Yamaha FZ-X : ಯಮಹದ ಹೊಸ ಬೈಕ್ ಲಾಂಚ್!

Yamaha FZ-X
Yamaha FZ-X

Yamaha FZ-X: ಭಾರತಕ್ಕೆ ಅತ್ಯುತ್ತಮ ಬೈಕ್ ಅನ್ನು ನೀಡುತ್ತಾ ಬಂದಿರುವ Yamaha ಈಗ ತನ್ನ ಇನ್ನೊಂದು ಹೊಸ ಬೈಕ್ ಅನ್ನು ಲಾಂಚ್ ಮಾಡಿದೆ.

ಹೌದು, Yamaha FZ-X ಬೈಕ್ ಲಾಂಚ್ ಮಾಡಿದ್ದೂ, ಈ ಬೈಕ್ ಉತ್ತಮ ಡಿಸೈನ್ ಅನ್ನು ಹೊಂದಿದ್ದು ನೋಡಲು ಆಕರ್ಷಕವಾಗಿದೆ.

  149ಸಿಸಿ ಇಂಜಿನ್ ಹೊಂದಿರುವ Yamaha FZ-X ಬೈಕ್ 135ಕೆಜಿ ಕರ್ಬ್ ತೂಕ ಹೊಂದಿದೆ. ಇನ್ನು ಇದರ ಲುಕ್ ಹಾಗೂ ಡಿಸೈನ್ ನೋಡುಗರ ಕಣ್ಮನ ತುಂಬುವಂತಿದೆ.

Yamaha FZ-X  Engine:

Yamaha FZ-X Engine ಬಗ್ಗೆ ಮಾತನಾಡುವುದಾದರೆ ಇದು 149ಸಿಸಿ ಸಿಂಗಲ್ ಸಿಲೆಂಡರ್ ಏರ್ ಕೂಲ್ಡ್ ಇಂಜಿನ್ ಹೊಂದಿದೆ. ಇದರ ಫ್ಯೂಲ್ ಟ್ಯಾಂಕ್ ಕೆಪ್ಯಾಸಿಟಿ 10 ಲೀಟರ್ ಆಗಿದೆ. Yamaha FZ-X ಮಾನ್ಯುಯಲ್ ಟ್ರಾನ್ಸಾಮಿಷನ್ ಹೊಂದಿದ್ದು 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಜೊತೆಗೆ ಇದರಲ್ಲಿ ಸೆಲ್ಫ್ ಸ್ಟಾರ್ಟ್ ಒಪ್ಶನ್ ಇದೆ.

ಇನ್ನು Yamaha FZ-X ನ ಮ್ಯಾಕ್ಸಿಮಮ್ ಪವರ್ ಬಂದು 7250 RPM ಅಲ್ಲಿ 12.4 PS ಇದ್ದು, ಇದರ ಮ್ಯಾಕ್ಸಿಮಮ್ ಟಾರ್ಕ್ಯೂ 5500 RPM ಅಲ್ಲಿ 13.3 Nm ಇದೆ.

ಅಷ್ಟೇ ಅಲ್ಲದೆ Yamaha FZ-X ಬೈಕ್ 45ಕೀ.ಮೀ.ಪರ್ ಲೀಟರ್ ಮೈಲೇಜ್ ಹೊಂದಿದ್ದು ಒಂದು ಉತ್ತಮ ರೇಂಜಿನ ಮೈಲೇಜ್ ಆಗಿದೆ.

Yamaha FZ-X Specification:

ಇನ್ನು Yamaha FZ-X Specification ಬಗ್ಗೆ ಹೇಳುವುದಾದರೆ Yamaha FZ-X ಫ್ರಂಟ್ ಬ್ರೇಕ್ ಹಾಗೂ ರೇರ್ ಬ್ರೇಕ್ ಆಗಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಅಷ್ಟೇ ಅಲ್ಲದೆ ಇದರ ಫ್ರಂಟ್ ಬ್ರೇಕ್ ಡಯಾಮೀಟರ್ 282mm ಇದ್ದರೆ, ಇದರ ರೇರ್ ಬ್ರೇಕ್ ಡಯಾಮೀಟರ್ 220mm ಇದೆ.

ಅಲ್ಲೋಯ್ ವೀಲ್ಸ್ ಹೊಂದಿರುವ ಈ ಬೈಕ್ ರೇಡಿಯಲ್ ಟ್ಯೂಬ್-ಲೆಸ್ ಟೈಯರ್ ಅನ್ನು ಸಹ ಹೊಂದಿದೆ.

Yamaha FZ-X ಸಸ್ಪೆಂನ್ಷನ್ ಬಗ್ಗೆ ಹೇಳುವುದಾದರೆ ಇದರ ಫ್ರಂಟ್ ಸಸ್ಪೆಂನ್ಷನ್ ಟೆಲ್ಸ್ಕಾಫಿಕ್ ಫೋರ್ಕ್, 41mm ಇನ್ನರ್ ಟ್ಯೂಬ್ ಡಯಾಮೀಟರ್  ವಿಥ್ ಫೋರ್ಕ್ ಬೂಟ್ ಆಗಿದ್ದು, ಇದರ ರೇರ್ ಸಸ್ಪೆಂನ್ಷನ್ 7 ಸ್ಟೆಪ್ ಅಡ್ಜಸ್ಟಬಲ್ ಮೋನೋಕ್ರಾಸ್ ಸಸ್ಪೆಂನ್ಶನ್ ಆಗಿದೆ.

 ಅಷ್ಟೇ ಅಲ್ಲದೆ ಇದರಲ್ಲಿ LED ಹೆಡ್-ಲೈಟ್, LED ಟೈಲ್ ಲೈಟ್, LED ಟರ್ನ್ ಸಿಗ್ನಲ್ ಲ್ಯಾಂಪ್ ಅನ್ನು ಹೊಂದಿದೆ.

Yamaha FZ-X ನ ಅಗಲ 785 mm ಇದ್ದು, ಉದ್ದ 2020 mm ಹಾಗೂ ಎತ್ತರ 1115 mm ಇದೆ. ಇನ್ನು ಇದರ ಕರ್ಬ್ ತೂಕ 139 ಕೆಜಿ ಇರಲಿದೆ.

Yamaha FZ-X Features:

Yamaha FZ-X Features ಬಗ್ಗೆ ನೋಡುವುದಾದರೆ ಇದರಲ್ಲಿ ಡಿಜಿಟಲ್ ಇಂಸ್ಟ್ರುಮೆಂಟಲ್ ಕಂನ್ಸೋಲ್ ಇರಲಿದ್ದು, ಜೊತೆಗೆ ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಓಡೋಮೀಟರ್, ಡಿಜಿಟಲ್ ಟ್ರಿಪ್ ಮೀಟರ್ ಇರಲಿದೆ. ಜೊತೆಗೆ ಇದರಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಒಪ್ಶನ್ ಇರಲಿದ್ದು, ಜೊತೆಗೆ ಇಲ್ಲಿ ನಿಮಗೆ ಕಾಲ್ ಹಾಗೂ SMS ಒಪ್ಶನ್ ಇದರಲ್ಲಿ ಸಿಗಲಿದೆ. ಅಷ್ಟೇ ಅಲ್ಲದೆ ಡಿಜಿಟಲ್ ಕ್ಲಾಕ್, ಫ್ಯೂಲ್ ಇಂಡಿಕೇಟರ್ ಜೊತೆಗೆ ಮೊಬೈಲ್ ಅಪ್ಲಿಕೇಷನ್ ಒಪ್ಶನ್ ಸಹ ಸಿಗಲಿದೆ.

Yamaha FZ-X Verients:

Yamaha FZ-X 2 ವೆರಿಯೆಂಟ್ ಅಲ್ಲಿ ಬರಲಿದ್ದು ಅವು ಯಾವುದೆಂದರೆ

1. Yamaha FZ-X matte copper

2. Yamaha FZ-X dark matte blue matte ಮತ್ತು matte Titan.

ಇದನ್ನು ಓದಿ : Hero Xtreme 125R

Yamaha FZ-X Price:

Yamaha FZ-X Price ಬಗ್ಗೆ ಹೇಳುವುದಾದರೆ ಎಕ್ಸ್ ಶೋರೂಮ್ ಅಲ್ಲಿ ಇದರ ಬೆಲೆ ₹1.37 ಲಕ್ಷದಿಂದ ₹1.38 ಲಕ್ಷದವರೆಗೆ ಇದೆ.

 Yamaha FZ-X ಫೀಚರ್ಸ್ ನಿಮಗೆ ಇಷ್ಟವಾಗಿದ್ದು ಜೊತೆಗೆ ಬಜೆಟ್ ಫ್ರೆಂಡ್ಲಿ ಎನ್ನಿಸಿದರೆ ನೀವು ಖರೀದಿಸಬಹುದು.

Leave a comment