West Indies Vs Australia:ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯಗಳ ಸರಣಿಯೂ ವೆಸ್ಟ್ ಇಂಡೀಸ್ ನ ಕಳಪೆ ಪ್ರದರ್ಶನದೊಂದಿಗೆ ಮುಕ್ತಾಯಗೊಂಡಿತು. ಹೌದು, ಫೆಬ್ರುವರಿ ಆರರಂದು ನಡೆದ ಈ ಪಂದ್ಯ ಕೇವಲ 6.5 ಓವರ್ನಲ್ಲಿ ಮುಕ್ತಾಯಗೊಂಡಿದೆ. ಅಂದರೆ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ನೀಡಿದ ಟಾರ್ಗೆಟನ್ನು ಕೇವಲ 6.5 ಓವರ್ನಲ್ಲಿ ಗಳಿಸಿ ರೋಚಕವಾಗಿ ಮೂರು ಏಕದಿನ ಪಂದ್ಯಗಳ ಸರಣಿಯ ಕೊನೆಯ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ.
West Indies Vs Australia-WI Score :
West Indies Vs Australia ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ 2.5 ಓವರಲ್ಲಿ ಕೆ ಓಟ್ಲೆ ಅವರ ವಿಕೆಟ್ ಅನ್ನು ಕಳೆದುಕೊಳ್ಳುವ ಮೂಲಕ ತನ್ನ ಸೋಲಿಗೆ ಮುನ್ನುಡಿಯನ್ನು ಬರೆದುಕೊಂಡಿತ್ತು. ವೆಸ್ಟ್ ಇಂಡೀಸ್ ನ ಮೂರು ಆಟಗಾರರು ಡಕ್ಕೌಟ್ಗೆ ಗುರಿಯಾದರೂ. ವೆಸ್ಟ್ ಇಂಡೀಸ್ ತಂಡದ ಸ್ಕೋರ್ ಬೋರ್ಡಲ್ಲಿ ಹೆಚ್ಚಿನ ರನ್ ಗಳಿಸಿದವರು ಎ . ಆತನಾಜ್. ಅವರ 32 ರನ್ ತಂಡದ ಸುಮಾರು ಅರ್ಧದಷ್ಟು ರನ್ನಾಗಿದೆ. ಇನ್ನು ಉಳಿದವರಲ್ಲಿ ಕೆ. ಕಾರ್ಟಿ 10 ರನ್ ಹಾಗೂ ಆರ್ ಚೇಸ್ ಅವರ 12 ರನ್ ಬಿಟ್ಟರೆ ಬೇರಾವ ಆಟಗಾರನು ಎರಡಂಕಿ ರನ್ನನ್ನು ಗಳಿಸಲಿಲ್ಲ. ವೆಸ್ಟ್ ಇಂಡೀಸ್ ನ ಧೂಳಿಪಟ ಮಾಡುವಲ್ಲಿ ಎಕ್ಸ್ ಬಾರ್ಟ್ಲೆಟ್ ಅವರದು ಮುಖ್ಯ ಪಾತ್ರವಾಗಿದೆ. ಇವರು 21 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ.
ಎಲ್. ಮೊರೀಶ್ ಹಾಗೂ ಆಡಮ್ ಝಂಫಾ ತಲಾ 2 ವಿಕೆಟ್ ಗಳಿಸಿದ್ದು, ಎಸ್. ಅಬೋಟ್ 1 ವಿಕೆಟ್ ಪಡೆದಿದ್ದಾರೆ. ಇನ್ನು ಉಳಿದ 1 ವಿಕೆಟ್ ರನ್ ಔಟ್ ಮೂಲಕ WI ಕಳೆದುಕೊಂಡಿದ್ದಾರೆ.
ಅಂದರೆ ಒಟ್ಟಾರೆಯಾಗಿ ವೆಸ್ಟ್ ಇಂಡೀಸ್ 24.1 ಓವರ್ ಅಲ್ಲಿ ಕೇವಲ 86 ರನ್ಸ್ ಗಳಿಸಿದ ನಂತರ ಆಲ್ ಔಟ್ ಆಯಿತು.
West Indies Vs Australia – AUS Score:
West Indies Vs Australia ಇನ್ನು ಆಸ್ಟ್ರೇಲಿಯಾ ವಿಷಯಕ್ಕೆ ಬಂದರೆ ಬೇಗ ಪಂದ್ಯ ಮುಗಿಸುವ ಗಡಿಬಿಡಿಯಲ್ಲಿ ಇದ್ದಂತೆ ಕಂಡು ಬಂದಿತ್ತು. ಏಕೆಂದರೆ ಬಿರುಸಿನ ಆಟವಾಡಿದ ಆಸ್ಟ್ರೇಲಿಯಾ ತಂಡ ಕೇವಲ 6.5 ಓವರ್ ಅಲ್ಲಿ 2 ವಿಕೆಟ್ ಕಳೆದುಕೊಂಡು ತನ್ನ ಗುರಿಯನ್ನು ಮುಟ್ಟಿತು.
ಆಸ್ಟ್ರೇಲಿಯಾ ಸ್ಕೋರಲ್ಲಿ ಜೆ. ಫ಼ಾರ್ಸೆರ್ ಮೇಕ್-ಗರ್ಕ್ ಅವರದು 41 ರನ್ಸ್ ಕೊಡುಗೆ ಇದೆ. ಇದಕ್ಕಾಗಿ ಅವರು ಕೇವಲ 18 ಎಸೆತವನ್ನು ಎದುರಿಸಿದರು. ಅವರು 41 ರನ್ಸ್ ಗಾಗಿ ಭರ್ಜರಿ 3 ಸಿಕ್ಸಸ್ ಹಾಗೂ 5 ಫೋರ್ಸ್ ಅನ್ನು ಬಾರಿಸಿದರು. ಇವರ ಆಟಕ್ಕೆ ಅಲ್ಜಾರಿ ಜೋಸೆಫ್ ತಡೆಯನ್ನೊಡ್ಡಿದರು.
ಅಷ್ಟೇ ಅಲ್ಲದೆ ಇಂಗ್ಲಿಷ್ ಸಹ ಭರ್ಜರಿ ಆಟ ಆಡಿದ್ದು 16 ಎಸೆತದಲ್ಲಿ 35 ರನ್ಸ್ ಗಳಿಸಿ ಫೇವಿಲಿಯನ್ ಸೇರಿದರು.