Vivo X100 Pro 5G ಐಫೋನ್ ಬೆಲೆಯಲ್ಲಿ ವಿವೋ ಮೊಬೈಲ್!

Vivo X100 Pro 5G

ಉತ್ತಮ ಕ್ವಾಲಿಟಿ ಕ್ಯಾಮೆರಾ ಫೋನ್ ಅನ್ನು ನೀಡುವ ವಿವೋ, ಈಗ ಐಫೋನ್ ಪ್ರೈಸ್ ಗೆ ಹತ್ತಿರವಾದ Vivo X100 Pro 5G ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿ ಎಲ್ಲರನ್ನು ನಿಬ್ಬೆರಗಾಗಿಸಿದೆ. ದುಬಾರಿ ಮೊಬೈಲ್ ಅಂದಮೇಲೆ ಅದರ ಕ್ಯಾಮೆರಾ ಹೇಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಇದೇ ವರ್ಷದ ಜನವರಿ 04ರಂದು Vivo X100 Pro 5G ಮೊಬೈಲ್ ಲಾಂಚ್ ಆಗಿದೆ. ಕೇವಲ ಕ್ಯಾಮೆರಾ ಮಾತ್ರವಲ್ಲದೆ ಇನ್ನು ಅನೇಕ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್ ಫೋನ್ ಎಲ್ಲರನ್ನು ಆಕರ್ಷಿಸಿಸುತ್ತಿದೆ.

Vivo X100 Pro 5G Price:

ಆಗಲೇ ಹೇಳಿದ ಹಾಗೆ ಈ ಮೊಬೈಲ್ ಕಡಿಮೆ ಬೆಲೆಯಲ್ಲಂತು ಲಭ್ಯವಿಲ್ಲ. ಇದರ ಬೆಲೆ 89,999/- ರೂಪಾಯಿ ಆಗಿದೆ. ಕ್ಯಾಮೆರಾ ಫೋನ್ ಎಂದು ಕರೆಸಿಕೊಳ್ಳುವ ಈ ಮೊಬೈಲ್ ದುಬಾರಿ ಬೆಲೆಗೆ ಲಾಂಚ್ ಆಗಿ ಒಮ್ಮೆ ಯೋಚಿಸುವಂತೆ ಮಾಡಿದೆ. ದುಬಾರಿ ಆದರೂ ಸಹ ಇದರ ಫೀಚರ್ಸ್ ಬೆಲೆಗೆ ತಕ್ಕಂತೆ ಇದೆ.

Vivo X100 Pro Camera:

ಆಗಲೇ ಹೇಳಿದ ಹಾಗೆ ವಿವೋ ಮೊಬೈಲ್ ಅಂತ ಬಂದಾಗ ಕ್ಯಾಮೆರಾ ಬಗ್ಗೆ ಮತ್ತೊಂದು ಮಾತನಾಡುವ ಅವಶ್ಯಕತೆ ಇರುವುದಿಲ್ಲ. ಆ ರೇಂಜಿಗೆ ಕ್ಯಾಮೆರಾ ಫೋನ್ ಆಗಿದೆ ವಿವೋ ಸ್ಮಾರ್ಟ್ ಫೋನ್.

ಇಲ್ಲಿ Vivo X100 Pro camera ಬಗ್ಗೆ ಹೇಳುವುದಾದರೆ 50MP + 50MP + 50MP ತ್ರಿಬಲ್ ಕ್ಯಾಮೆರಾವನ್ನು ಹೊಂದಿದೆ.

ವಿಸ್ತಾರವಾಗಿ ಹೇಳಬೇಕೆಂದರೆ 50MP ಪ್ರೈಮರಿ ಕ್ಯಾಮೆರಾವು ವೈಡ್ ಆಂಗಲ್ ಕ್ಯಾಮೆರಾ ಆಗಿದ್ದು 23mm ಫೋಕಲ್ ಲೆಂತ್ ಹೊಂದಿದೆ.

ಇನ್ನೂ ಎರಡನೇಯದಾಗಿ 50MP ಸೆಕೆನ್ಡರಿ ಕ್ಯಾಮೆರಾ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಆಗಿದ್ದು 15mm ಫೋಕಲ್ ಲೆಂತ್ ಹಾಗೂ 2.7 ಸೇನ್ಸರ್ ಹೊಂದಿದೆ.

ಇನ್ನೂ ಮೂರನೇಯದು 50MP ಟೆರ್ಟಿಯರಿ ಕ್ಯಾಮೆರಾವು ಟೆಲಿಫೋಟೋ ಕ್ಯಾಮೆರಾ ಆಗಿದ್ದು 100mm ಫೋಕಲ್ ಲೆಂತ್, 2.0 ಸೆನ್ಸರ್, ಅಪ್ ಟು 4.3 ಒಫ್ಟಿಕಲ್ ಜೂಮ್ ಫೀಚರ್ಸ್ ಸಹ ಇದೆ.

ಒಟ್ಟಾರೆ ಹೇಳುವುದಾದರೆ ಉತ್ತಮ ಕ್ವಾಲಿಟಿ ಫೋಟೋ ತೆಗೆಯಲು ವಿಡಿಯೋ ತೆಗೆಯಲು ಸಹಾಯಕಾರಿಯಾಗಿದೆ.

ಇನ್ನೂ ಫ್ರಂಟ್ ಕ್ಯಾಮೆರಾ ವಿಚಾರಕ್ಕೆ ಬಂದರೆ 32MP ಸಿಂಗಲ್ ಪ್ರೈಮರಿ ಕ್ಯಾಮೆರಾ ಹೊಂದಿದ್ದು ಅದು ವೈಡ್ ಆಂಗಲ್ ಕ್ಯಾಮೆರವಾಗಿದೆ. 20mm ಫೋಕಲ್ ಲೆಂತ್ ಸಹ ಇದೆ. ಈ ಮೂಲಕ ಸೆಲ್ಫಿ ತೆಗೆಯಲು vivo X100 Pro ಉತ್ತಮ ಮೊಬೈಲ್ ಆಗಿದೆ.

Vivo X100 Pro Specification:

ಆಗಲೇ ಹೇಳಿದ ಹಾಗೆ ಕೇವಲ ಕ್ಯಾಮೆರಾ ಮಾತ್ರವಲ್ಲದೆ Vivo X100 pro ಅತ್ಯುತ್ತಮ ಫೀಚರ್ಸ್ ಸಹ ಒಳಗೊಂಡಿದೆ. ಈ ಮೊಬೈಲ್ ಮೀಡಿಯಾಟೆಕ್ ಡೈಮೆಂನ್ಸಿಟಿ 9300 (MediaTek Dimensity 9300) ಪ್ರೋಸೆಸ್ಸರ್ ಹೊಂದಿದ್ದು ಗೇಮ್ ಹಾಗೂ ಮಲ್ಟಿಪಲ್ ಆಪ್ಸ್ ಅನ್ನು ಒಟ್ಟಿಗೆ ಚಲಾಯಿಸಬಹುದಾಗಿದೆ. RAM ಬಗ್ಗೆ ಹೇಳುವುದಾದರೆ 16GB RAM ಹೊಂದಿದೆ. ಭರ್ಜರಿ 512GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಂದರೆ ಈ ಮೊಬೈಲ್ ಖರೀದಿಸಿದರೆ ಸ್ಟೋರೇಜ್ ಸಮಸ್ಯೆ ಇರೋದಿಲ್ಲ ಅನ್ನಿಸುತ್ತೆ. ಅದರ ಜೊತೆಗೆ 5400 mAh ಬ್ಯಾಟರಿ ಕೆಪ್ಯಾಸಿಟಿ ಹೊಂದಿದ್ದು ಇದಕ್ಕೆ ಲಿ-ಅಯಾನ್(li-ian) ಬ್ಯಾಟರಿ ಉಪಯೋಗಿಡಲಾಗಿದೆ. ಹಾಗೂ ಇದನ್ನು ಚಾರ್ಜ್ ಮಾಡಲು 100W ಟೈಪ್-ಸಿ ಕೇಬಲ್ ಚಾರ್ಜರ್ ಲಭ್ಯವಿದೆ. ಇದರ ಮೂಲಕ 50% ಚಾರ್ಜ್ ಅನ್ನು ಕೇವಲ 14 ನಿಮಿಷಗಳಲ್ಲಿ ಪೂರ್ತಿಗೊಳ್ಳಿಸಬಹುದು.

ಅಷ್ಟೇ ಅಲ್ಲದೆ Vivo X100 Pro 120Hz ರಿಪ್ರೆಸ್ ರೇಟ್ ಹೊಂದಿದೆ. ಜೊತೆಗೆ ಉತ್ತಮ ಕ್ವಾಲಿಟಿಯ ಅಮೋಲೆಡ್ ಡಿಸ್ಪ್ಲೇ (Amoled display) ಹೊಂದಿದೆ. ಇದರಿಂದ ಮೊಬೈಲಿನ ಕಲರ್ ಕ್ವಾಲಿಟಿ ಹೆಚ್ಚಾಗಿರುತ್ತದೆ. ಸದ್ಯಕ್ಕೆ ಇದು ಅಷ್ಟೆರಾಯಿಡ್ ಬ್ಲಾಕ್ (Asteroid Black) ಕಲರ್ ಅಲ್ಲಿ ಮಾತ್ರ ಲಭ್ಯವಿದೆ. ಇದರ ಇನ್ನಷ್ಟು ಫೀಚರ್ಸ್ ಬಗ್ಗೆ ತಿಳಿಯಲು ಕೆಳಗಿನ ಟೇಬಲ್ ನೋಡಿ.

FeatureSpecification
RAM16 GB
ProcessorMediaTek Dimensity 9300
Rear Camera50 MP + 50 MP + 50 MP
Front Camera32 MP
Battery5400 mAh
Display Size6.78 inches (17.22 cm)
Display TypeAMOLED
Resolution1260 x 2800 pixels
Aspect Ratio20:9
Pixel Density453 ppi
Screen to Body RatioCalculated: 89.87% Claimed by Brand: 93%
Bezel-less DisplayYes with punch-hole display
Touch ScreenCapacitive Touchscreen, Multi-touch
Refresh Rate120 Hz
DimensionsHeight: 164.05 mm Width: 75.28 mm Thickness: 8.91 mm
Weight225 grams
Build MaterialBack: Mineral Glass
ColorsAsteroid Black
WaterproofYes, Water resistant (up to 30 minutes in a depth of 1.5 meters), IP68
RuggednessDustproof
Battery TypeLi-ion
Wireless ChargingYes
Quick ChargingFlash, 100W: 50% in 14 minutes
USB Type-CYes
Internal Memory512 GB
Expandable MemoryNo
USB OTGYes

 

 

Leave a comment