಲುಕ್ ಬೈಕ್ ಇದರ ಬೆಲೆ ಹೇಗಿದೆ.?

TVS RAIDER 125
______TVS RAIDER 125

ತನ್ನ ಅದ್ಭುತ ಸ್ಪೋರ್ಟ್ ಬೈಕ್ ಲುಕ್ ಹಾಗೂ ಕಡಿಮೆ ಪ್ರೈಸಿಂಗ್ ಇಂದಾಗಿ ಭಾರತದ ಸ್ಪೋರ್ಟ್ಸ್ ಬೈಕ್ ಪ್ರಿಯರ ನೆಚ್ಚಿನ ಬೈಕ್ ಆಗಿ TVS Raider 125­ ಮುನ್ನುಗ್ಗುತ್ತಿದೆ . ಯಂಗ್ ಪೀಪಲ್ ಇಷ್ಟಪಡುವ ರೀತಿ ಈ ಸ್ಪೋರ್ಟ್ ಬೈಕನ್ನು ಡಿಸೈನ್ ಮಾಡಲಾಗಿದೆ. ಜೊತೆಗೆ ರಸ್ತೆಯಲ್ಲಿ ಹೋಗುವಾಗ ಇದೊಂದು ಅದ್ಭುತ ಲುಕ್ಕನ್ನು ನಮಗೆ ಕೊಡುವುದು ಸುಳ್ಳಲ್ಲ. 123Kg ಕರ್ಬ್ ತೂಕ ಹೊಂದಿರುವ ಈ ಬೈಕ್ 780mm ಸೀಟ್ ಹೈಟ್ ಹೊಂದಿದೆ.

TVS Raider 125 Engine :

ಇನ್ನು TVS Raider 125 engine ಬಗ್ಗೆ ಮಾತಾಡುವುದಾದರೆ, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಇಂಜಿನ್ ಆಗಿದ್ದು 124.8 ಸಿಸಿ ಎಂಜಿನ್ ಕೆಪ್ಯಾಸಿಟಿ ಹೊಂದಿದೆ. ಜೊತೆಗೆ ಈ ಬೈಕ್ 10 ಲೀಟರ್ ಫ್ಯೂಲ್ ಟ್ಯಾಂಕ್ ಕೆಪ್ಯಾಸಿಟಿಯನ್ನು ಹೊಂದಿದೆ. ಇದರ ಮ್ಯಾಕ್ಸಿಮಮ್ ಪವರ್ 7500 rpm ಅಲ್ಲಿ 11.2 bhp ಇದ್ದು, ಮ್ಯಾಕ್ಸಿಮಮ್ ಟಾರ್ಕ್ಯೂ(Torque) 6000 rpm ಅಲ್ಲಿ 11.2 Nm ಇದೆ. ಇದರಲ್ಲಿ 5 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಇದೆ. ಇನ್ನು 5 ಗೇರ್ ಹೊಂದಿರುವ ಈ ಬೈಕಿನ ಗೇರ್ ಚೇಂಜಿಂಗ್ ಪ್ಯಾಟರ್ನ್ ಮೊದಲನೆಯ ಗೇರ್ ಡೌನ್ ಆಗಿದ್ದು ಉಳಿದ 4 ಗೇರ್ ಅಪ್ ಆಗಿದೆ.

TVS Raider 125 Mileage :

ಸ್ಪೋರ್ಟ್ಸ್ ಬೈಕ್ ಅಂದ ತಕ್ಷಣ ಎಲ್ಲಾ ಬೈಕ್ ತುಂಬಾ ಕಡಿಮೆ ಮೈಲೇಜ್ ಕೊಡುತ್ತೆ ಅಂತ ಎಲ್ಲರು ಹೇಳುತ್ತಾರೆ ಆದರೆ ಇಲ್ಲಿ  TVS Raider 125 Mileage ತನ್ನ ಮೈಲೇಜ್ ಇಂದ ಇದನ್ನು ಸುಳ್ಳು ಎಂದು ಸಾಬೀತುಪಡಿಸಿದೆ. ಇದರ ಮೈಲೇಜ್ ಬಗ್ಗೆ ಹೇಳುವುದಾದರೆ 56.7 kmpl ಮೈಲೇಜ್ ಕೊಡುತ್ತದೆ. ಜೊತೆಗೆ ಇದರ ರೈಡಿಂಗ್ ರೇಂಜ್ 570 Km ಇದ್ದು ಇದರ ಟಾಪ್ ಸ್ಪೀಡ್ 99 Kmph ಆಗಿದೆ.

TVS Raider 125 Specifications :

ಪ್ರೈಸ್ ಕಡಿಮೆ ಇದ್ದರೂ ಸಹ TVS Raider 125 Specification ಅದ್ಬುತವಾಗಿದೆ. ಇದರ ಸಸ್ಪೆನ್ಷನ್ ಬಗ್ಗೆ ಹೇಳುವುದಾದರೆ ಟೆಲ್ಸ್ಕಾಫಿಕ್ ಅನ್ನು ಫ್ರಂಟ್ ಸಸ್ಪೆಂನ್ಶನ್ ಹಾಗೂ ಮೋನೋಶೋಕ್ ಅನ್ನು ರೇರ್ ಸಸ್ಪೆಂನ್ಶನ್ ಆಗಿ ಹೊಂದಿದೆ. ಇದರಲ್ಲಿ SBT ಬ್ರೇಕಿಂಗ್ ಸಿಸ್ಟಮ್ ಇದ್ದು ಡಿಸ್ಕ್ ಫ್ರಂಟ್ ಬ್ರೇಕ್ ಮತ್ತು ಡ್ರಮ್ ರೇರ್ ಬ್ರೇಕ್ ಹೊಂದಿದೆ. ಇದರ ಫ್ರಂಟ್ ಬ್ರೇಕ್ ಸೈಜ್ 240 mm ಮತ್ತು ರೇರ್ ಬ್ರೇಕ್ ಸೈಜ್ 130 mm ಇದೆ.

17 ಇಂಚ್ ಫ್ರಂಟ್ ಮತ್ತು ರೇರ್ ವೀಲ್ ಸೈಜ್ ಹೊಂದಿದ್ದು, ಟ್ಯೂಬ್-ಲೆಸ್ ಟೈಯರ್ ಬೈಕ್ ಆಗಿದೆ.ಅಷ್ಟೇ ಅಲ್ಲದೆ ಚಸ್ಸಿಸ್ ಟೈಪ್ ಸಿಂಗಲ್ ಕ್ರ್ಯಾಡಲ್ ಟ್ಯೂಬಲರ್ ಫ್ರೇಮ್ ಆಗಿದೆ. ಜೊತೆಗೆ ಇದರ ಬೋರ್ 53.5 mm ಮತ್ತು ಸ್ಟ್ರೋಕ್ 55.5 mm ide. ಇದರ ಕಂಪ್ರೆಷನ್ ರೇಶಿಯೋ 10.3:1 ಇದೆ.

TVS Raider 125 Features :

ನಾವು TVS Raider 125 Features ಬಗ್ಗೆ ನೋಡುವುದಾದರೆ ಇಲ್ಲಿ ನಮಗೆ ಡಿಜಿಟಲ್ ಕಲರ್ ಇಂಸ್ಟ್ರುಮೆಂಟಲ್ ಕ್ಲಸ್ಟರ್ ಸಿಗುತ್ತದೆ. ಜೊತೆಯಲ್ಲಿ TVS Raider 125 ಡಿಜಿಟಲ್ ಓಡೋಮೀಟರ್, ಡಿಜಿಟಲ್ ಸ್ಪೀಡೋಮೀಟರ್ ಡಿಜಿಟಲ್ ಟ್ಯಾಚೋಮೀಟರ್ ಹಾಗೂ ಡಿಜಿಟಲ್ ಟ್ರಿಪ್-ಮೀಟರ್ ಸಹ ಹೊಂದಿದೆ. ಇನ್ನೂ ಇದರ ಟಾಪ್ ವೆರಿಯೆಂಟ್ ಅಲ್ಲಿ TFT ಡಿಸ್ಪ್ಲೇ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ ಸಹ ಸಿಗಲಿದೆ.

TVS Raider 125 ಅಲ್ಲಿ LED ಹೆಡ್-ಲೈಟ್, LED ಬ್ರೇಕ್/ಟೈಲ್ ಲೈಟ್, ಹಾಲೋಜನ್ ಬಲ್ಬ್ (Halogen Bulb) ಟರ್ನ್ ಸಿಗ್ನಲ್, ಪಾಸ್ ಲೈಟ್ ಲಭ್ಯವಿದೆ.

TVS Raider 125 Price:

ಇಷ್ಟೆಲ್ಲ ಫೀಚರ್ಸ್ ಹೊಂದಿರುವ TVS Raider 125 price ಬಗ್ಗೆ ನೋಡುವುದಾದರೆ, ಇದರ ಪ್ರೈಸ್ ಎಕ್ಸ್-ಶೋರೂಮ್ ಅಲ್ಲಿ ₹97,054/- ಇಂದ ಶುರುವಾಗಿ ₹1,06,573/- ಅಲ್ಲಿಯವರೆಗೆ ಸಹ ಇದೆ.

ನಿಮಗೆ ಇದರ ಡಿಸೈನ್ ಹಾಗೂ ಫೀಚರ್ಸ್ ಇಷ್ಟವಾಗಿದ್ದು ಹಾಗೂ ನಿಮ್ಮ ಬಜೆಟ್ ಇದಕ್ಕೆ ಸರಿ ಹೊಂದುತ್ತಿದ್ದಾರೆ ನೀವು ನೋಡಬಹುದಾಗಿದೆ.

Leave a comment

Exit mobile version