UI Movie New Poster ನೋಡಿ!

UI Movie Updates
ಯುಐ ಮೂವಿ ಪೋಸ್ಟರ್

ತಮ್ಮ ಮುಂದಿನ ಚಲನಚಿತ್ರವಾದ UI movie ಮೇಲೆ ಹೈಪ್ ಅನ್ನು ಹೆಚ್ಚು ಮಾಡುತ್ತಿರುವ ಸೂಪರ್ ಸ್ಟಾರ್ ಉಪೇಂದ್ರ ಅವರು ಈಗ ಫಿಲಂ ನ ಇನ್ನೊಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಮೊದಲು UI Kannada Movieಯ ಒಂದೊಂದು ಪೋಸ್ಟರ್ ಬಿಡುಗಡೆಗೊಳಿಸುತ್ತಿದ್ದ ಉಪೇಂದ್ರ ಅವರು ನಂತರ ಅಭಿಮಾನಿಗಳ ಒತ್ತಾಯದ ಮೇರೆಗೆ UI teaser ಅನ್ನು ಲಾಂಚ್ ಮಾಡಿದರು. ಸರಿ, ಟೀಸರ್ ಅನ್ನು ನೋಡೋಣ ಎಂದು ಯೌಟ್ಯೂಬ್ ಅಲ್ಲಿ UI Teaser ಓಪನ್ ಮಾಡಿದವರಿಗೆ ಆಶ್ಚರ್ಯ ಕಾದಿತ್ತು, UI teaser ಅಲ್ಲಿ ಯಾವುದೇ ವಿಡಿಯೋ ಇರದೆ, ಕೇವಲ ಆಡಿಯೋ ಟೀಸರ್ ರಿಲೀಸ್ ಮಾಡಿದ್ದರು. ಆಗ ಎಲ್ಲರಿಗೂ ನೆನಪಾದದ್ದು ಇದು ಉಪೇಂದ್ರ ಸ್ಟೈಲ್ Upendra UI Movie (ಉಪೇಂದ್ರ ಯುಐ ಮೂವಿ) ಎಂದು.

ಇದಾದ ನಂತರ ಕೆಲವು ಪೋಸ್ಟರ್ ಅನ್ನು ರಿಲೀಸ್ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ ಅವರು ನಂತರ ಯುಐ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಿದರು. UI first look teaser ನೋಡಿದವರು ಇದೊಂದು ರೋಮಾಂಚನಕಾರಿ UI world (ಯುಐ ಜಗತ್ತು) ಎಂದು ಅರ್ಥಮಾಡಿಕೊಂಡರು.

UI New Poster (ಯುಐ ನ್ಯೂ ಪೋಸ್ಟರ್):


UI new poster ಫೆಬ್ರವರಿ 5 ರಂದು ಉಪೇಂದ್ರ ಅವರು ತಮ್ಮ ಆಫೀಷಿಯಲ್ ಇನ್ಸ್ಟಾಗ್ರಾಮ್ ಅಕೌಂಟಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟರ್ ಅಲ್ಲಿ ಉಪೇಂದ್ರ ಅವರು ಡೆಡ್ಲಿ ಲುಕ್ ನೊಂದಿಗೆ ಚೂರಿಯೊಂದನ್ನು ಮುಖಕ್ಕೆ ಎದುರಾಗಿ ಹಿಡಿದಿದ್ದಾರೆ. ಪೋಸ್ಟರ್ ನೋಡಿದವರೆಲ್ಲ UI movie ನೆಕ್ಸ್ಟ್ ಲೇವಲ್ ಅಲ್ಲಿ ಮೂಡಿ ಬರುತ್ತದೆ ಎಂದು ಹೇಳುತ್ತಿದ್ದಾರೆ. ಪೋಸ್ಟರ್ ಕೆಳಗಡೆ ಉಪೇಂದ್ರ ಅವರು “Hold Your Excitement” (ನಿಮ್ಮ ಉತ್ಸಾಹವನ್ನು ಹಿಡಿದಿಟ್ಟುಕೊಳ್ಳಿ) ಎಂದು ಬರೆದುಕೊಂಡಿದ್ದಾರೆ.

UI Movie Team:

ಇನ್ನು ಯು ಐ ಮೂವಿ ಟೀಮ್ ಬಗ್ಗೆ ಹೇಳುವುದಾದರೆ ಉಪೇಂದ್ರ ಅವರು ಇದರ ಡೈರೆಕ್ಟರ್ ಹಾಗೂ ನಾಯಕ ನಟರಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೆನಸ್ ಎಂಟರ್ಟೈನರ್ಸ್ ಬ್ಯಾನರ್ ಅಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಜಿ. ಮನೋಹರನ್ – ಶ್ರೀಕಾಂತ್ ಕೆಪಿ ಅವರು ಪ್ರೊಡ್ಯೂಸ್ ಮಾಡಿದ್ದಾರೆ. ಇನ್ನು UI ಮೂವಿ ಮ್ಯೂಸಿಕ್ ಡೈರೆಕ್ಟರ್ ಶಿವಕುಮಾರ್ ಜೆ. ಆಗಿದ್ದು, ಈ ಮೂವಿ ಎಡಿಟರ್ ವಿಜಯ್ ರಾಜ್ ಬಿ.ಜಿ. ಆಗಿದ್ದಾರೆ

UI Movie Casting:

ಇನ್ನು ಯುಐ ಮೂವಿ ಅ ಕಾಸ್ಟಿಂಗ್ ಬಗ್ಗೆ ಮಾತನಾಡುವುದಾದರೆ  ಇದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆಯಲ್ಲಿ  ರೀಷ್ಮಾ ನಾನಯ್ಯ, ಸನ್ನಿ ಲಿಯೋನ್, ನಿಧಿ ಸುಬ್ಬಯ್ಯ, ಪಿ. ರವಿಶಂಕರ್, ಮುರಳಿ ಶರ್ಮಾ, ಸಾಧು ಕೋಕಿಲಾ , ಇಂದ್ರಜಿತ್ ಲಂಕೇಶ್ ಮುಂತಾದವರು ನಟಿಸಿದ್ದಾರೆ.

Ui Movie Release Date:

ಇನ್ನು UI movie release date ಬಗ್ಗೆ ಹೇಳುವುದಾದರೆ ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಅವರೇ UI movie release date ಯಾರಿಗೂ ತಿಳಿಯದ ಹಾಗೆ UI trailer release ಮಾಡಿದಾಗ ಅನೌನ್ಸ್ ಮಾಡುವ ಪ್ಲಾನ್ ಅಲ್ಲಿ ಇದ್ದಾರೆ. ಇದು ಉಪೇಂದ್ರ ಅವರ ಮೂವಿ ಆಗಿರುವುದರಿಂದ ಯಾವುದೇ ಉಹಾಪೋಹಗಳನ್ನು ಕೇಳಿದರೆ ಪ್ರಯೋಜನವಿಲ್ಲ. ಅವರು ಯಾರಿಗೂ ಊಹಿಸಲಾಗದಂತೆ ಎಲ್ಲಾ ಕೆಲಸವನ್ನು ಮಾಡುತ್ತಾರೆ.

Leave a comment

Exit mobile version